ಬೆಂಗಳೂರು: ರಾಜ್ಯದಲ್ಲಿ ಇಂದು 26,266 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 81,049 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 1,07,675 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 22,758 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 24,72,973ಕ್ಕೆ ಏರಿಕೆಯಾಗಿದೆ.

ಇಂದು 38,224ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ, ಈವರೆಗೆ 20,22,172 ಮಂದಿ ಗುಣಮುಖರಾದಂತಾಗಿದೆ. ಇಂದು 588 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 26,399ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 5,34,954 ಆ್ಯಕ್ಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.

ಇನ್ನು ಬೆಂಗಳೂರು ಒಂದರಲ್ಲೇ 6243 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 350 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಬೆಂಗಳೂರು ಗ್ರಾಮಾಂತರ 837, ಬಳ್ಳಾರಿಯಲ್ಲಿ 718, ಬೆಳಗಾವಿ 1,260, ಚಿಕ್ಕಮಗಳೂರು 797, ಧಾರವಾಡ 709, ದಕ್ಷಿಣ ಕನ್ನಡ 755, ಹಾಸನ 1,285, ಮೈಸೂರು 2,241, ತುಮಕೂರು 1,312 ಹಾಗೂ ಉತ್ತರ ಕನ್ನಡದಲ್ಲಿ 992 ಪ್ರಕರಣಗಳು ದಾಖಲಾಗಿವೆ.

The post ಸೋಂಕಿನ ಪ್ರಮಾಣ ಕುಗ್ಗುತ್ತಿದ್ದರೂ ರಾಜ್ಯದಲ್ಲಿ ಮರಣ ಮೃದಂಗ; ಬೆಂಗಳೂರಲ್ಲಿ ಹೆಚ್ಚು ಸಾವು appeared first on News First Kannada.

Source: newsfirstlive.com

Source link