ಭಾರತ – ನ್ಯೂಜಿಲೆಂಡ್​​ ನಡುವಿನ ಹೈವೋಲ್ಟೆಜ್​ ಫೈಟ್​​​ನ ಕುತೂಹಲ ದಿನದಿಂದ ದಿನಕ್ಕೇ ಹೆಚ್ಚುತ್ತಲೇ ಇದೆ. ಪ್ರತಿದಿನ ಪಂದ್ಯದ ಬಗ್ಗೆ ಒಂದಲ್ಲ ಒಂದು ಪ್ರಿಡಿಕ್ಷನ್​ ನಡೆಯುತ್ತಲೇ ಇವೆ. ಪಂದ್ಯ ಕೀ ಪ್ಲೇಯರ್​​​ ಯಾರಗಲಿದ್ದಾರೆ..? ಯಾವ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿದೆ..? ಹಲವು ಆಯಾಮಗಳಲ್ಲಿ ಚರ್ಚೆಗಳು ನಡೆದಿವೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​​ ವಿರುದ್ಧ ಅಮೋಘ ಟೀಮ್​ ಇಂಡಿಯಾದ ಅಮೋಘ ಸಾಧನೆ ನೋಡಿರುವ ಅಭಿಮಾನಿಗಳು ಭಾರತ ಚಾಂಪಿಯನ್​ ಪಟ್ಟಕ್ಕೇರೋದು ಕನ್​ಫರ್ಮ್​ ಅನ್ನೋ ಲೆಕ್ಕಾಚಾರಕ್ಕೆ ಬಂದಿದ್ದಾರೆ.

ಆಸ್ಟ್ರೇಲಿಯಾ ಸರಣಿಯಲ್ಲಿ ಅನುಭವಿಗಳ ಅಲಭ್ಯತೆಯಲ್ಲಿ ಸವಾಲುಗಳ ನಡುವೆ ಯುವ ಆಟಗಾರ ತಂಡ ಕಾಂಗರೂ ನಾಡಲ್ಲಿ ಮ್ಯಾಜಿಕ್​ ಮಾಡಿತು. ಆ ಬಳಿಕ ತವರಿನಲ್ಲಿ ನಡೆದ ಇಂಗ್ಲೆಂಡ್​​ ವಿರುದ್ಧದ ಸರಣಿಯಲ್ಲೂ ಭಾರತದ್ದೇ ಪರಾಕ್ರಮ. ಈ ಎರಡೂ ಸರಣಿಗಳಲ್ಲಿ ಟೀಮ್​ ಇಂಡಿಯಾ ಆಟಗಾರರು ತೋರಿರುವ ಪಾಸಿಟಿವ್​ ಆ್ಯಟಿಟ್ಯೂಡ್,​​ ಇದೀಗ ಅಭಿಮಾನಿಗಳಲ್ಲೂ ಗೆಲುವಿನ ಭರವಸೆ ಮೂಡಿಸಿದೆ. ಆದ್ರೆ, ಸೌತಾಂಪ್ಟನ್​ ಅಂಗಳ ರೆಕಾರ್ಡ್​ ಕೊಹ್ಲಿ ಪಡೆಯ ಗೆಲುವಿಗೆ ವಿರುದ್ಧವಾಗಿವೆ.

ಅನ್​ಲಕ್ಕಿ ಪಿಚ್​​​ನಲ್ಲಿ ಮಹತ್ವದ ಫೈಟ್​​​ ಆಡಬೇಕಿದೆ ಭಾರತ..!
ರೋಸ್​​​ಬೌಲ್​ ಅಂಗಳದ ಹಣೆಬರಹ ಬದಲಾಗುತ್ತಾ ..?

