ಭಾನುವಾರದ ಬಾಡೂಟವನ್ನು ತಿಂದಿರುವ ನೀವು ಇಂದು ಸಿಹಿಯಾಗಿ ತಿನ್ನಲು ಬಯಸುತ್ತಿರ. ಹೀಗಾಗಿ ಇಂದು ಮನೆಯಲ್ಲಿ ರುಚಿಯಾದ ಆರೋಗ್ಯವಾದ ಪನ್ನೀರ್ ಪಾಯಸ ಮಾಡಿ ಸವಿಯಿರಿ.

ಬೇಕಾಗುವ ಸಾಮಗ್ರಿಗಳು:

* ಹಾಲು- 2ಕಪ್
* ಪನ್ನೀರ್- 2ಕಪ್
* ಅಕ್ಕಿ ಹಿಟ್ಟು- 1 ಅ
* ಸಕ್ಕರೆ – ಕಪ್
* ಕೇಸರಿ
* ಬಾದಾಮಿ
* ಪಿಸ್ತಾ


ಮಾಡುವ ವಿಧಾನ:
* ಒಂದು ಬಾಣಲೆ ಅಥವಾ ಪಾತ್ರೆಯನ್ನು ತೆಗೆದುಕೊಳ್ಳಿ. ಮೊದಲು ಹಾಲುನ್ನು ಹಾಕಿ ಚೆನ್ನಾಗಿ ಕಾಯಿಸಬೇಕು.

* ಕುದಿಯುತ್ತಿರುವ ಹಾಕಿಗೆ ನಂತರ ಅಕ್ಕಿ ಹಿಟ್ಟನ್ನು ಸೇರಿಸಿ, 8-10 ನಿಮಿಷಗಳ ಕಾಲ ಬೇಯಿಸಿ. ಹಾಲು ಮತ್ತು ಅಕ್ಕಿ ಹಿಟ್ಟಿನ ಮಿಶ್ರಣ ದಪ್ಪವಾಗುವ ತನಕವೂ ಬೇಯಿಸಬೇಕು.

* ಹಾಲಿನ ಮಿಶ್ರಣಕ್ಕೆ ಒಣ ಹಣ್ಣುಗಳು, ಏಲಕ್ಕಿ ಪುಡಿ, ಕೇಸರಿ ಎಳೆ, ಪನ್ನೀರು ಸೇರಿಸಿ.ಕೆಲವು ನಿಮಿಷದ ಬಳಿಕ ಸಕ್ಕರೆಯನ್ನು ಸೇರಿಸಿ. ಮಿಶ್ರಣವು ದಪ್ಪವಾಗುವವರೆಗೆ ಕುದಿಸಬೇಕು. ಇದೀಗ ರುಚಿಯಾದ ಪನ್ನೀರ್ ಪಾಯಸ ಸವಿಯಲು ಸಿದ್ಧವಾಗುತ್ತದೆ.

The post ಸೋಮವಾರಕ್ಕೆ ಮಾಡಿ ಸಿಹಿಯಾದ ಪನ್ನೀರ್ ಪಾಯಸ appeared first on Public TV.

Source: publictv.in

Source link