
ಮಹೇಶ್ ಬಾಬು
ಮಹೇಶ್ ಬಾಬು ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ ಬರೋಬ್ಬರಿ 75 ಕೋಟಿ ರೂಪಾಯಿ ಗಳಿಕೆ ಮಾಡಿತು. ಅನೇಕ ಕಡೆಗಳಲ್ಲಿ ಫ್ಯಾನ್ಸ್ ಶೋ ಆಯೋಜನೆ ಮಾಡಲಾಗಿತ್ತು. ಇದು ಸಿನಿಮಾ ಕಲೆಕ್ಷನ್ ಹೆಚ್ಚಲು ಸಹಕಾರಿ ಆಗಿತ್ತು.
‘ಸರ್ಕಾರು ವಾರಿ ಪಾಟ’ ಸಿನಿಮಾ (Sarkaru Vaari Paata Movie) ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡುತ್ತಿದೆ. ಮೇ 12 ರಂದು ರಿಲೀಸ್ ಆದ ಈ ಚಿತ್ರ ಕಲೆಕ್ಷನ್ ವಿಚಾರದಲ್ಲಿ ರಾಜಿ ಆಗುತ್ತಿಲ್ಲ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 200 ಕೋಟಿ ರೂಪಾಯಿ ಗಳಿಕೆ ಮಾಡುವತ್ತ ಹೆಜ್ಜೆ ಹಾಕುತ್ತಿದೆ. ಈ ಮೂಲಕ ಹೊಸ ದಾಖಲೆ ಬರೆಯಲು ಸಿನಿಮಾ ರೆಡಿ ಆಗಿದೆ. ಮಹೇಶ್ ಬಾಬು (Mahesh Babu) ಚಿತ್ರ ಸೋಮವಾರದ ಪರೀಕ್ಷೆ ಕೂಡ ಪಾಸ್ ಆಗಿದೆ. ಸದ್ಯದ ಮಟ್ಟಿಗೆ ಮುಂದಿನ ದಿನಗಳಲ್ಲಿ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಇದು ಚಿತ್ರಕ್ಕೆ ಸಹಕಾರಿ ಆಗಲಿದೆ.
ಮಹೇಶ್ ಬಾಬು ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ ಬರೋಬ್ಬರಿ 75 ಕೋಟಿ ರೂಪಾಯಿ ಗಳಿಕೆ ಮಾಡಿತು. ಅನೇಕ ಕಡೆಗಳಲ್ಲಿ ಫ್ಯಾನ್ಸ್ ಶೋ ಆಯೋಜನೆ ಮಾಡಲಾಗಿತ್ತು. ಇದು ಸಿನಿಮಾ ಕಲೆಕ್ಷನ್ ಹೆಚ್ಚಲು ಸಹಕಾರಿ ಆಗಿತ್ತು. ಆದರೆ, ಮೊದಲ ದಿನ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಒಂದು ವರ್ಗದ ಜನರು ಈ ಚಿತ್ರವನ್ನು ಇಷ್ಟಪಟ್ಟರು. ಮೇ 13ರಂದು ಈ ಚಿತ್ರ 27.50 ಕೋಟಿ ರೂಪಾಯಿ, ಮೇ 14ರಂದು 28.84 ಕೋಟಿ ರೂಪಾಯಿ, ಮೇ 15ರಂದು 29.12 ಕೋಟಿ ಗಳಿಸಿ 150 ಕೋಟಿ ರೂಪಾಯಿ ಕ್ಲಬ್ ಸೇರಿತು.