ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ನಿಂದ ಸ್ಥಗಿತಗೊಂಡಿದ್ದ ಬಿಎಂಟಿಸಿ ಬಸ್ ಸೋಮವಾರದಿಂದ ನಗರದಾದ್ಯಂತ ಸಂಚರಿಸುವುದು ಖಚಿತವಾಗಿದೆ.

ನಾಳೆ ಹಾಗೂ ನಾಡಿದ್ದು ಬಸ್ ಸಿಬ್ಬಂದಿಗೆ ಕೊರೊನಾ ಟೆಸ್ಟ್ ನಡೆಸಲಾಗುತ್ತದೆ. ಕರ್ತವ್ಯಕ್ಕೆ ಹಾಜರಾಗುವ ಮುನ್ನ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರೋದ್ರಿಂದ ನಾಳೆ ಆಯಾಯ ಘಟಕದಲ್ಲಿ ಟೆಸ್ಟಿಂಗ್ ಕ್ಯಾಂಪ್ ಇರಿಸಲಾಗುತ್ತದೆ. ಹೀಗಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಘಟಕದ ವ್ಯವಸ್ಥಾಪಕರು ಈಗಾಗಲೇ ಸೂಚನೆ ನೀಡಿದ್ದಾರೆ.

ಎಲ್ಲಾ ಘಟಕದಲ್ಲಿಯೂ ಟೆಸ್ಟಿಂಗ್ ಕ್ಯಾಂಪ್ ಇರುತ್ತದೆ. ನಾಳೆ ಹಾಗೂ ನಾಡಿದ್ದು ಟೆಸ್ಟಿಂಗ್ ಕ್ಯಾಂಪ್ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಮೈಸೂರಲ್ಲಿ ಮರ್ಯಾದಾ ಹತ್ಯೆ – ಮಗಳನ್ನೇ ಕೊಂದು ಪೊಲೀಸರಿಗೆ ಶರಣಾದ ತಂದೆ..!

The post ಸೋಮವಾರದಿಂದ ಬಿಎಂಟಿಸಿ ಬಸ್ ಓಡಾಟ ಖಚಿತ appeared first on Public TV.

Source: publictv.in

Source link