ಬೆಂಗಳೂರು: 19 ಜಿಲ್ಲೆಗಳಲ್ಲಿ ಮುಂದಿನ ಸೋಮವಾರದಿಂದ ಲಾಕ್​ಡೌನ್ ಸಡಿಲಿಕೆಗೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಲಾಕ್​ಡೌನ್ ಸಡಿಲಿಕೆಗೆ ಮಾರ್ಗಸೂಚಿಯನ್ನ ಪ್ರಕಟಿಸಿದೆ.

ಪ್ರತಿ ದಿನ ಯಾವುದಕ್ಕೆಲ್ಲಾ ಅನುಮತಿ..?

  • ದಿನಸಿ ಖರೀದಿ ಅವಧಿ ಮಧ್ಯಾಹ್ನ 2ರವರೆಗೆ ವಿಸ್ತರಣೆ
  • ಬೀದಿ ಬದಿ ವ್ಯಾಪಾರಕ್ಕೆ ಮಧ್ಯಾಹ್ನ 2ರವರೆಗೆ ಅವಕಾಶ
  • ಬಾರ್‌ಗಳು ಮಧ್ಯಾಹ್ನ 2 ಗಂಟೆವರೆಗೆ ಓಪನ್ ಇರಲಿವೆ
  • ಬಾರ್‌ಗಳಲ್ಲಿ ಮದ್ಯ ಪಾರ್ಸೆಲ್‌ಗೆ ಮಾತ್ರ ಅವಕಾಶ
  • ಕಟ್ಟಡ ಕಾಮಗಾರಿ, ಸಾಮಗ್ರಿಗಳಿಗೆ ಸಂಪೂರ್ಣ ಅವಕಾಶ
  • ಕೈಗಾರಿಕೆಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಅವಕಾಶ
  • ಗಾರ್ಮೆಂಟ್ಸ್‌ಗಳಲ್ಲಿ ಶೇ.30ರಷ್ಟು ಸಿಬ್ಬಂದಿಗೆ ಅವಕಾಶ
  • ಪಾರ್ಕ್‌ಗಳಲ್ಲಿ ಬೆಳಗ್ಗೆ 5ರಿಂದ 10ರವರೆಗೆ ಅವಕಾಶ
  • ಕಟ್ಟಡ, ಸಿಮೆಂಟ್, ಸ್ಟೀಲ್ ಅಂಗಡಿಗಳಿಗೆ ಅವಕಾಶ
  • ಆಟೋ, ಟ್ಯಾಕ್ಸಿಗಳಲ್ಲಿ ಇಬ್ಬರಿಗೆ ಮಾತ್ರ ಅವಕಾಶ
  • ಹೋಟೆಲ್‌, ರೆಸ್ಟೋರೆಂಟ್‌ನಲ್ಲಿ ಪಾರ್ಸೆಲ್‌ಗೆ ಅವಕಾಶ
  • ಹೋಮ್‌ ಡೆಲಿವರಿಗೆ 24 ಗಂಟೆಯೂ ಅವಕಾಶ

