ರಾಜ್ಯವನ್ನ ಅನ್​​ಲಾಕ್​​ ಮಾಡ್ಬೇಕೋ, ಬೇಡವೋ ಎಂಬ ಪ್ರಶ್ನೆಗಳಿಗೆ ನಿನ್ನೆಯಷ್ಟೇ ಸಿಎಂ ಉತ್ತರಿಸಿದ್ದಾರೆ. 11 ಜಿಲ್ಲೆಗಳನ್ನ ಹೊರತುಪಡಿಸಿ ಉಳಿದ 19 ಜಿಲ್ಲೆಗಳಲ್ಲಿ ಷರತ್ತುಬದ್ಧ ಲಾಕ್​ಡೌನ್ ಸಡಿಲಿಕೆ ಮಾಡಲಾಗಿದೆ. ಇದರ ನಡುವೆ ಇಷ್ಟು ದಿನಗಳಿಂದ ಪ್ರತಿನಿತ್ಯ ಕಡಿಮೆ ಬರ್ತಿದ್ದ ಹೊಸ ಕೊರೊನಾ ಪ್ರಕರಣಗಳು, ಇದೀಗ ಮತ್ತೆ ಏರಿಕೆಯಾಗ್ತಿರೋದು, ಆತಂಕ ಸೃಷ್ಟಿಸಿದೆ.

ಪ್ರತಿನಿತ್ಯ ರಾಜ್ಯದಲ್ಲಿ 30-40 ಸಾವಿರ ಬರ್ತಿದ್ದ ಹೊಸ ಕೊರೊನಾ ಕೇಸ್​ಗಳು, ಕಳೆದ 10 ದಿನಗಳ ಹಿಂದಷ್ಟೇ 10 ಸಾವಿರ ಕಡಿಮೆ ಕೇಸ್ ದಾಖಲಾಗಿತ್ತು. ಇದು ಲಾಕ್​​ಡೌನ್ ಮಾಡಿದ್ದರ ಪರಿಣಾಮ ಅಂತಲೇ ಭಾವಿಸಲಾಗಿತ್ತು. ಆದ್ರೀಗ, ಇದೆಲ್ಲಾ ಉಲ್ಟಾ ಹೊಡೆದಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 11,042 ಹೊಸ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿವೆ. ಇಷ್ಟು ದಿನ ಇಳಿಕೆಯಾಗಿದ್ದ ಪಾಸಿಟಿವಿಟಿ ರೇಟ್, ಮತ್ತೆ ಏರಿಕೆಯಾಗ್ತಿರೋದು ಆತಂಕ ಹುಟ್ಟು ಹಾಕಿದೆ.

ಮತ್ತೆ ಪಾಸಿಟಿವಿಟಿ ರೇಟ್ ಏರಿಕೆ

  • ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ- 15,721
  • ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಇಳಿಮುಖ
  • ರಾಜ್ಯದಲ್ಲಿ ನಿನ್ನೆ ಒಂದೇ ದಿನ ಮೃತಪಟ್ಟವರ ಸಂಖ್ಯೆ- 194
  • ರಾಜ್ಯದಲ್ಲಿ ಶೇ. 1.75 ಮರಣ ಪ್ರಮಾಣ ದಾಖಲಾಗಿದೆ
  • ರಾಜ್ಯದಲ್ಲಿ ನಿನ್ನೆ 6.58% ಪಾಸಿಟಿವಿಟಿ ದರ ದಾಖಲು
  • ಬೆಂಗಳೂರಿನಲ್ಲಿ ನಿನ್ನೆ 2,191 ಪಾಸಿಟಿವ್ ಕೇಸ್ ದಾಖಲು
  • ಬೆಂಗಳೂರಿನಲ್ಲಿ ನಿನ್ನೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ- 47

ಇದರ ಮಧ್ಯೆ, ನಿನ್ನೆಯಷ್ಟೇ ರಾಜ್ಯದ 19 ಜಿಲ್ಲೆಗಳಲ್ಲಿ ಷರತ್ತುಬದ್ದ ಲಾಕ್​ಡೌನ್ ಸಡಿಲಿಕೆ ಮಾಡಿ, ಸಿಎಂ ಆದೇಶ ಹೊರಡಿಸಿದ್ದಾರೆ. ಇದು ಕೂಡ ಮುಂದಿನ ದಿನಗಳಲ್ಲಿ ಭಾರೀ ಪರಿಣಾಮ ಬೀರಲಿದ್ದು, ಬೆಂಗಳೂರು ಅಲ್ಲದೇ, ಇತರೆ ಜಿಲ್ಲೆಗಳಲ್ಲೂ ಕೊರೊನಾ ಕೇಸ್ ಹೆಚ್ಚಳವಾದ್ರೂ ಆಶ್ಚರ್ಯಪಡಬೇಕಿಲ್ಲ.

The post ಸೋಮವಾರದಿಂದ ರಾಜ್ಯದಲ್ಲಿ ಅನ್​​ಲಾಕ್​; ಆತಂಕ ಸೃಷ್ಟಿಸಿದ ನಿನ್ನೆಯ ಕೊರೊನಾ ಕೇಸ್​ appeared first on News First Kannada.

Source: newsfirstlive.com

Source link