ಸೋಲಿಸಿದ ಟೀಂ ಜತೆಗೆ ಕೂತು ಎಣ್ಣೆ ಪಾರ್ಟಿ ಮಾಡಿದ ಇಂಗ್ಲೆಂಡ್​ ಕ್ಯಾಪ್ಟನ್​​.. ಫ್ಯಾನ್ಸ್​ ಗರಂ


ಆಸ್ಟ್ರೇಲಿಯಾ-ಇಂಗ್ಲೆಂಡ್​ ನಡುವೆ ನಡೆದ ಐದು ಪಂದ್ಯಗಳ ಆ್ಯಷಸ್​ ಟೆಸ್ಟ್​ ಸರಣಿಯಲ್ಲಿ ಪ್ಯಾಟ್​​ ಕಮಿನ್ಸ್​ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ಒಂದೇ ಒಂದು ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗದ ಇಂಗ್ಲೆಂಡ್​, 4-0 ಅಂತರದಲ್ಲಿ ಹೀನಾಲು ಸೋಲು ಕಂಡಿದ್ದು, ಒಂದು ಪಂದ್ಯದಲ್ಲಿ ಮಾತ್ರ ಡ್ರಾ ಸಾಧಿಸಲು ಯಶಸ್ಸು ಕಂಡಿತು. ಆದರೆ ಕಳಪೆ ಪ್ರದರ್ಶನ ನೀಡಿದ ಇಂಗ್ಲೆಂಡ್​​​ ವಿರುದ್ಧ ತಮ್ಮ ದೇಶದ ಮಾಜಿ ಕ್ರಿಕೆಟಿಗರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು.

ಜೋ ರೂಟ್​ ಅವರನ್ನು ನಾಯಕತ್ವದಿಂದ ಅವರನ್ನು ಕಿತ್ತು ಹಾಕಿ ಎಂದೆಲ್ಲಾ ಒತ್ತಾಯ ಮಾಡಿದ್ದರು. ಇದೀಗ ಮತ್ತೊಂದು ವಿಷಯಕ್ಕೆ ಜೋ ರೂಟ್​​ ವಿರುದ್ಧ ಹರಿಹಾಯ್ದಿದ್ದಾರೆ. ಆ್ಯಷಸ್ ಟೆಸ್ಟ್​​​ ಸರಣಿ ಸೋತರೂ ಆಸ್ಟ್ರೇಲಿಯಾ ಆಟಗಾರರ ಜೊತೆ ಪಾರ್ಟಿ ಮಾಡಿರುವ ಜೋ ರೂಟ್​ ಅವರ ವಿಡಿಯೋವೊಂದು ವೈರಲ್​ ಆಗ್ತಿದೆ.

ಈ ವಿಡಿಯೋ ನೋಡಿದ ಅಭಿಮಾನಿಗಳು, ಜೋ ರೂಟ್​ ವಿರುದ್ಧ ಕಿಡಿಕಾರಿದ್ದಾರೆ. ಬದ್ದ ಎದುರಾಳಿ ವಿರುದ್ಧ ಸರಣಿ ಸೋತಿರುವ ಯಾವುದೇ ಬೇಸರ ಅವರಲ್ಲಿ ಕಾಣುತ್ತಿಲ್ಲ. ಕುಡಿದು ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳುವ ಮೂಲಕ ಅವಮಾನ ಮಾಡಿದ್ದಾರೆ ಎಂದು ಇಂಗ್ಲೆಂಡ್​ ಕ್ರಿಕೆಟ್ ಫ್ಯಾನ್ಸ್​ ಬೇಸರ ವ್ಯಕ್ತಪಡಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *