ಬೆಂಗಳೂರು: ಕೊರೊನಾ ಲಾಕ್​ಡೌನ್​ನಿಂದ ಬಡವರಿಗೆ ಉಚಿತವಾಗಿ ಊಟ ತಿಂಡಿ ನೀಡಲಾಗುತ್ತಿದೆ. ಇದೀಗ ಅಪ್ಪಾಜಿ ಕ್ಯಾಂಟೀನ್ ಕೂಡ ಮುಂದಿನ ಸೋಮವಾರದಿಂದ ಉಚಿತ ಊಟದ ವ್ಯವಸ್ಥೆ ಮಾಡಲಿದೆ.

ಮಾಜಿ ಪ್ರಧಾನಿ ಹೆಚ್.​ಡಿ ದೇವೇಗೌಡ ಹೆಸರಲ್ಲಿ ಉಚಿತ ಊಟ ನೀಡುವ ಕಾರ್ಯಕ್ರಮಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ ಶರವಣ ಚಾಲನೆ ನೀಡಲಿದ್ದಾರೆ. ಸೋಮವಾರದಿಂದ ಅಪ್ಪಾಜಿ ಮೊಬೈಲ್ ಕ್ಯಾಂಟೀನ್ ಚಾಲನೆ ನೀಡಲಿದ್ದಾರೆ. ‘ಬಡವರ ಬಂಧು ನಮ್ಮ ಅಪ್ಪಾಜಿ’ ಹೆಸರಲ್ಲಿ ಬಡವರಿಗೆ ಉಚಿತ ಊಟ ಸಿಗಲಿದೆ ಅಂತಾ ಟಿ.ಎ ಶರವಣ ಅಧಿಕೃತ ಘೋಷಣೆ ಮಾಡಿದ್ದಾರೆ.

ಈಗಾಗಲೇ ಅಪ್ಪಾಜಿ ಮೊಬೈಲ್ ಕ್ಯಾಂಟೀನ್​ನಲ್ಲಿ 5 ರೂಪಾಯಿಗೆ ಶರವಣ ಊಟ ನೀಡುತ್ತಿದ್ದಾರೆ. ಇದೀಗ ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ, ನಿರ್ಗತಿಕರಿಗೆ, ಕಾರ್ಮಿಕರಿಗೆ ಉಚಿತವಾಗಿ ಊಟ ನೀಡಲು ನಿರ್ಧಾರ ಮಾಡಿದ್ದಾರೆ.

The post ಸೋಮವಾರದಿಂದ ಅಪ್ಪಾಜಿ ಕ್ಯಾಂಟೀನ್​ನಲ್ಲೂ ಸಿಗಲಿದೆ ಉಚಿತ ಊಟ appeared first on News First Kannada.

Source: newsfirstlive.com

Source link