ಬೆಂಗಳೂರು: ರಾಜೀನಾಮೆ ನೀಡುವ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ.. ನಾನು ಯಡಿಯೂರಪ್ಪ ಹೇಳಿಕೆ ಸರಿಯಾಗಿ ಗಮನಿಸಿಲ್ಲ. ಯಾಕೆಂದರೆ ನಾನು ಕ್ಷೇತ್ರದಲ್ಲಿ ಕೊವೀಡ್ ಕಡೆ ಗಮನ ಕೊಟ್ಟಿದ್ದೇನೆ ಎಂದಿದ್ದಾರೆ.

ಕೊವೀಡ್ ಸಂದರ್ಭದಲ್ಲಿ ಕೆಲವರು ದೆಹಲಿಗೆ ಹೋಗಿ ಏನೇನೋ ಮಾಡೋದು ಸರಿಯಲ್ಲ.. ಯಡಿಯೂರಪ್ಪ ನವರು ಇಳಿ ವಯಸ್ಸಿನಲ್ಲೂ ಸಮರ್ಥವಾಗಿ ಕೊವೀಡ್ ತಡೆಗೆ ಶ್ರಮಿಸುತ್ತಿದ್ದಾರೆ. ಯಡಿಯೂರಪ್ಪನವರಿಗೆ ಯಾರೋ ಒಂದಿಬ್ಬರು ಅಪಪ್ರಚಾರ ಮಾಡುವ ಕೆಲಸ ಮಾಡ್ತಿದ್ದಾರೆ. ನಾನು ಇದರ ಬಗ್ಗೆ ಅವರ ಜೊತೆ ಚರ್ಚೆ ಮಾಡ್ತೇನೆ. ಬಿಎಸ್​ವೈ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ನಾವು ಯಡಿಯೂರಪ್ಪ ಜೊತಗಿದ್ದೇವೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಚುನಾವಣೆಯಲ್ಲಿ ಸೋತವರು ಬೆಗ್ ಮಾಡಿ ಮಂತ್ರಿ ಆಗಿದ್ದಾರೆ..

ಕೆಲವರಿಗೆ ಪಕ್ಕದ ಕ್ಷೇತ್ರ ಗೆಲ್ಲಿಸುವ ತಾಕತ್ತು ಇಲ್ಲ. ಆದರೂ ಕೆಲವರು ಅವರ ಬಗ್ಗೆ ಮಾತನಾಡ್ತಾರೆ. ಯತ್ನಾಳ್​ನಂತವರು ಹುಚ್ಚುಚ್ಚರಾಗಿ ಮಾತಾಡ್ತಾರೆ. ಇದನ್ನು ಪ್ರತಿಪಕ್ಷಗಳು ಸದುಪಯೋಗ ಮಾಡಿಕೊಳ್ತಾರೆ. ಚುನಾವಣೆಯಲ್ಲಿ ಸೋತವರು ಬೆಗ್ ಮಾಡಿ ಮಂತ್ರಿ ಆಗಿದ್ದಾರೆ.. ಅವರು ಯಡಿಯೂರಪ್ಪನವರ ನಾಯಕತ್ವದ ಬಗ್ಗೆ ಮಾತನಾಡ್ತಾರೆ.

ನನ್ನ ಬಳಿ ಸಹಿ ಸಂಗ್ರಹ ಮಾಡಿರುವ 65ಕ್ಕೂ ಹೆಚ್ಚು ಶಾಸಕರ ಪತ್ರ ಇದೆ

ನಾನು ನನ್ನ ಆತ್ಮಸಾಕ್ಷಿಯಾಗಿ ಎದೆ ಮುಟ್ಟಿಕೊಂಡು ಹೇಳ್ತೇನೆ.. ನನ್ನ ಬಳಿ ಸಹಿ ಸಂಗ್ರಹ ಮಾಡಿರುವ 65ಕ್ಕೂ ಹೆಚ್ಚು ಶಾಸಕರ ಪತ್ರ ಇದೆ. ಯಡಿಯೂರಪ್ಪರೇ ಸಿಎಂ ಸ್ಥಾನದಲ್ಲಿ ಮುಂದುವರೆಸುವ ಪತ್ರ. ಅದನ್ನು ಕೊರೊನಾ ಮುಗಿದ ಕೂಡಲೇ ದೆಹಲಿಗೆ ಹೋಗಿ ಹೈಕಮಾಂಡ್ ಗೆ ತಲುಪಿಸುತ್ತೇವೆ. ಪತ್ರದಲ್ಲಿ ಯಡಿಯೂರಪ್ಪ ವಿರುದ್ಧ ಮಾತಾಡ್ತಿರೋ ವಿರುದ್ಧವೂ ಕ್ರಮ ಆಗಬೇಕು ಎಂಬುದಿದೆ ಎಂದು ಇದೇ ವೇಳೆ ಹೇಳಿದ್ದಾರೆ.

The post ಸೋತವರು ‘ಬೆಗ್ ಮಾಡಿ’ ಮಂತ್ರಿ ಆಗಿದ್ದಾರೆ: ರೇಣುಕಾಚಾರ್ಯ ಹೀಗಂದಿದ್ದು ಯಾರಿಗೆ..? appeared first on News First Kannada.

Source: newsfirstlive.com

Source link