ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಗೆ ಬ್ರೇಕ್​ ಹಾಕಲು ಕ್ಲೋಸ್​​ ಡೌನ್ ಜಾರಿ ಮಾಡಿದ್ದ ಸರ್ಕಾರ, ಕೊರೊನಾ ಸೋಂಕಿನ ಪ್ರಕರಣಗಳ ಹೆಚ್ಚಳದ ಕಾರಣದಿಂದ ಲಾಕ್​​ಡೌನ್​ ಜಾರಿ ಮಾಡಲು ನಿರ್ಧರಿಸಿದೆ.

ಮುಖ್ಯಮಂತ್ರಿಗಳ ಕಚೇರಿಯಿಂದ ಲಾಕ್​ಡೌನ್ ಕುರಿತ ಮಾಹಿತಿ ಲಭ್ಯವಾಗಿದ್ದು, ಸೋಮವಾರ (ಮೇ 10)ದಿಂದ 10 ದಿನಗಳ ಕಾಲ ಲಾಕ್​​ಡೌನ್ ಜಾರಿ ಆಗಲಿದೆ. ಲಾಕ್​​ಡೌನ್​​ ವೇಳೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆ ವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ಅಲ್ಲದೇ ಕ್ಲೋಸ್​ಡೌನ್​ ವೇಳೆ ನೀಡಲಾಗಿದ್ದ ಎಲ್ಲಾ ವಿನಾಯಿಗಳನ್ನು ರದ್ದು ಪಡಿಸಿ ಕಠಿಣ ನಿಯಮಗಳನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ.

ಇಂದು ಬೆಳಗ್ಗೆಯಷ್ಟೇ ನಗರದ ಅಣ್ಣಮ್ಮ ದೇವಿ ದರ್ಶನ ಪಡೆದ ಬಳಿಕ ಮಾತನಾಡಿದ್ದ ಸಿಎಂ ಬಿಎಸ್​ವೈ, ರಾಜ್ಯದಲ್ಲಿ ದಿನೇ ದಿನೇ ಕೇಸ್ ಜಾಸ್ತಿ ಆಗುತ್ತಿದೆ. ಜನತಾ ಕರ್ಫ್ಯೂ ಯಾರು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಇನ್ನು ‌ಬಿಗಿ ಕ್ರಮ ಅನಿವಾರ್ಯವಾಗಿದ್ದು, ಲಾಕ್ ಡೌನ್ ಅನಿವಾರ್ಯ ಆಗಬಹುದು ಎಂದು ಹೇಳಿದ್ದರು. ಅಲ್ಲದೇ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಮಾತನಾಡಿ, ಆರೋಗ್ಯ ಇಲಾಖೆ ಲಾಕ್​​ಡೌನ್​ ಮಾಡುವತ್ತ ಒಲವು ಹೊಂದಿದೆ. ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದರು.

The post ಸೋಮವಾರದಿಂದ ರಾಜ್ಯದಲ್ಲಿ 10 ದಿನ ಲಾಕ್​​ಡೌನ್​​ ಜಾರಿ; ಅಧಿಕೃತ ಘೋಷಣೆಯೊಂದೇ ಬಾಕಿ appeared first on News First Kannada.

Source: newsfirstlive.com

Source link