ಟೆಸ್ಟ್​​ ಚಾಂಪಿಯನ್​ಶಿಪ್​ ಟೂರ್ನಿ ಆಯೋಜನೆಯಾದಾಗ ಫೈನಲ್​ ಪಂದ್ಯವನ್ನ ಕ್ರಿಕೆಟ್​​ ಕಾಶಿ ಲಾರ್ಡ್ಸ್​​ ಅಂಗಳದಲ್ಲಿ ಆಯೋಜಿಸಲಾಗಿತ್ತು. ಆದ್ರೆ, ಕೊರೊನಾತಂಕದ ಹಿನ್ನೆಲೆಯಲ್ಲಿ ಮಹತ್ವದ ಪಂದ್ಯವನ್ನ ಸೌತಾಂಪ್ಟನ್​ನ ರೋಸ್​ ಬೌಲ್​ ಅಂಗಳಕ್ಕೆ ಸ್ಥಳಾಂತರಿಸಲಾಗಿದೆ. ಲಾರ್ಡ್​​ ಅಂಗಳದಿಂದ ರೋಸ್​​ ಬೌಲ್​​​​ ಅಂಗಳಕ್ಕೆ ಪಂದ್ಯ ಶಿಫ್ಟ್​ ಆದಾಗಲೇ ಪಂದ್ಯದ ಗೆಲುವು ಅರ್ಧ ಕಿವೀಸ್​​ ಪರ ವಾಲಿದೆ. ಸೌತಾಂಪ್ಟನ್​ ಟೀಮ್​ ಇಂಡಿಯಾ ಪಾಲಿಗೆ ಅನ್​ಲಕ್ಕಿ ಪಿಚ್ ಅನ್ನೋದೆ ಇದಕ್ಕೆ ಕಾರಣವಾಗಿದೆ​.

ಸೌತಾಂಪ್ಟನ್​ ಮೈದಾನದಲ್ಲಿ ಧೋನಿ ಹಾಗೂ ವಿರಾಟ್​​ ಕೊಹ್ಲಿ ಈ ಇಬ್ಬರ ನಾಯಕತ್ವದಲ್ಲಿ ಟೀಮ್​ ಇಂಡಿಯಾ ಟೆಸ್ಟ್​ ಪಂದ್ಯಗಳನ್ನಾಡಿದೆ. 2014ರಲ್ಲಿ ಧೋನಿ ಸಾರಥ್ಯದಲ್ಲಿ ಸೋಲುಂಡರೇ, 2018ರಲ್ಲಿ ಕೊಹ್ಲಿ ಸಾರಥ್ಯದಲ್ಲಿ ತಂಡ ಸೋಲುಂಡಿದೆ. ಇದೇ ಈ ಬಾರಿಯ ಪ್ರತಿಷ್ಠಿತ ಕದನದಲ್ಲಿ ಟೀಮ್​ ಇಂಡಿಯಾ ಗೆಲ್ಲುತ್ತಾ ಅನ್ನೋ ಪ್ರಶ್ನೆ ಬಲವಾಗಿ ಮೂಡುವಂತೆ ಮಾಡಿರೋದು..!

ಸೌತ್​ಹ್ಯಾಂಪ್ಟನ್​ನಲ್ಲಿ ಟೀಮ್​ ಇಂಡಿಯಾ ‘ಟೆಸ್ಟ್​’
ವರ್ಷ                                        ಫಲಿತಾಂಶ
2014                                  266 ರನ್​ಗಳ ಸೋಲು
2018                                   60 ರನ್​ಗಳ ಸೋಲು

ಆಡಿದ 2 ಟೆಸ್ಟ್​​ ಪಂದ್ಯಗಳಲ್ಲಿ ಮಾತ್ರವಲ್ಲ..! ರೋಸ್​ಬೌಲ್​​ ಅಂಗಳದಲ್ಲಿ ಈವರೆಗೆ ಆಡಿದ 5 ಏಕದಿನ ಪಂದ್ಯಗಳಲ್ಲೂ ಗೆದ್ದಿರೋದು 2ರಲ್ಲಿ ಮಾತ್ರ. ಅದರಲ್ಲಿ ಒಂದು ಜಯ 2007ರಲ್ಲಿ ಬಂದಿದ್ರೆ, ಇನ್ನೊಂದು ಬಾರಿ ಗೆದ್ದಿರೋದು ಕ್ರಿಕೆಟ್​​ ಶಿಶು ಅಫಘಾನಿಸ್ತಾನದ ವಿರುದ್ಧ ಕಳೆದ ವಿಶ್ವಕಪ್​ನಲ್ಲಿ. ಅದೂ ಕೂಡ ಪ್ರಯಾಸದ ಗೆಲುವು ಅನ್ನೋದನ್ನ ಮರೆಯುವಂತಿಲ್ಲ..!

