ಬಾಗಲಕೋಟೆ: ಕೋವಿಡ್​ನಿಂದಾಗಿ ಮೃತಪಟ್ಟ ವ್ಯಕ್ತಿಯ ಸಹೋದರೊಬ್ಬರು ತೇರದಾಳ ಶಾಸಕ ಸಿದ್ದು ಸವದಿಯವರಿಗೆ ಕರೆ ಮಾಡಿ ಆಕ್ಷಿಜನ್ ವ್ಯವಸ್ಥೆ ಮಾಡಬೇಕು, ಸರ್ಕಾರಿ ಆಸ್ಪತ್ರೆಯ ಮುಂದೆ ಕೂರಬೇಕೆಂದು ಒತ್ತಾಯಿಸಿದ್ದಕ್ಕೆ ಸಿದ್ದು ಸವದಿ.. ನಾಲಾಯಕ್.. ಇಡು ಫೋನ್ ಎಂದು ಉದ್ಧಟತನ ಮೆರೆದ ಘಟನೆ ನಡೆದಿದೆ.

ರಬಕವಿಬನಹಟ್ಟಿ ತಾಲ್ಲೂಕಿನ ಆಸಂಗಿ ಗ್ರಾಮದ ನಿವಾಸಿ ಸಂಜಯ್ ದೊಂಡಿಬಾಗ ಗಾಯಕವಾಡ(41) ಕೊರೊನಾ ಸೋಂಕಿಗೊಳಗಾಗಿ ಶನಿವಾರ ಸಾವನ್ನಪ್ಪಿದ್ದಾರೆ. ಆಕ್ಸಿಜನ್ ಸಿಗದೇ ಸಂಜಯ್ ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಂಜಯ್ ಅವರನ್ನು ಉಳಿಸಿಕೊಳ್ಳಲು ಕುಟುಂಬದವರು..ಬಾಗಲಕೋಟೆ ಜಮಖಂಡಿ, ವಿಜಯಪುರಕ್ಕೆ ಅಲೆದಾಡಿದರೂ ಕೊನೆಗೂ ಆಕ್ಷಿಜನ್ ಸಿಗದೆ ವಿಜಯಪುರದಲ್ಲಿ ಸಂಜಯ್ ಮೃತಪಟ್ಟಿದ್ದಾರೆ.

ಈ ಹಿನ್ನೆಲೆ ಸವದಿಯವರಿಗೆ ಕರೆ ಮಾಡಿದ ಮೃತರ ಸಹೋದರ ಅಶೋಕ ದೊಂಡಿಬಾಗ.. ಮನೆಯಲ್ಲಿ ಕೂರಬೇಕು ಅಂತ ನಿಮ್ಮನ್ನು ಆರಿಸಿ ಕಳಿಸಿಲ್ಲ.. ಆಕ್ಷಿಜನ್ ವ್ಯವಸ್ಥೆ ಮಾಡಬೇಕು, ಸರ್ಕಾರಿ ದವಾಖಾನೆ ಮುಂದೆ ಕೂರಬೇಕು ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸವದಿ.. ನಾಲಾಯಕ್ ಇಡು ಪೋನ್.. ದೊಡ್ಡ ಕಿಸಾಮತಿ ಮಾಡ್ತಿ, ಶಾಣ್ಯಾ ಅದಿ ಇಡು ಎಂದು ಉದ್ಧಟತನದ ಮಾತನ್ನಾಡಿದ್ದಾರೆ.
ಸಹೋದರನನ್ನ ಕಳೆದುಕೊಂಡ ವ್ಯಕ್ತಿಯನ್ನ ಸಮಾಧಾನ ಪಡಿಸುವುದು ಬಿಟ್ಟು ಉದ್ಧಟತನದ ಮಾತನಾಡಿದ ಸವದಿ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

The post ಸೋದರನನ್ನು ಕಳೆದುಕೊಂಡ ವ್ಯಕ್ತಿಗೆ ‘ನಾಲಾಯಕ್ ಫೋನ್ ಇಡು’ ಎಂದು ಉದ್ಧಟತನ ತೋರಿದ ಸಿದ್ದು ಸವದಿ appeared first on News First Kannada.

Source: newsfirstlive.com

Source link