ಬೆಂಗಳೂರು: ರಾಜ್ಯದಲ್ಲಿ ಇಂದು 10745 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,48,157 ಆರ್​ಟಿಪಿಸಿಆತಗ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,58,902 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು ರಾಜ್ಯದಲ್ಲಿ 48,781 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಈವರೆಗೆ ರಾಜ್ಯದಲ್ಲಿ ಸೋಂಕಿಗೊಳಗಾದವರ ಸಂಖ್ಯೆ 18,38,885ಕ್ಕೆ ಏರಿಕೆಯಾಗಿದೆ.

ಇಂದು 28,623 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಈವರೆಗೆ ಒಟ್ಟು 12,84,420 ಮಂದಿ ಗುಣಮಖರಾದಂತಾಗಿದೆ. ಇಂದು ಒಂದೇ ದಿನ ಸೋಂಕಿಗೆ 592 ಸೋಂಕಿತರು ಸಾವನ್ನಪ್ಪಿದ್ದು ಈವರೆಗೆ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 17,804ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 5,36,641 ಆ್ಯಕ್ಟಿವ್ ಕೇಸ್​ಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

The post ಸೋಂಕಿತರ ಸಾವಿನ ಸಂಖ್ಯೆಯಲ್ಲಿಂದು ಗಣನೀಯ ಏರಿಕೆ.. 592 ಸಾವು appeared first on News First Kannada.

Source: newsfirstlive.com

Source link