ಕೊಪ್ಪಳ: ಸೋಮವಾರದಿಂದ ಮೇ 30ರವರೆಗೆ ಕೊಪ್ಪಳದಲ್ಲಿ ಸಂಪೂರ್ಣ ಲಾಕ್​​ಡೌನ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಅಗತ್ಯ ವಸ್ತುಗಳನ್ನ ಮನೆ ಮನೆಗೆ ತಲುಪಿಸಲು ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿಕೊಂಡಿದೆ.

ನಗರದಲ್ಲಿ ಪ್ರತಿ ವಾರ್ಡ್​​ಗೆ ತರಕಾರಿ ಸೇರಿದಂತೆ ಅಗತ್ಯ ವಸ್ತು ಪೊರೈಸಲು ಕೋ ಆರ್ಡಿನೇಟರ್ ನೇಮಕ ಮಾಡಲಾಗಿದ್ದು, ಅವರ ಮೂಲಕ ಹೋಮ್ ಡೆಲಿವರಿ ಮಾಡಲಾಗವುದು. ಇನ್ನು ಹಳ್ಳಿಗಳಲ್ಲಿ ಪಂಚಾಯ್ತಿಗಳ ಮೂಲಕ ತರಕಾರಿ ಹಾಗೂ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಕೊಡಲಾಗಿದೆ.

ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನ ಹೆಚ್ಚಿಗೆ ಸೇರಬಾರದು ಎಂಬ ಕಾರಣಕ್ಕೆ ಹೋಮ್ ಡೆಲಿವರಿ ವ್ಯವಸ್ಥೆ ಮಾಡಲಾಗಿದೆ ಅಂತಾ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

The post ಸೋಮವಾರದಿಂದ ಕೊಪ್ಪಳ ಸಂಪೂರ್ಣ ಲಾಕ್​ಡೌನ್​​; ಅಗತ್ಯವಸ್ತುಗಳ ಹೋಮ್ ಡೆಲಿವರಿ ವ್ಯವಸ್ಥೆ appeared first on News First Kannada.

Source: newsfirstlive.com

Source link