ಸೋಲಾರ್​ಗೆ ಮತ್ತಷ್ಟು ಪವರ್; ಭಾರತ ನೇತೃತ್ವದ ಒಕ್ಕೂಟಕ್ಕೆ 101ನೇ ದೇಶವಾಗಿ ಸೇರಿದ ಅಮೆರಿಕ


ನವದೆಹಲಿ: ಭಾರತದ ನೇತೃತ್ವದ ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟಕ್ಕೆ (ISA: International Solar Alliance) ಅಮೆರಿಕ ಅಧಿಕೃತವಾಗಿ ಸೇರ್ಪಡೆ ಆಗಿದೆ. ಅಧ್ಯಕ್ಷ ಜೋ ಬೈಡನ್​ ಅವರ ವಿಶೇಷ ಅಧಿಕಾರಿ ಜಾನ್ ಕರ್ರಿ ನಿನ್ನೆ ಸಹಿ ಹಾಕುವ ಮೂಲಕ ಸೋಲಾರ್ ಒಕ್ಕೂಟದ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.

ಸೋಲಾರ್ ಒಕ್ಕೂಟದ 101ನೇ ಸದಸ್ಯ ರಾಷ್ಟ್ರವಾಗಿ ಅಮೆರಿಕ ಸೇರ್ಪಡೆಗೊಂಡಿದೆ. ಗ್ಲಾಸ್ಗೋದಲ್ಲಿ ನಡೆದ COP26 ಹವಾಮಾನ ಶೃಂಗಸಭೆಯ ಒಪ್ಪಂದದ ಪ್ರಕಾರವೇ ಅಮೆರಿಕ ಸಹಿ ಹಾಕಿದೆ. ಸೌರಶಕ್ತಿಯ ಕ್ಷಿಪ್ರ ಬಳಕೆಗೆ ಅಮೆರಿಕ ಸದಸ್ಯತ್ವ ಪ್ರಮುಖ ಹೆಜ್ಜೆಯಾಗಿದೆ ಎಂದು ಕೆರಿ ಬಣ್ಣಿಸಿದ್ದಾರೆ.

ಐಎಸ್​ಎ ಒಕ್ಕೂಟಕ್ಕೆ ಸೇರುತ್ತಿರೋದು ತುಂಬಾ ಖುಷಿ ತಂದಿದೆ. ಅದರಲ್ಲೂ ಈ ಒಕ್ಕೂಟಕ್ಕೆ ಪ್ರಧಾನಿ ಮೋದಿ ನೇತೃತ್ವ ಅನ್ನೋದು ಇನ್ನೊಂದು ವಿಶೇಷವಾಗಿದೆ. ಸದೀರ್ಘ ಸಮಯದ ಬಳಿಕ ನಮಗೆ ಇದು ಸಾಧ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಕ್ಷಿಪ್ರಗತಿಯ ಸೋಲಾರ್ ನಿಯೋಜನೆಗೆ ಈ ಒಕ್ಕೂಟ ಪ್ರಮುಖ ಕೊಡುಗೆ ನೀಡಲಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇದು ವರದಾನವಾಗಲಿದೆ ಎಂದು ಕೆರ್ರಿ ತಿಳಿಸಿದ್ದಾರೆ. ಇನ್ನು ಅಮೆರಿಕಾ ನಿರ್ಧಾರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.

ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟಕ್ಕೆ ಅಮೆರಿಕ ಸೇರ್ಪಡೆ ಆಗಿರೋದನ್ನ ಭಾರತ ಸ್ವಾಗತಿಸಿದೆ. ಸೋಲಾರ್​​​​ಗೆ ಮತ್ತಷ್ಟು ಪವರ್ ಸಿಕ್ಕಿದೆ. ಅಮೆರಿಕ COP26 ನಲ್ಲಿ ಐಎಸ್​ಎಗೆ ಸೇರುತ್ತಿರೋದನ್ನ ಆತ್ಮೀಯವಾಗಿ ಭಾರತ ಸ್ವಾಗತಿಸುತ್ತದೆ ಎಂದು ಹೇಳಿದೆ.

 

News First Live Kannada


Leave a Reply

Your email address will not be published. Required fields are marked *