ಸೋನು ಸೂದ್​​ ಸಹಾಯ ಮಾಡಿದ್ರು ಉಳಿಯಲಿಲ್ಲ ಜೀವ; ಕೊನೆಯುಸಿರೆಳೆದ ತೆಲುಗು ಹಿರಿಯ ನಟ


ತೆಲುಗು ಖ್ಯಾತ ಕೊರಿಯೋಗ್ರಾಫರ್​ ಮತ್ತು ಹಿರಿಯ ನಟ ಶಿವಶಂಕರ್ ಮಾಸ್ಟರ್​​​ ಅವರು ಮಾರಕ ಕೊರೋನಾಗೆ ಬಲಿಯಾಗಿದ್ದಾರೆ. ಇಂದು ಚಿಕಿತ್ಸೆ ಫಲಿಸದೆ ರಾತ್ರಿ 8 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಶಿವಶಂಕರ್ ಮಾಸ್ಟರ್​​​ ಅವರಿಗೆ ಕೊವಿಡ್ ಪಾಸಿಟಿವ್​​​ ಕಾಣಿಸಿಕೊಂಡಿತ್ತು. ಬಳಿಕ ಚಿಕಿತ್ಸೆಗಾಗಿ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೀಗ, ಆರೋಗ್ಯ ಚೇತರಿಸದೆ ಮೃತಪಟ್ಟಿದ್ದಾರೆ.

ಈ ಹಿಂದೆಯೇ ಶಿವಶಂಕರ್​ ಮಾಸ್ಟರ್ ಸ್ಥತಿ ಚಿಂತಾಜನಕಾವಾಗಿತ್ತು. ಚಿಕಿತ್ಸೆಗಾಗಿ ಪ್ರತಿದಿನ ಒಂದು ಲಕ್ಷ ಹಣಬೇಕಾಗಿರುತ್ತಿತ್ತು. ಹಾಗಾಗಿ ತೆಲುಗು ಚಿತ್ರರಂಗ ಅಥವಾ ಯಾರಾದರೂ ಹಣ ಸಹಾಯ ಮಾಡಿ ಎಂದು ಶಿವಶಂಕರ್​ ಮಾಸ್ಟರ್​ ಕೊನೆ ಮಗ ಕೇಳಿಕೊಂಡಿದ್ದರು.

ಇದನ್ನೂ ಓದಿ: ನಟನ ಚಿಕಿತ್ಸೆಗಾಗಿ ಅಂಗಲಾಚಿದ ಕುಟುಂಬ; ಸಂಪೂರ್ಣ ವೆಚ್ಚ ಭರಿಸುತ್ತೇನೆ ಎಂದ ಸೋನು ಸೂದ್

ಈ ಸುದ್ದಿ ತಿಳಿಯುತ್ತಿದ್ದಂತೆಯೇ ರಿಯಲ್​​ ಹೀರೋ ಸೋನು ಸೂದ್​​​​ ಶಿವಶಂಕರ್​​ ಮಾಸ್ಟರ್​​ ನೆರವಿಗೆ ಬಂದರು. ತನ್ನ ಸೋಷಿಯಲ್​​ ಮೀಡಿಯಾದಲ್ಲಿ ಶಿವಶಂಕರ್​​ ಮಾಸ್ಟರ್​​​ ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿ ನನ್ನದು ಎಂದು ಘೋಷಿಸಿದ್ದರು. ಅದರಂತೆಯೇ ಸಹಾಯವೂ ಮಾಡಿದರು. ಈಗ ಕಾಲ ಮೀರಿದ ಕಾರಣ ಕುಟುಂಬವನ್ನು ಅಗಲಿದ್ದಾರೆ.

News First Live Kannada


Leave a Reply

Your email address will not be published. Required fields are marked *