ಹುಬ್ಬಳ್ಳಿ: ಇಲ್ಲಿನ ಬಾಲಾಜಿ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೊಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶ್ವಸಿಯಾಗಿದ್ದಾರೆ.

ಬಂಧಿತನನ್ನು ಅಶೋಕ್ ಹಲಗಿ ಎಂದು ಗುರುತಿಸಲಾಗಿದೆ. ಕಳೆದ 23ರಂದು ಹುಬ್ಬಳ್ಳಿಯ ಪ್ರತಿಷ್ಠಿತ ಬಾಲಾಜಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೋವಿಡ್ ಸೊಂಕಿತ ಮಹಿಳೆಯ ಮೇಲೆ ವಾರ್ಡಬಾಯ್ ಲೈಂಗಿಕ ದೌರ್ಜನ್ಯ ಎಸಗಿದ್ದ. ಸೋಂಕಿತ ಮಹಿಳೆ ಪುತ್ರನಿಗೆ ಈ ಕುರಿತು ಮಾಹಿತಿ ನೀಡಿದ್ದಳು.

ಘಟನೆ ಬೆಳಕಿಗೆ ಬಂದ ನಂತರ ಸೊಂಕಿತ ಮಹಿಳೆಯ ಪರವಾಗಿ ಪುತ್ರ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ನಂತರ ಕೃತ್ಯವನ್ನ ಆಸ್ಪತ್ರೆಯ ಆಡಳಿತ ಮಂಡಳಿ ಅಲ್ಲಗೆಳೆದಿದ್ದರು. ಅಲ್ಲದೇ ದೂರುದಾರನ ವಿರುದ್ಧ ಸುಳ್ಳು ಆರೋಪ ಮಾಡಿದ್ರು. ಈ ಘಟನೆಯ ಬಗ್ಗೆ ವಿಸ್ತೃತವಾಗಿ ತನಿಖೆ ನಡೆಸಿದ ವಿದ್ಯಾನಗರ ಪೋಲೀಸರು ಸೊಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಾರ್ಡ್ ಬಾಯ್ ಅಶೋಕ ಹಲಗಿಯನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಇದನ್ನೂ ಓದಿ: ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ ಬಯಲಿಗೆ

ವಾರ್ಡಬಾಯ್ ಅಶೋಕ್ ಹಲಗಿ ಕೃತ್ಯ ಎಸಗಿದ ನಂತರ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಅಲ್ಲದೇ ಆಸ್ಪತ್ರೆಯಿಂದ ಪರಾರಿಯಾಗಿ ಅಪಘಾತದಲ್ಲಿ ಗಾಯಗೊಂಡಿದ್ದ. ಆರೋಪಿಯ ಚಲನವಲನ ಪತ್ತೆ ಮಾಡಿದ ಪೊಲೀಸರು ಆರೋಪಿಯನ್ನ ಬಂಧಿಸಿ ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಮೃತರ ಮೊಬೈಲ್ ಕದ್ದ ಆರೋಪಿ ಬಂಧನ 

ಘಟನೆಯ ಕುರಿತು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಸೋಂಕಿತನ ಜೇಬಿನಿಂದ ನಗದು ಕದ್ದು ಸಿಕ್ಕಿಬಿದ್ದ ಕೋವಿಡ್ ಆಸ್ಪತ್ರೆಯ ಮಹಿಳಾ ಸಿಬ್ಬಂದಿ

The post ಸೋಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ವಾರ್ಡ್ ಬಾಯ್ ಅರೆಸ್ಟ್ appeared first on Public TV.

Source: publictv.in

Source link