ಮುಂಬಯಿ : ಲೆಜೆಂಡ್ರಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಶನಿವಾರ 48ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದ ಅರ್ಪಿಸುವ ಜತೆಗೆ ಕೊರೊನಾದಿಂದ ಗುಣಮುಖರಾದವರು ಸೋಂಕಿನಿಂದ ಬಳಲುತ್ತಿರುವವರ ಜೀವ ಉಳಿಸಲು ಪ್ಲಾಸ್ಮಾ ದಾನ ಮಾಡುವಂತೆ ಕರೆ ನೀಡಿದ್ದಾರೆ.

“ವೈದ್ಯರು ನನಗೆ ನೀಡಿದ ಒಂದು ಸಂದೇಶವನ್ನು ಹಂಚಿಕೊಳ್ಳುತ್ತಿದ್ದೇನೆ. ಕಳೆದ ವರ್ಷ ನಾನು ಪ್ಲಾಸ್ಮಾ ಥೆರಪಿ ಕೇಂದ್ರವೊಂದನ್ನು ಉದ್ಘಾಟಿಸಿದ್ದೆ. ಸೂಕ್ತ ಸಮಯದಲ್ಲಿ ಪ್ಲಾಸ್ಮಾ ನೀಡಿದರೆ ರೋಗಿಗಳು ಬೇಗ ಗುಣ ಮುಖರಾಗುತ್ತಾರೆ ಎಂದು ಅಲ್ಲಿನ ವೈದ್ಯರು ನನಗೆ ಹೇಳಿದ್ದರು.

ನಾನು ಕೂಡ ಇದಕ್ಕೆ ಅರ್ಹನಾದ ಬಳಿಕ ಪ್ಲಾಸ್ಮಾ ದಾನ ಮಾಡಲಿದ್ದೇನೆ. ನೀವೂ ಪ್ಲಾಸ್ಮಾ ಜತೆಗೆ ರಕ್ತದಾನ ಮಾಡಿ’ ಎಂದು ಸಚಿನ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ :ಆನ್‌ಲೈನ್‌ ಮೂಲಕ ಉಳಿತಾಯ ಖಾತೆ ಮತ್ತು ಕೆವೈಸಿ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿದ SBI

ಮಾರ್ಚ್‌ 27ರಂದು ಸಚಿನ್‌ಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಎ. 8ರಂದು ಆಸ್ಪತ್ರೆಯಿಂದ ಬಿಡು ಗಡೆಗೊಂಡಿದ್ದರು.

ಕ್ರೀಡೆ – Udayavani – ಉದಯವಾಣಿ
Read More