ಈ ಅನ್​ಲಕ್ಕಿ ಲೆಕ್ಕಾಚಾರದ ಆಚೆಗೂ 2018ರ ಟೆಸ್ಟ್​​ ಪಂದ್ಯದಲ್ಲಿ ನಡೆಸಿದ್ದ ವಿರೋಚಿತ ಹೋರಾಟ ತಂಡದಲ್ಲಿ ಆತ್ಮವಿಶ್ವಾಸವನ್ನ ಹೆಚ್ಚಿಸಿದೆ. ಆ ಪಂದ್ಯದಲ್ಲಿ ಇಂಗ್ಲೆಂಡ್​​ ಬ್ಯಾಟ್ಸ್​​ಮನ್​ಗಳನ್ನ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಟೀಮ್​ ಇಂಡಿಯಾ ಬೌಲರ್​​ಗಳು ಯಶಸ್ಸಿಯಾಗಿದ್ದೇ ತಂಡದ ವಿಶ್ವಾಸಕ್ಕೆ ಕಾರಣವಾಗಿರೋದು. ಅಂದು ಪರಾಕ್ರಮ ಮೆರೆದಿದ್ದ ಜಸ್​ಪ್ರಿತ್​ ಬೂಮ್ರಾ, ಇಶಾಂತ್​ ಶರ್ಮಾ, ಮೊಹಮದ್​ ಶಮಿ ಹಾಗೂ ರವಿಚಂದ್ರನ್​ ಅಶ್ವಿನ್​ ಈ ಪ್ರತಿಷ್ಠೆಯ ಹೋರಾಟದಲ್ಲೂ ತಂಡದಲ್ಲಿದ್ದಾರೆ.

ಅಂತಿಮವಾಗಿ ರೋಸ್​ಬೌಲ್​ ಮೈದಾನದ ಅಂಕಿ-ಅಂಶಗಳೆಲ್ಲವೂ ಟೀಮ್​ ಇಂಡಿಯಾ ಗೆಲುವಿನ ವಿರುದ್ಧವಾಗಿಯೇ ಇರೋದಂತೂ ಸತ್ಯ. ಹಾಗೆಂದ ಮಾತ್ರಕ್ಕೆ ಗಾಬಾ ಮೈದಾನದಲ್ಲಿ ಅಜೇಯವಾಗಿದ್ದ ಆಸ್ಟ್ರೇಲಿಯಾ ತಂಡವನ್ನ ಸೋಲಿಸಿ ಇತಿಹಾಸ ರಚಿಸಿದ್ದ ಟೀಮ್​​ಇಂಡಿಯಾಗೆ ರೋಸ್​ಬೌಲ್​ ಅಂಗಳದಲ್ಲೂ ಮ್ಯಾಜಿಕ್​ ಮಾಡೋ ಸಾಮರ್ಥ್ಯವಿದೆ ಅನ್ನೋದನ್ನ ಅಲ್ಲಗಳೆಯುವಂತಿಲ್ಲ.

The post ಸೌತ್​ಹ್ಯಾಂಪ್ಟನ್​ ಪಿಚ್ ಯಾರಿಗೆ ಲಾಭ..? ಟೀಮ್ ಇಂಡಿಯಾ ರೆಕಾರ್ಡ್ ಹೇಗಿದೆ..? appeared first on News First Kannada.

Source: newsfirstlive.com

Source link