– ಹಾಸನದಲ್ಲಿ ಲಾಕ್ ಆದೇಶ ವಾಪಸ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಾವು ನೋವಿನ ಮಹಾ ಸುನಾಮಿಯೇ ಎದ್ದಿದ್ದರೂ, ರಾಜ್ಯ ಸರ್ಕಾರ ಮಾತ್ರ ಎಚ್ಚೆತ್ತಿಲ್ಲ. ಕಂಪ್ಲೀಟ್ ಲಾಕ್‍ಡೌನ್‍ಗೆ ಬಿಎಸ್‍ವೈ ಸರ್ಕಾರ ಮೀನಾಮೇಷ ಎಣಿಸ್ತಿದೆ. ಬದಲಿಗೆ ನಿಮ್ಮ ಜಿಲ್ಲೆಗಳ ಪರಿಸ್ಥಿತಿಗಳಿಗೆ ಅನುಗುಣವಾಗಿ ಲಾಕ್‍ಡೌನ್ ತೀರ್ಮಾನ ತೆಗೆದುಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಿಎಂ ಅಧಿಕಾರ ನೀಡಿ ಕೈತೊಳೆದುಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು ಲಾಕ್‍ಡೌನ್ ಕುರಿತಾಗಿ ಇನ್ನೆರಡು ದಿನಗಳಲ್ಲಿ ಸಿಎಂ ಯಡಿಯೂರಪ್ಪ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನ ಹಾಸನದಲ್ಲಿ ವಾರದಲ್ಲಿ ನಾಲ್ಕು ದಿನ ಲಾಕ್‍ಡೌನ್ ಮಾಡುವ ಆದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹೊರಡಿಸಿದ್ರು. ಆದರೆ ಸಂಜೆ ಯೂಟರ್ನ್ ತೆಗೆದುಕೊಂಡ್ರು. ಹಾಸನದಲ್ಲಿ ನಿನ್ನೆ 2000ಕ್ಕೂ ಹೆಚ್ಚು ವರದಿ ಆಗುತ್ತಲೇ ಎಚ್ಚೆತ್ತ ಸಚಿವ ಗೋಪಾಲಯ್ಯ, ಇಂದು ಡಿಸಿ ಜೊತೆ ಸಭೆ ನಡೆಸಿ, ಸೋಂಕು ನಿಯಂತ್ರಣಕ್ಕಾಗಿ ಮತ್ತಷ್ಟು ಟಫ್ ರೂಲ್ಸ್ ಮಾಡಿದ್ರು.

ಹಾಸನದಲ್ಲಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಅಂದ್ರೆ ದಿನ ಬಿಟ್ಟು ದಿನ ಬೆಳಗ್ಗೆ 6ರಿಂದ ಬೆಳಗ್ಗೆ 10ರ ತನಕ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಭಾನುವಾರ, ಮಂಗಳವಾರ, ಗುರುವಾರ, ಶನಿವಾರ ಇಡೀ ಹಾಸನ ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಆಗಲಿದೆ ಎಂದು ಗೋಪಾಲಯ್ಯ ತಿಳಿಸಿದ್ರು. ಆದರೆ ಸಂಜೆ ಅದೇನಾಯ್ತೋ ಏನೋ ಇದ್ದಕ್ಕಿದ್ದಂತೆ ಅಧಿಕಾರಿಗಳ ಸಭೆ ನಡೆಸಿದ ಸಚಿವ ಗೋಪಾಲಯ್ಯ, ಮಧ್ಯಾಹ್ನ ಹೊರಡಿಸಿದ್ದ ಆದೇಶ ರದ್ದು ಮಾಡಲಾಗಿದೆ.

ಸಿಎಂ ಜೊತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ತಗೋತೀವಿ ಅಂತಾ ಮಾಹಿತಿ ನೀಡಿದ್ರು. ಏಕೆ ಹೀಗೆ ಎಂಬ ಪ್ರಶ್ನೆ ಈಗ ಮನೆ ಮಾಡಿದೆ. ಇನ್ನು, ಮತ್ತೆ ಲಾಕ್‍ಡೌನ್‍ಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಬೆಂಬಲ ನೀಡಿದ್ದಾರೆ.

The post ಸೋಂಕು ಸ್ಫೋಟವಾದ್ರೂ ಕಂಪ್ಲೀಟ್ ಲಾಕ್‍ಗೆ ಮೀನಾಮೇಷ – ಜಿಲ್ಲಾವಾರು ಲಾಕ್‍ಡೌನ್‍ಗೆ ಪ್ಲಾನ್ appeared first on Public TV.

Source: publictv.in

Source link