ಹಾವೇರಿ: ರಾಜ್ಯದಲ್ಲಿ ಕೊರೊನಾದ ಎರಡನೇ ಅಲೆಯ ಅಟ್ಟಹಾಸಕ್ಕೆ ನೂರಾರು ಮಂದಿ ಬಲಿಯಾಗಿದ್ದಾರೆ. ಈ ನಡುವೆ ಹಿರೇಕೇರೂರು ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟ ಕುಟುಂಬಗಳ ನೆರವಿಗೆ ಬರಲು ಕೃಷಿ ಸಚಿವ, ಹಿರೇಕೇರೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಸಿ.ಪಾಟೀಲ್ ಮುಂದಾಗಿದ್ದು, ವೈಯುಕ್ತಿಕವಾಗಿ 50 ಸಾವಿರ ನೆರವು ನೀಡಲು ಮುಂದಾಗಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಹಿರೇಕೇರೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಂಕಿನಿಂದ ಮೃತಪಟ್ಟ ಕುಟುಂಬಸ್ಥರಿಗೆ ವೈಯುಕ್ತಿಕವಾಗಿ 50 ಸಾವಿರ ರೂಪಾಯಿ ನೀಡುತ್ತೇನೆ. ನಾಳೆಯಿಂದ ಈ ಕೆಲಸವನ್ನ ಕ್ಷೇತ್ರದಲ್ಲಿ ಮಾಡುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ಕೋವಿಡ್-19 ಸೋಂಕು ತಗುಲಿದವರು ಕೇರ್ ಸೆಂಟರ್​ಗಳಿಗೆ ಬನ್ನಿ. ಮಾಸ್ಕ್ ಮತ್ತು ಸ್ಯಾನಿಟೈಜೇಷರ್ ಬಳಕೆ ಮಾಡಿ. ಸೋಂಕಿನಿಂದ ನಿಮ್ಮನ್ನು ಹಾಗೂ ನಿಮ್ಮ ಕುಟುಂಬದವರನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ.

The post ಸೋಂಕಿನಿಂದ ಮೃತರ ಕುಟುಂಬಸ್ಥರಿಗೆ ತಲಾ 50 ಸಾವಿರ- ಬಿ.ಸಿ.ಪಾಟೀಲ್ ಸಹಾಯ ಹಸ್ತ appeared first on News First Kannada.

Source: newsfirstlive.com

Source link