ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪವೊಂದನ್ನ ಮಾಡಿದ್ದಾರೆ. ಸರ್ಕಾರ ಕೊರೊನಾದಿಂದ ಸಾವಿಗೀಡಾದ ಜನರ ನಿಜ ಲೆಕ್ಕವನ್ನು ಮುಚ್ಚಿಟ್ಟು, ಜನರಿಗೆ ಸುಳ್ಳು ಹೇಳುತ್ತಿದೆ ಅಂತಾ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಆರೋಪ ಏನು..? 

ಸರ್ಕಾರ ಕೊರೊನಾ ಇಂದ ಸಾವಿಗೀಡಾದ ಜನರ ನಿಜ ಲೆಕ್ಕವನ್ನು ಮುಚ್ಚಿಟ್ಟು, ಜನರಿಗೆ ಸುಳ್ಳು ಹೇಳುತ್ತಿದೆ. ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಬಿಡುಗಡೆ ಮಾಡುವ ಮೃತರ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಬಿಜೆಪಿ ಸರ್ಕಾರ ಅಗತ್ಯ ವೈದ್ಯಕೀಯ ಸೌಲಭ್ಯ ನೀಡಿದ್ದರೆ ಜನ ಹೀಗೆ ಸಾಯುವ ಸನ್ನಿವೇಶ ಬರುತ್ತಿತ್ತಾ?

ಶವಸಂಸ್ಕಾರ ಮಾಡಲು ಲಂಚ ಕೊಡಬೇಕು

ಇದಿಷ್ಟೇ ಅಲ್ಲದೇ ಶವ ಸಂಸ್ಕಾರ ಮಾಡಲು ಲಂಚ ಕೊಡಬೇಕಾದ ಪರಿಸ್ಥಿತಿ ಇದೆ ಅಂತಲೂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ರೋಗಿಗಳಿಗೆ ಆಕ್ಸಿಜನ್, ಐಸಿಯು ಹಾಸಿಗೆಗಳು, ಆಂಬುಲೆನ್ಸ್​ಗಳು ಅಗತ್ಯ ಸಮಯದಲ್ಲಿ ಸಿಗುತ್ತಿಲ್ಲ ಎಂದು ಸತ್ಯ ಹೇಳಿದರೆ ಬಿಜೆಪಿ ನಾಯಕರು ನಾನು ಟೀಕೆ ಮಾಡುತ್ತಿದ್ದೇನೆ ಅಂತಾರೆ. ಶವ ಸಂಸ್ಕಾರ ಮಾಡಲು ಕ್ಯೂನಲ್ಲಿ ನಿಲ್ಲಬೇಕಾದ, ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಇದು ಸುಳ್ಳಾ? ಇದನ್ನು ಹೇಳಿದ್ರೆ ಟೀಕೆಯಾಗುತ್ತಾ? ಅಂತಾ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

 

The post ಸೋಂಕಿತರ ಸಾವಿನ ಸಂಖ್ಯೆ ಮುಚ್ಚಿಡ್ತಿದೆಯಾ ಸರ್ಕಾರ?.. ಸಿದ್ದರಾಮಯ್ಯ ಗಂಭೀರ ಪ್ರಶ್ನೆ appeared first on News First Kannada.

Source: newsfirstlive.com

Source link