ಹಾವೇರಿ: ಕೊರೊನಾ ಸೋಂಕಿತ ತಂದೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವಂತೆ ಪುತ್ರ, ಕೋವಿಡ್ ವಾರ್ಡ್‍ಗೆ ಪ್ರವೇಶಿಸಿ ಕರ್ತವ್ಯನಿರತ ವೈದ್ಯಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಹಾವೇರಿ ಜಿಲ್ಲೆ ಸವಣೂರಿನಲ್ಲಿ ನಡೆದಿದೆ.

ಸವಣೂರು ತಾಲೂಕು ಸರ್ಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ ಈ ಘಟನೆ ನಡೆದಿದ್ದು, ತಾಲೂಕಿನ ಹುರಳಿಕುಪ್ಪಿ ಗ್ರಾಮದ ಕೊರೊನಾ ಸೋಂಕಿತರೋರ್ವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ತಮ್ಮ ತಂದೆಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ತಂದೆಯನ್ನು ಡಿಸ್ಚಾರ್ಜ್ ಮಾಡುವಂತೆ ಸೋಂಕಿತನ ಪುತ್ರ ವೈದ್ಯಾಧಿಕಾರಿಯೊಂದಿಗೆ ಕ್ಯಾತೆ ತೆಗೆದು ರಂಪ ಮಾಡಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ಆಗೋದಿಲ್ಲ, ಕೋವಿಡ್ ವಾರ್ಡ್‍ಗೆ ಪ್ರವೇಶವಿಲ್ಲ ಅಂದ್ರೂ ವಾರ್ಡ್ ನಲ್ಲಿದ್ದ ವೈದ್ಯರು, ಸಿಬ್ಬಂದಿ ಹಾಗೂ ವೈದ್ಯಾಧಿಕಾರಿ ಜೊತೆಗೆ ಜಗಳವಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದ ಚನ್ನವೀರಪ್ಪ ಎಂಬವರ ವಿರುದ್ಧ ಈಗ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ಶಂಕರಗೌಡ ಹಿರೇಗೌಡ್ರ ದೂರು ದಾಖಲಿಸಿದ್ದಾರೆ.

The post ಸೋಂಕಿತ ತಂದೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವಂತೆ ಕ್ಯಾತೆ – ಪುತ್ರನ ವಿರುದ್ಧ ದೂರು appeared first on Public TV.

Source: publictv.in

Source link