ಸೋಲನ್ನೇ ಕಾಣದ ಇಂಡಿಯಾ-ಇಂಗ್ಲೆಂಡ್ ತಂಡಗಳ ತಾಖತ್ತು ಹೇಗಿದೆ..?


ಅಂಡರ್​​ -19 ವಿಶ್ವಕಪ್​ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಪೈನಲ್​ ಫೈಟ್​​​ನಲ್ಲಿ ಇಂಡೋ-ಇಂಗ್ಲೆಂಡ್​ ಮುಖಾಮುಖಿಯಾಗ್ತಿದ್ದು, ಐತಿಹಾಸಿಕ ದಾಖಲೆ ಬರೆಯೋ ಲೆಕ್ಕಾಚಾರದಲ್ಲಿ ಯಶ್​ ಧುಲ್​ ಟೀಮ್​ ಇದೆ. ಅತ್ತ ಟೀಮ್​ ಇಂಡಿಯಾವನ್ನ ಹಣಿಯಲು ಇಂಗ್ಲೆಂಡ್​​ ತಂತ್ರ-ಪ್ರತಿತಂತ್ರಗಳ ಮೊರೆ ಹೋಗಿದೆ.

8 ಭಾರಿ ಫೈನಲ್​ ಪ್ರವೇಶ, 4 ಬಾರಿ ಚಾಂಪಿಯನ್​ ಪಟ್ಟ. ಇದು ಒಟ್ಟು 14 ಆವೃತ್ತಿಯ ಅಂಡರ್​ 19 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾದ ರೆಕಾರ್ಡ್​. ಅಂಡರ್​19 ವಿಶ್ವಕಪ್​ ಟೂರ್ನಿಯ ಮೋಸ್ಟ್​​ ಸಕ್ಸಸ್​ಫುಲ್ ​ ತಂಡವಾಗಿ ಗುರುತಿಸಿಕೊಂಡಿರೋ, ಭಾರತ ತಂಡ ಇದೀಗ ಮತ್ತೊಂದು ಸಾಧನೆ ಮಾಡಲು ಸಜ್ಜಾಗಿದೆ. ಕೆರಬಿಯನ್​ ಅಂಗಳದಲ್ಲಿ ನಡೆಯೋ ಕಾಳಗದಲ್ಲಿ ಇಂಗ್ಲೆಂಡ್​ ತಂಡವನ್ನ ಮಣಿಸಿ 5ನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಲು ಸಜ್ಜಾಗಿದೆ.

ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಅಜೇಯ ಓಟದ ಆತ್ಮವಿಶ್ವಾಸ
ವಿಂಡೀಸ್​​ ನೆಲದಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ ಟೀಮ್​ ಇಂಡಿಯಾವನ್ನ ಕೊರೊನಾ ಬಿಡದೇ ಕಾಡ್ತು. ತಂಡದ ಆಧಾರಸ್ಥಂಭವಾಗಿದ್ದ ಯಶ್​ ಧುಲ್​, ವೈಸ್​​​ಕ್ಯಾಪ್ಟ​ನ್​ ಶೇಕ್​ ರಶೀದ್​ ಸೋಂಕಿಗೆ ತುತ್ತಾದ್ರು. ಇಷ್ಟೇ ಅಲ್ಲ.. ಹಲವು ಆಟಗಾರರನ್ನೂ ಕೊರೊನಾ ಕಾಡಿತು. ಆದ್ರೆ, ಇದ್ಯಾವುದೂ ಟೀಮ್​ ಇಂಡಿಯಾಗೆ ಹಿನ್ನಡೆಯೇ ಆಗಲಿಲ್ಲ. ಲೀಗ್​ ಸ್ಟೇಜ್​ನ ಮೊದಲ ಪಂದ್ಯದಿಂದ ಫೈನಲ್​ವರೆಗೆ ಭಾರತದ್ದು ಅಜೇಯ ಓಟ. ಆಡಿದ ಒಂದೂ ಪಂದ್ಯದಲ್ಲಿ ಸೋಲನ್ನ ಕಾಣದಿರೋದೇ ಕ್ಯಾಂಪ್​ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.

