ಸೌತ್​ ಆಫ್ರಿಕಾ ಪ್ರವಾಸದಲ್ಲಿ ಅಶ್ವಿನ್​ಗೆ ಪ್ಲೇಯಿಂಗ್​-XI​ನಲ್ಲಿ ಸ್ಥಾನ ಸಿಗೋದು ಡೌಟ್​..! ಯಾಕೆ ಗೊತ್ತಾ..?


ಸೌತ್ ಆಫ್ರಿಕಾ ಸರಣಿಗೆ ಟೀಮ್ ಇಂಡಿಯಾ ಪ್ರಕಟಕ್ಕೆ ಕೌಂಡ್​​​ಡೌನ್ ಶುರುವಾಗಿದ್ದೇ ತಡ, ಈ ಬೆನ್ನಲ್ಲೇ ಮತ್ತೆ ಆಫ್ ಸ್ಪಿನ್ನರ್​ ಅಶ್ವಿನ್​ ಕುರಿತ ಚರ್ಚೆಗಳು ಮುನ್ನಲೆಗೆ ಬಂದಿವೆ. ಕಿವೀಸ್ ವಿರುದ್ಧದ ಅತ್ಯುತ್ತಮ ಪ್ರದರ್ಶನ ನೀಡಿರೋ ಅಶ್ವಿನ್, ಮುಂದಿನ ಪ್ರವಾಸದ ಪ್ಲೇಯಿಂಗ್​ ಇಲೆವೆನ್​ನಲ್ಲಿ ಕಾಣಿಸಿಕೊಳ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಸೌತ್​ ಆಫ್ರಿಕಾ ಸರಣಿ ಹೊತ್ತಲ್ಲಿ ಯಾಕೀ ಪ್ರಶ್ನೆ..?
ಪ್ರತಿಷ್ಠಿತ ಸೌತ್​ ಸರಣಿ ಗೆಲುವಿಗೆ ಟೀಮ್ ಇಂಡಿಯಾ ಸ್ಕೆಚ್ ಹಾಕಿದೆ. ಆದ್ರೆ, ಈ ಸರಣಿಗಾಗಿ ಟೀಮ್ ಇಂಡಿಯಾ, ಆಫ್ರಿಕಾಗೆ ತೆರಳುವ ಮುನ್ನವೇ ವಿಶ್ಲೇಷಣೆಗಳು ಜೋರಾಗಿ ನಡೀತಿವೆ. ಅದರಲ್ಲೂ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ರವಿಚಂದ್ರನ್ ಅಶ್ವಿನ್​, ಮತ್ತೆ ಬೆಂಚ್ ಕಾಯಬೇಕಾಗುತ್ತಾ ಎಂಬ ಅನುಮಾನ ಹುಟ್ಟುಹಾಕಿದೆ.

ನ್ಯೂಜಿಲೆಂಡ್ ಸಿರೀಸ್​ನಲ್ಲಿ ಅಶ್ವಿನ್​ ಅಮೋಘ ಸಾಧನೆ​..!
ಇತ್ತಿಚೆಗಷ್ಟೇ ಮುಗಿದ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಗೆಲುವಿನಲ್ಲೂ ರವಿಚಂದ್ರನ್ ಅಶ್ವಿನ್ ಪಾತ್ರ ಮಹತ್ವದ್ದು. ಕಾನ್ಪುರದ ಸ್ಲೋ ಆ್ಯಂಡ್ ಲೋ ಪಿಚ್​ನಲ್ಲಿ ವಿಕೆಟ್ ಉರುಳಿಸಿ ತಂಡಕ್ಕೆ ಆಸರೆಯಾಗಿದ್ದ ಅಶ್ವಿನ್, ನಂತ್ರ ಮುಂಬೈ ಟೆಸ್ಟ್​ನಲ್ಲೂ ಮ್ಯಾಜಿಕಲ್​ ಸ್ಪೆಲ್ ಮಾಡಿದ್ದರು. ಒಟ್ಟು 14 ವಿಕೆಟ್ ಉರುಳಿಸಿ ಮ್ಯಾನ್ ಆಫ್​ ದ ಸಿರೀಸ್ ಕಿರೀಟವನ್ನ ಮುಡಿಗೇರಿಸಿಕೊಂಡರು. ಅಷ್ಟೇ ಅಲ್ಲ.. ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್​ರ ಗರಿಷ್ಠ ವಿಕೆಟ್ ದಾಖಲೆ ಬ್ರೇಕ್ ಮಾಡಿ, ಭಾರತದ ಪರ 2ನೇ ಗರಿಷ್ಠ ವಿಕೆಟ್ ಪಡೆದ ಸ್ಪಿನ್ನರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಇಷ್ಟೆಲ್ಲಾ ರೆಡ್​ ಹಾಟ್​​ ಫಾರ್ಮ್​ನಲ್ಲಿದ್ದರೂ ಮುಂದಿನ ಸರಣಿಯಲ್ಲಿ ಅಶ್ವಿನ್​ಗೆ ಸ್ಥಾನ ಅನುಮಾನವಾಗಿದೆ.