ನೈಟ್​ ಕರ್ಫ್ಯೂಗೆ ಪ್ರತ್ಯೇಕ ಮಾರ್ಗಸೂಚಿ

  • ನೈಟ್‌ ಕರ್ಫ್ಯೂಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟ
  • ಸಂಜೆ 7ರಿಂದ ಬೆಳಗ್ಗೆ 5ರವರೆಗೆ ನೈಟ್​​ ಕರ್ಫ್ಯೂ
  • ತುರ್ತು ಆರೋಗ್ಯ ಸೇವೆಗೆ ಮಾತ್ರ ಅನುಮತಿ
  • ರಾತ್ರಿ ಪಾಳಿ ಕೆಲಸ ಮಾಡುವ ಸಂಸ್ಥೆಗಳಿಗೆ ಅವಕಾಶ
  • ಸಂಸ್ಥೆಯ ಐಡಿ ಕಾರ್ಡ್‌/ ಅನುಮತಿ ಪತ್ರ ಕಡ್ಡಾಯ
  • ಟೆಲಿಕಾಂ, ಇಂಟರ್ನೆಟ್‌ ಸೇವಾದಾರರಿಗೂ ಅನುಮತಿ
  • ಆಸ್ಪತ್ರೆ, ತುರ್ತು ಸೇವೆ, ಫಾರ್ಮಸಿಗೆ ಅನುಮತಿ
  • ಗೂಡ್ಸ್‌ ವಾಹನಗಳ ಓಡಾಟಕ್ಕೆ ನಿರ್ಬಂಧವಿಲ್ಲ
  • ರೈಲು, ವಿಮಾನ ಸೇವೆ ಪ್ರಯಾಣಿಕರಿಗೆ ಅನುಮತಿ
  • ನಿಲ್ದಾಣದಿಂದ ಆಟೋ, ಟ್ಯಾಕ್ಸಿ ಸೇವೆಗೆ ಅನುಮತಿ
  • ಆಯ್ದ ನಗರಗಳಲ್ಲಿ ಸಾರ್ವಜನಿಕ ಸಾರಿಗೆಗೆ ಅನುಮತಿ

ವೀಕೆಂಡ್ ಕರ್ಫ್ಯೂ ಮಾರ್ಗಸೂಚಿ

  • ವೀಕೆಂಡ್‌ ಕರ್ಫ್ಯೂಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟ
  • ಶುಕ್ರವಾರ ಸಂಜೆ 7ರಿಂದ ವೀಕೆಂಡ್‌ ಕರ್ಫ್ಯೂ ಆರಂಭ
  • ಸೋಮವಾರ ಬೆಳಗ್ಗೆ 5 ರವರೆಗೆ ವೀಕೆಂಡ್‌ ಕರ್ಫ್ಯೂ
  • ದಿನಸಿ ಖರೀದಿ ಅವಧಿ ಮಧ್ಯಾಹ್ನ 2ರವರೆಗೆ ವಿಸ್ತರಣೆ
  • ತುರ್ತು, ಅಗತ್ಯಸೇವೆಗೆ ಸಂಬಂಧಿಸಿದ ಕಚೇರಿ ಓಪನ್‌
  • ತುರ್ತು ಸೇವೆಗೆ ಸಂಬಂಧಿಸಿದ ಖಾಸಗಿ ಸಂಸ್ಥೆಗಳೂ ಓಪನ್‌
  • ಆಸ್ಪತ್ರೆಗೆ ತೆರಳುವ ರೋಗಿಯ ಸಂಬಂಧಿಕರಿಗೆ ಅನುಮತಿ
  • ಟೆಲಿಕಾಂ, ಇಂಟರ್ನೆಟ್‌ ಸೇವಾದಾರರಿಗೂ ಅನುಮತಿ
  • ಹೋಟೆಲ್‌, ರೆಸ್ಟೋರೆಂಟ್‌ನಲ್ಲಿ ಪಾರ್ಸೆಲ್‌ಗೆ ಅನುಮತಿ
  • ರೈಲು, ವಿಮಾನ ಸೇವೆ ಪ್ರಯಾಣಿಕರಿಗೆ ಅನುಮತಿ
  • ನಿಲ್ದಾಣದಿಂದ ಆಟೋ, ಟ್ಯಾಕ್ಸಿ ಸೇವೆಗೆ ಅನುಮತಿ

The post ಸೋಮವಾರದಿಂದ ಲಾಕ್ಡೌನ್ ಸಡಿಲಿಕೆ; ಹೊಸ ಮಾರ್ಗಸೂಚಿಯಲ್ಲಿ ಏನಿದೆ? appeared first on News First Kannada.

Source: newsfirstlive.com

Source link

Leave a comment