ಮಾರ್ಚ್​ 6ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಿರ್ದೇಶಕ ಬಹದ್ದೂರ್​ ಚೇತನ್​ ತಮ್ಮ ಬಹುಕಾಲದ ಗೆಳತಿ ಮಾನಸ ಜೊತೆ ರಿಂಗ್​ ಎಕ್ಸ್​​​ಚೇಂಜ್​ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಇತ್ತು. ಇದೇ ಬಹುಕಾಲದ ಗೆಳತಿ ಸ್ವತಃ ಚೇತನ್​ ಕುಮಾರ್​ ಸೋದರತ್ತೆ ಮಗಳು ಅನ್ನೋದು ಅನಂತರ ತಿಳಿದು ಬಂದಿತ್ತು. ಇಂದು ನಿರ್ದೇಶಕ ಚೇತನ್​ ಸೋದರತ್ತೆ ಮಗಳು ಮಾನಸ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿ ಮಠದಲ್ಲಿ ಸರಳವಾಗಿ ಮದುವೆ ಆಗಿದ್ದಾರೆ.

ಹಲವು ವರ್ಷಗಳಿಂದ ಚೇತನ್ ಹಾಗೂ ಮಾನಸ ಪ್ರೀತಿಸುತ್ತಿದ್ದರು. ಮಾನಸ ಇನ್ಫೋಸಿಸ್​ನಲ್ಲಿ ಸಾಫ್ಟ್​​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದು, ಚೇತನ್- ಮಾನಸಾರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್.

ಇನ್ನು, ಬ್ಯಾಕ್​ ಟು ಬ್ಯಾಕ್ ಎರಡು​ ಹಿಟ್​ ಸಿನಿಮಾಗಳನ್ನ ನೀಡಿರುವ ನಿರ್ದೇಶಕ ಚೇತನ್​ ಸದ್ಯ ಪುನೀತ್​ ರಾಜ್​ಕುಮಾರ್​ ಅಭಿನಯದ ಜೇಮ್ಸ್​​​ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ. ಈ ಸಿನಿಮಾದ ಬಹುತೇಕ ಶೂಟಿಂಗ್​ ಕಂಪ್ಲೀಟ್​ ಆಗಿದ್ದು, ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆ ಮತ್ತೆ ಕ್ಯಾಮೆರಾ ಹಿಡಿದು ರೆಡಿಯಾಗಲಿದೆ ಜೇಮ್ಸ್​ ಚಿತ್ರತಂಡ.

The post ಸೋದರತ್ತೆ ಮಗಳ ಜೊತೆ ಸಪ್ತಪದಿ ತುಳಿದ ನಿರ್ದೇಶಕ ಚೇತನ್​ ಕುಮಾರ್​ appeared first on News First Kannada.

Source: newsfirstlive.com

Source link