ಸೌತ್​ ಆಫ್ರಿಕಾ ಪ್ರವಾಸದಲ್ಲಿ ಅಶ್ವಿನ್​ಗೆ ಸಿಗುತ್ತಾ ಪ್ಲೇಯಿಂಗ್​-XI ಸ್ಥಾನ..?
ಇಂಥದ್ದೊಂದು ಪ್ರಶ್ನೆಗೆ ಕಾರಣ ಸೌತ್​ ಆಫ್ರಿಕಾದ ಪಿಚ್ ಕಂಡೀಷನ್ಸ್ ಆಗಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್​ನಂತೆ ಸೌತ್​ ಆಫ್ರಿಕಾ ಪಿಚ್​ ಕೂಡ ಸ್ಪಿನ್​​ಗೆ ಬೌಲರ್​ಗಳಿಗೆ ವ್ಯತಿರಿಕ್ತವೇ ಆಗಿದೆ. ಬೌನ್ಸ್​​, ಸ್ವಿಂಗ್​ ಹೊಂದಿರೋ ಸೌತ್​ ಆಫ್ರಿಕಾದ ಹಾರ್ಡ್​​ ಪಿಚ್​ಗಳು ವೇಗಿಗಳಿಗೆ ಹೆಚ್ಚು ಸಹಕಾರಿ. ಹೀಗಾಗಿ ಸ್ಪಿನ್​ನಲ್ಲಿ ಮಹತ್ವದ ಪಾತ್ರ ನಿರ್ವಹಿಸೋದು ಅನುಮಾನವಾಗಿದೆ. ಇದೇ ಕಾರಣಕ್ಕೆ ಪ್ರತಿಷ್ಠಿತ ಸೌತ್​ ಆಫ್ರಿಕಾ ಪ್ರವಾಸದಲ್ಲೂ ಅಶ್ವಿನ್​ಗೆ ಪ್ಲೇಯಿಂಗ್ ಇಲೆವೆನ್​​ನಲ್ಲಿ ಸ್ಥಾನ ಬಹುತೇಕ ಡೌಟ್ ಎನ್ನಲಾಗ್ತಿದೆ.

ಇಂಗ್ಲೆಂಡ್​​ ಪ್ರವಾಸದಲ್ಲಿ ಅಶ್ವಿನ್​ಗೆ ಸಿಕ್ಕಿರಲಿಲ್ಲ ಅವಕಾಶ..!
ಕಳೆದ ಆಗಸ್ಟ್​-ಸೆಪ್ಟೆಂಬರ್​ನಲ್ಲಿ ಟೀಮ್ ಇಂಡಿಯಾದ ಇಂಗ್ಲೆಂಡ್ ಪ್ರವಾಸವೇ ಇದಕ್ಕೆ ಉದಾಹರಣೆಯಾಗಿದೆ. ಈ ಪ್ರವಾಸಕ್ಕೂ ಮುನ್ನ ಭಾರತದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಶ್ವಿನ್, ಅದ್ಬುತ ಪ್ರರ್ಶನ ನೀಡಿದ್ದರು. ಬರೋಬ್ಬರಿ 32 ವಿಕೆಟ್​ಗಳನ್ನ ಉರುಳಿಸಿದ್ದ ಅನುಭವಿ ಅಶ್ವಿನ್​ಗೆ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಾನ ಖಾಯಂ ಅಂತಾನೇ ಹೇಳಲಾಗಿತ್ತು. ಆದ್ರೆ, ಕಂಡೀಷನ್ಸ್​ಗೆ ಅನುಗುಣವಾಗಿ ತಂಡವನ್ನ ಕಣಕ್ಕಿಳಿಸ್ತೇವೆ ಎಂದಿದ್ದ ಕೊಹ್ಲಿ, ಮ್ಯಾಚ್ ವಿನ್ನರ್ ಅಶ್ವಿನ್​ಗೆ ಹನ್ನೊಂದರಲ್ಲಿ ಸ್ಥಾನವನ್ನೇ ನೀಡಿರಲಿಲ್ಲ. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಇದೀಗ ಸೌತ್​ ಆಫ್ರಿಕಾ ಪಿಚ್​​ ಕಂಡೀಷನ್ಸ್​ ಕೂಡ ಇಂಗ್ಲೆಂಡ್ ಕಂಡೀಷನ್ಸ್​ನಂತೆ ವರ್ತಿಸಲಿದೆ, ಹೀಗಾಗಿ ಅಶ್ವಿನ್​ಗೆ ಚಾನ್ಸ್​ ನೀಡ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡ್ತಿದೆ.

