ಕೊರೊನಾ ಬಂದಾಗಿನಿಂದ ಹಾಗೂ ಲಾಕ್​ಡೌನ್ ಆದಾಗಿನಿಂದ ಸಾಮಾನ್ಯ ಜನ್ರಿಗೆ ಬಾಲಿವುಡ್ ನಟ ಸೋನು ಸೂದ್ ಒಂದಿಲ್ಲೊಂದು ಸಹಾಯ ಮಾಡ್ತಾನೆ ಬರ್ತಿದ್ದಾರೆ. ಇದೀಗ, ನಟ ಸೋನು  ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಸಹಾಯಹಸ್ತ ಚಾಚಿದ್ದಾರೆ.

ದೆಹಲಿಯ ಯುವ ಸಂಘಟನೆ ದಿಯಾ ಹಾಗೂ ಸೋನು ಸೂದ್ ಜಂಟಿಯಾಗಿ ಸಂಭವಂ ಎಂಬ ಯೋಜನೆ ಒಂದನ್ನು ಲಾಂಚ್ ಮಾಡಿದ್ದಾರೆ. ಇದರ ಅಡಿ ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಲು ಸಿದ್ಧವಾಗ್ತಿರೋ ಆಕಾಂಕ್ಷಿಗಳಿಗೆ ಉಚಿತವಾಗಿ ಕೋಚಿಂಗ್ ಸ್ಕಾಲರ್​​ಶಿಪ್ ನೀಡಲಾಗುತ್ತದೆ.

ಮಾಡಬೇಕಾ ಐಎಎಸ್​ಗೆ ತಯಾರಿ? ನಾವು ಹೊರುತ್ತೇವೆ ಜವಾಬ್ದಾರಿ ಅಂತ ಟ್ವೀಟ್​ ಮಾಡಿ ಸೋನು ಸೂದ್​ ಈ ಆಫರ್ ಬಗ್ಗೆ ತಿಳಿಸಿದ್ದಾರೆ. ಕೋಚಿಂಗ್ ಪಡೆಯಬಯಸುವವರು www.soodcharityfoundation.org ನಲ್ಲಿ ರೆಜಿಸ್ಟ್ರೇಷನ್ ಮಾಡಿಕೊಳ್ಳಬೇಕು. ಜೂನ್ 30 ರೆಜಿಸ್ಟ್ರೇಷನ್​ಗೆ ಕೊನೆಯ ದಿನವಾಗಿದೆ.

The post ಸೋನು ಸೂದ್​ರಿಂದ ಮತ್ತೊಂದು ನೆರವು; IAS ಆಕಾಂಕ್ಷಿಗಳಿಗೆ ಫ್ರೀ ಕೋಚಿಂಗ್ ಆಫರ್ appeared first on News First Kannada.

Source: newsfirstlive.com

Source link