ತಂಡದಲ್ಲಿರೋ ಪ್ರತಿಯೊಬ್ಬರು ಮ್ಯಾಚ್​ ವಿನ್ನರ್ಸ್​​..!
ಸೆಮಿಸ್​​ ಫೈಟ್​ನಲ್ಲಿ ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಭಾರತ 37 ರನ್​ಗಳಿಸುವಷ್ಟರಲ್ಲೇ 2 ವಿಕೆಟ್​​ ಕಳೆದುಕೊಂಡಿತ್ತು. ಇದರ ಬೆನ್ನಲ್ಲೇ, ಭಾರತ ಸೋಲುತ್ತೆ ಎಂದು ಹಲವರು ನಿರ್ಧಾರ ಮಾಡಿಬಿಟ್ಟುದ್ರು. ಆದ್ರೆ, ಆ ಬಳಿಕ ಕಣಕ್ಕಿಳಿದ ಶೇಕ್​ ರಶೀದ್​, ಯಶ್​ ಧುಲ್​ ಪಂದ್ಯದ ಹಣೆ ಬರಹವನ್ನೇ ಬದಲಿಸಿದ್ರು. ಬೌಲಿಂಗ್​ ವಿಭಾಗವಂತೂ ಸಂಘಟಿತ ಹೋರಾಟ ನಡೆಸ್ತು. ಇದೊಂದೆ ಅಲ್ಲ.. ಅದಕ್ಕೂ ಹಿಂದಿನ ಪಂದ್ಯಗಳಲ್ಲೂ ಒಬ್ಬರಲ್ಲ ಅಂದ್ರೆ ಇನ್ನೊಬ್ಬ ಆಟಗಾರ ಮ್ಯಾಚ್​​​ ವಿನ್ನಿಂಗ್​​ ಪರ್ಫಾಮೆನ್ಸ್​​ ನೀಡಿದ್ದಾರೆ. ಇದೇ ತಂಡದ ಬಲವೂ ಆಗಿದೆ.

Image

ಅಂಗ್​ಕ್ರಿಶ್​ ರಘುವಂಶಿ, ಹರ್ನೂರ್​ ಸಿಂಗ್​, ಯಶ್​​ ಧುಲ್​ ಹಾಗೂ ಶೇಕ್​ ರಶೀದ್​.. ಈ ನಾಲ್ವರು ಬ್ಯಾಟ್ಸ್​​ಮನ್​ಗಳು ಸಾಲಿಡ್​ ಫಾರ್ಮ್​ನಲ್ಲಿದ್ದಾರೆ. ಇನ್ನು ರವಿಕುಮಾರ್​, ರಾಜವರ್ಧನ್​ ಬೌಲಿಂಗ್​ ವಿಭಾಗದ ಬಲ ಹೆಚ್ಚಿಸಿದ್ರೆ, ವಿಕ್ಕಿ ಓಟ್ಸ್‌ವಾಲ್ ಸ್ಪಿನ್​​ ಅಸ್ತ್ರವನ್ನ ಸಾಲಿಡ್​ ಆಗೇ ಪ್ರಯೋಗಿಸ್ತಿದ್ದಾರೆ. ಹಾಗಿದ್ರೂ ಇಂದು ಎಚ್ಚರಿಕೆಯ ಆಟವಾಡಬೇಕಿದೆ. ಯಾಕಂದ್ರೆ ಎದುರಾಳಿ ಇಂಗ್ಲೆಂಡ್​ ಕೂಡ ಬಲಿಷ್ಠವಾಗಿದೆ.

ಭಾರತ ಮಾತ್ರವಲ್ಲ.. ಇಂಗ್ಲೆಂಡ್​ ಕೂಡ ಟೂರ್ನಿ ಸೋಲನ್ನೇ ಕಂಡಿಲ್ಲ. ಆಡಿದ 5 ಪಂದ್ಯಗಳಲ್ಲೂ ಜಯ ಸಾಧಿಸಿ 24 ವರ್ಷಗಳ ಬಳಿಕ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಎಲ್ಲಾ ಪಂದ್ಯಗಳಲ್ಲೂ ಆಲ್​ರೌಂಡ್​​ ಪ್ರದರ್ಶನ ನೀಡಿರುವ ಟಾಮ್​ ಪ್ರೆಸ್ಟ್​ ಪಡೆ ಟ್ರೊಫಿ ಟಫ್​ ಫೈಟ್​ ನೀಡಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಎಚ್ಚರಿಕೆಯ ಆಟವಾಡಬೇಕಿದೆ.

News First Live Kannada


Leave a Reply

Your email address will not be published.