ಮುಂಬೈ: ಕೋವಿಡ್ ರೋಗಿಗಳಿಗೆ ಅವಶ್ಯಕವಾಗಿ ಬೇಕಾಗಿರುವ ಆಮ್ಲಜನಕ ಸಾಗಾಣೆಗೆ ಚೀನಾ ತಡೆಯೊಡ್ಡುತ್ತಿದೆ ಎಂದು ನಟ ಸೋನು ಸೂದ್ ಆರೋಪ, ಅಸಮಾಧಾನಕ್ಕೆ ಚೀನಾ ರಾಯಭಾರಿ ಉತ್ತರಕೊಟ್ಟಿದ್ದಾರೆ.

ನಾವು ಭಾರತಕ್ಕೆ ಪ್ರಪಂಚದ ಬೇರೆ ಬೇರೆ ಕಡೆಯಿಂದ ಆಕ್ಸಿಜನ್ ಸಿಲಿಂಡರ್‌ಗಳನ್ನು ತರಿಸಿಕೊಳ್ಳುತ್ತಿದ್ದೇವೆ. ಆದರೆ ದುರಾದೃಷ್ಟವೆಂದರೇ ಚೀನಾ ನಮ್ಮ ದೇಶಕ್ಕೆ ಬರುವ ಆಕ್ಸಿಜನ್ ಸಿಲಿಂಡರ್‌ಗಳಿಗೆ ತಡೆಯೊಡ್ಡುತ್ತಿದೆ. ಇಲ್ಲಿ ನಾವು ಅನೇಕ ಜೀವಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಹಾಗಾಗಿ ದಯವಿಟ್ಟು ಇಂತಹ ಕೆಲಸಕ್ಕೆ ಮುಂದಾಗದೇ ನಮಗೆ ಸಹಾಯ ಮಾಡಿ ಎಂದು ಚೀನಾ ರಾಯಭಾರಿ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯವನ್ನು ಉಲ್ಲೇಖಿಸಿ ಸೋನು ಸೂದ್ ಟ್ವೀಟ್ ಮಾಡಿದ್ದರು.

ಸೋನು ಸೂದ್ ಅವರೇ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಚೀನಾ ಗರಿಷ್ಠ ಸಹಾಯ ನೀಡುತ್ತಿದೆ. ಚೀನಾ ಮತ್ತು ಭಾರತದ ನಡುವಿನ ಸರಕು ಸಾಗಾಣೆಗೆ ಯಾವುದೇ ತಡೆ ನೀಡಿಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಎರಡು ವಾರಾದಲ್ಲಿ ಭಾರತ ಮತ್ತು ಚೀನಾದ ನಡುವೆ 63 ಸರಕು ಸಾಗಾಣೆ ವಿಮಾನಗಳು ಸಂಚರಿಸಿವೆ ಎಂದು ಸೋನು ಸೂದ್ ಟ್ವೀಟ್‍ಗೆ ಭಾರತದಲ್ಲಿರುವ ಚೀನಾ ರಾಯಭಾರಿ ಸನ್ ವಿಡಾಂಗ್ ಉತ್ತರ ನೀಡಿದ್ದಾರೆ.

ಏನೇ ಸಮಸ್ಯೆ ಇದ್ದರೇ ಈಮೇಲ್ ಮೂಲಕವಾಗಿ ಗಮನಕ್ಕೆ ತನ್ನಿ. ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಸೋನು ಸೂದ್‍ಗೆ ಚೀನಾ ರಾಯಭಾರಿ ಟ್ವೀಟ್ ಮೂಲಕವಾಗಿ ಹೇಳಿದ್ದಾರೆ.

The post ಸೋನು ಸೂದ್ ಅಸಮಾಧಾನಕ್ಕೆ ಉತ್ತರ ಕೊಟ್ಟ ಚೀನಾ ರಾಯಭಾರಿ appeared first on Public TV.

Source: publictv.in

Source link