ಹೈದರಾಬಾದ್: ಕೊರೊನಾ ಸೋಂಕಿನಿಂದ ಬಳಲುತ್ತಿರುವ ದಂಪತಿ ನಮ್ಮಲ್ಲಿರುವ ಸೋಂಕು ಮಕ್ಕಳಿಗೆ ಬಂದು ಬಿಟ್ಟರೆ ಎನ್ನುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡಲ್ಲಿ ನಡೆದಿದೆ.

ಪ್ರಸಾದ್(40) ಮತ್ತು ಅವರ ಪತ್ನಿ ಭಾರತಿ(37) ಮೃತರಾಗಿದ್ದಾರೆ. ಇವರು ಕೊರೊನಾ ಸೋಂಕಿನ ಪರೀಕ್ಷೆಯನ್ನು ಮಾಡಿಸಿದ್ದರು. ವರದಿ ಕೂಡ ಪಾಸಿಟಿವ್ ಬಂದಿರುವುದರ ಕುರಿತಾಗಿ ದಂಪತಿ ಭಯಭೀತರಾಗಿ ಸಾವನ್ನಪ್ಪಿದ್ದಾರೆ.

ನಮಗೆ ಸೋಂಕು ಬಂದಿದೆ. ನಮ್ಮಿಂದ ಆ ಸೋಂಕು ಮಕ್ಕಳಿಗೂ ಹರಡಿ ಬಿಡುಬಹುದು ಎಂದು ಭಯ ಶುರುವಾಗಿದೆ. ಹಾಗಾಗದಿರಲಿ ಎನುವ ಕಾರಣಕ್ಕಾಗಿ ದಂಪತಿ ಒಂದು ಕಠಿಣ ನಿರ್ಧಾರ ಮಾಡಿದ್ದಾರೆ. ಇಬ್ಬರೂ ಒಟ್ಟಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಸುದ್ದಿ ಮೂಲಗಳಿಂದ ತಿಳಿದುಬಂದಿದೆ.

The post ಸೋಂಕು ಮಕ್ಕಳಿಗೆ ಹಬ್ಬುತ್ತದೆ ಎಂದು ಆತ್ಮಹತ್ಯೆ ಮಾಡಿಕೊಂಡ ದಂಪತಿ appeared first on Public TV.

Source: publictv.in

Source link