ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ಪರ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ನಾಯಕ ಟೆಂಬಾ ಬವುಮಾ ಬ್ಯಾಟಿಂಗ್ ಅನ್ನ ಗೌತಮ್ ಗಂಭೀರ್ ಗುಣಗಾನ ಮಾಡಿದ್ದಾರೆ.
ಟೆಂಬಾ ಬವುಮಾ ಅವರ ಅದ್ಭುತ ಆಟಕ್ಕೆ ಮೆಚ್ಚುಗೆ ನೀಡಲೇಬೇಕು. ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಬವೂಮಾ ನಿಭಾಯಿಸಬೇಕಿರುವ ಪಾತ್ರವೇ ಅದ್ಭುತವಾಗಿತ್ತು. ಅವರ ಬ್ಯಾಟಿಂಗ್ ಗಮನಿಸಿ, ಕ್ವಿಂಟನ್ ಡಿ ಕಾಕ್, ಏಡೆನ್ ಮಾರ್ಕರಮ್, ರಾಸಿ ವ್ಯಾನ್ ಡೆರ್ ಡುಸೆನ್, ಡೇವಿಡ್ ಮಿಲ್ಲರ್ ಅವರಂತಹ ಪವರ್ ಹಿಟ್ಟರ್ಗಳು ತಂಡದಲ್ಲಿದ್ದಾರೆ. ಹೀಗಾಗಿ ಕ್ರೀಸ್ನ ಇನ್ನೊಂದು ತುದಿಯನ್ನ ಕಾಯ್ದುಕೊಳ್ಳುವಂತಹ ಬ್ಯಾಟ್ಸ್ಮನ್ ಬೇಕು. ಬವುಮಾ ಆ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.
ಹೀಗಾಗಿ ಭಾರತ ತಂಡದ ಬೌಲಿಂಗ್ ಪ್ರದರ್ಶನ ಕೆಟ್ಟದಾಗಿತ್ತು ಎಂದು ನಾನು ಹೇಳುವುದಿಲ್ಲ. ಏಕೆಂದರೆ ಇಲ್ಲಿ ಬ್ಯಾಟ್ಸ್ಮನ್ಗಳ ಪ್ರಾಬಲ್ಯವನ್ನು ಮೆಚ್ಚಿಕೊಳ್ಳಬೇಕಾಗುತ್ತದೆ. ಟೆಂಬಾ ಬವುಮಾ ಉತ್ತಮ ಲಯದಲ್ಲಿದ್ದಾರೆ. ಟೆಸ್ಟ್ ಸರಣಿಯಲ್ಲೂ ಅವರು ಉತ್ತಮವಾಗಿ ಆಡಿದ್ದರು. ಅದೇ ಲಯವನ್ನು ಒಡಿಐ ಸರಣಿಯಲ್ಲಿ ಕಾಯ್ದುಕೊಂಡಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.
The post ಸೌತ್ ಆಫ್ರಿಕಾದ ಈ ಆಟಗಾರ ಬ್ಯಾಟಿಂಗ್ಗೆ ಗೌತಮ್ ಗಂಭೀರ್ ಭಾರೀ ಮೆಚ್ಚುಗೆ appeared first on News First Kannada.