ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಗೌರವಯುತ ಅಂತ್ಯಸಂಸ್ಕಾರಕ್ಕೆ ಸರ್ಕಾರದಿಂದಲೇ ಉಚಿತ ವಾಹನ ಸೌಲಭ್ಯ ನೀಡಲಾಗುವುದು. ಶವಾಗಾರದ ಸಮಯ ಕೂಡ ನಿಗದಿ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಅಶೋಕ್ ಅವರು, ನಗರದಲ್ಲಿ 18 ಚಿತಾಗಾರಗಳು ಚಾಲ್ತಿಯಲ್ಲಿವೆ. ಯಾರೂ ಕೂಡ ಶವಾಗಾರಕ್ಕೆ ಬಂದಾಗ ಸುಲಿಗೆ ಮಾಡದಂತೆ ಕಟ್ಟು ನಿಟ್ಟಿನ ಕ್ರಮಕೈಗೊಂಡಿದ್ದೇವೆ. ಸರ್ಕಾರದ ಕಡೆಯಿಂದ ಯಾವುದೇ ಶುಲ್ಕವಿಲ್ಲ. ಗೌರವಯುತ ಶವಸಂಸ್ಕಾರಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ವಿರೋಧ ಪಕ್ಷದವರು ಕೊರೊನಾ ಟೆಸ್ಟ್ ನಿಲ್ಲಿಸಿದ್ದಾರೆ ಎಂದು ಆರೋಪ ಮಾಡ್ತಿದ್ದಾರೆ. ಆದರೆ ನಾವು ಆರ್​ಟಿಪಿಸಿಆರ್, ರ್ಯಾಪಿಡ್ ಟೆಸ್ಟ್​​ಗಳನ್ನ ನಿಲ್ಲಿಸಿಲ್ಲ. ಸೋಂಕಿತ ಲಕ್ಷಣಗಳಿರುವ ಸಂಪರ್ಕದಲ್ಲಿ ಇರುವವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದ್ದೇವೆ. ನಾವು ಯಾವುದನ್ನು ನಿಲ್ಲಿಸಿಲ್ಲ. ಇನ್ನೂ ಸಿಪ್ಲಾ ಕಂಪನಿಯವರು ರೆಮ್ಡಿಸಿವರ್‍ಅನ್ನು ರಾಜ್ಯಕ್ಕೆ ಕೊಡಬೇಕಾಗಿತ್ತು. ಆದರೆ ಕೊಟ್ಟಿಲ್ಲ. ಆದ್ದರಿಂದ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆಯ ಅಡಿ ಸಿಪ್ಲಾ ಕಂಪನಿಗೆ ನಿನ್ನೆ ನೋಟಿಸ್ ಜಾರಿ ಮಾಡಲಾಗಿತ್ತು. ಕಂಪನಿಯವರಿಗೆ ನೋಟಿಸ್ ಕೊಡುತ್ತಿದಂತೆ ರಾಜ್ಯಕ್ಕೆ ಅಗತ್ಯವಿರುವ ರೆಮ್ಡಿಸಿವರ್ ಕೊಡಲು ಮುಂದಾಗಿದ್ದಾರೆ ಎಂದು ಮಾಹಿತಿ ನೀಡಿದರು.

The post ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರಕ್ಕೆ ಉಚಿತ ವಾಹನ -ಆರ್.ಅಶೋಕ್ appeared first on News First Kannada.

Source: newsfirstlive.com

Source link