ಬೆಂಗಳೂರು: ಬೆಡ್​ ಬುಕ್ ಮಾಡದವರಿಗೆ, ಕೊರೊನಾ ಸೋಂಕೇ ತಗುಲದವರಿಗೂ ಕೂಡ ಬಿಬಿಎಂಪಿಯಿಂದ ಬುಡ್​ ಬುಕ್​ ಆಗಿರುವ ಮೆಸೇಜ್​ಗಳು ರವಾನೆಯಾಗುತ್ತಿದ್ದು ಈ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕಬ್ಬನ್ ಪಾರ್ಕ್ ಹೆಡ್​ ಕಾನ್ಸ್​​ಟೇಬಲ್​ ಪತ್ನಿ ಹೆಸರಲ್ಲಿ ಬಿಬಿಎಂಪಿಯಿಂದ ಬೆಡ್​ ಬುಕ್​ ಆಗಿದ್ದು ಈ ಕುರಿತ ಸಂದೇಶ ಕೂಡ ರವಾನೆಯಾಗಿದೆ. ಸಂದೇಶದಲ್ಲಿ ಸೇಂಟ್ ಫಿಲೋಮೆನಾ ಆಸ್ಪತ್ರೆಯಲ್ಲಿ ಬೆಡ್ ಬುಕ್ ಆಗಿದೆ. ಆ್ಯಂಬುಲೆನ್ಸ್ ನಿಮ್ಮ ಮನೆ ಬಳಿ ಆದಷ್ಟು ಬೇಗ ಬರಲಿದೆ.. ಆದಷ್ಟು ಬೇಗ ರೆಡಿಯಾಗಿ, ನಿಮ್ಮ ಆರೋಗ್ಯ ಸುಧಾರಿಸಲಿ ಎಂದು ಸಂದೇಶ ರವಾನೆಯಾಗಿದೆ.

ವಿಚಿತ್ರ ಎಂದರೆ ಕಬ್ಬನ್ ಪಾರ್ಕ್ ಹೆಡ್ ಕಾನ್ಸ್ ಟೇಬಲ್ ಪತ್ನಿಗೆ ಕೊರೊನಾ ಸೋಂಕಿನ ಸಿಂಪ್ಟಮ್ಸ್ ಇಲ್ಲ, ಅವರು ಟೆಸ್ಟ್ ಕೂಡ ಮಾಡಿಸಿಲ್ಲ. ಅಷ್ಟೇ ಯಾಕೆ ಅವರು ಬೆಡ್​ನ್ನೂ ಬುಕ್ ಮಾಡಿಲ್ಲ. ಹೀಗಿದ್ದರೂ ಬಿಬಿಎಂಪಿ ಇಂಥದ್ದೊಂದು ಸಂದೇಶ ಕಳುಹಿಸಿದೆ. ಮೆಸೇಜ್ ನೋಡಿ ಹೆಡ್​ ಕಾನ್ಸ್​​ಟೇಬಲ್ ತಬ್ಬಿಬ್ಬಾಗಿದ್ದಾರೆ.

ಇತ್ತೀಚೆಗೆ ಬಿಬಿಎಂಪಿಯ ವಾರ್​​ರೂಂನಲ್ಲಿ ಬೆಡ್​ಗಳ ದಂಧೆ ನಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು.. ಈ ಬೆನ್ನಲ್ಲೇ ಇಂಥ ಸಂದೇಶ ಬೆಡ್ ಬುಕ್ ಮಾಡದವರಿಗೂ ರವಾನೆಯಾಗ್ತಿರೋದು ಅನುಮಾನ ಮೂಡಿಸಿದೆ.

The post ಸೋಂಕಿಲ್ಲದವರ ಹೆಸರಿನಲ್ಲೂ ಬುಕ್​ ಆಗ್ತಿವೆ ಬೆಡ್.. ಅನುಮಾನ ಹುಟ್ಟಿಸಿದ ​ಬಿಬಿಎಂಪಿ ನಡೆ appeared first on News First Kannada.

Source: newsfirstlive.com

Source link