4ನೇ ವೇಗಿಯ ಆಯ್ಕೆ ಬಂದರೆ ಅಶ್ವಿನ್​ಗೆ ಕೊಕ್​ ನೀಡಲಾಗುತ್ತಾ?
ಇಂಗ್ಲೆಂಡ್ ಕಂಡೀಷನ್ಸ್​ನಂತೆ ಸೌತ್​ ಆಫ್ರಿಕಾದ ಪಿಚ್ ಕಂಡೀಷನ್ಸ್​ ವೇಗಿಗಳಿಗೆ ಹೆಚ್ಚು ನೆರವಾಗಲಿದೆ. ಬೌನ್ಸ್​​ ಮತ್ತು ಸ್ವಿಂಗ್​ ಹೆಚ್ಚು ಪರಿಣಾಮಕಾರಿಯಾಗೋ ಕಾರಣದಿಂದ ಟೀಮ್ ಇಂಡಿಯಾ ನಾಲ್ಕನೇ ವೇಗಿಯ ಮೊರೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ತಂಡದ ಈ ಆಯ್ಕೆ ಆಯ್ದುಕೊಂಡರೇ ಒಬ್ಬ ಸ್ಪಿನ್ನರ್​​ಗೆ ಮಾತ್ರ ಕಣಕ್ಕಿಳಿಯೋ ಅವಕಾಶ ಸಿಗಲಿದೆ. ಆಗ ಮತ್ತೆ ಸ್ಪಿನ್ನರ್​​ಗಳ ನಡುವೆ ಫೈಟ್​​ ಏರ್ಪಡಲಿದೆ. ಹೀಗಾಗಿ ಸಂಭಾವ್ಯ ತಂಡವನ್ನ ಉಹಿಸೋದೆ ಕಷ್ಟ ಅನ್ನೋದು ಕ್ರಿಕೆಟ್​​ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಸಂಭಾವ್ಯ ತಂಡ ಊಹಿಸುವುದು ಕಷ್ಟ
‘ಸಂಭಾವ್ಯ ಟೀಮ್​ ಇಂಡಿಯಾವನ್ನ ಉಹಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಲಾಜಿಕ್​ ಒಂದೆಡೆಯಾದ್ರೆ, ತಂಡ ಹೀಗಿರಬೇಕು ಎಂಬ ಕೊಹ್ಲಿಯ ಯೋಜನೆ ಇನ್ನೊಂದೆಡೆ. ಈ ಭೂಮಿಯಲ್ಲಿರುವ ಯಾರಾದರೂ ಅಶ್ವಿನ್​, ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಆಡಲ್ಲ ಎಂದು ಉಹಿಸಿದ್ರಾ..? ವಿರಾಟ್​ಗೆ ಏನು ಬೇಕು ಎಂದು ತಿಳಿಯೋದು ಕಷ್ಟ. ಆತ ಏನನ್ನ ಯೋಚಿಸುತ್ತಿದ್ದಾನೆ..? ಯಾಕೆ..? ಎಂದು ಉಹಿಸುವುದು ಸುಲಭವಲ್ಲ’
ಸ್ಟೀವ್ ಹರ್ಮಿಸನ್, ಇಂಗ್ಲೆಂಡ್ ಮಾಜಿ ವೇಗಿ

ಅಶ್ವಿನ್​ಗೆ ಸ್ಥಾನ ಸಿಗಲ್ಲ ಅನ್ನೋದಕ್ಕೆ ಪಿಚ್​ ಕಂಡಿಷನ್ಸ್​​ ಮೇಲೆ ಮಾತ್ರ ಕಾರಣವಾಗಿಲ್ಲ. ಈ ಹಿಂದಿನ ಪ್ರವಾಸದಲ್ಲಿ ನೀಡಿದ ಪ್ರದರ್ಶನವೂ ಅಶ್ವಿನ್​ಗೆ ಹಿನ್ನಡೆಯಾಗಿದೆ.

ಸೌತ್​ ಆಫ್ರಿಕಾದಲ್ಲಿ ಅಶ್ವಿನ್​ ಟೆಸ್ಟ್​ ಸಾಧನೆ

  • ಇನ್ನಿಂಗ್ಸ್​ 6
  • ಓವರ್​ 118.3
    ವಿಕೆಟ್​ 07
  • ಎಕಾನಮಿ 2.72

ಒಂದೆಡೆ ಹಿಂದಿನ ಪ್ರವಾಸದ ಕಳಪೆ ಸಾಧನೆಯಾದ್ರೆ ಇನ್ನೊಂದೆಡೆ ವೇಗಿಗಳಿಗೆ ನೆರವಾಗಬಲ್ಲ ಪಿಚ್​ಗಳು ಕೂಡ ಅಶ್ವಿನ್​ಗೆ ಹಿನ್ನಡೆಯಾಗಿದೆ. ಹಾಗಿದ್ರೂ, ಕೇರಂ ಸ್ಪಿನ್ನರ್​​ ಟೀಮ್​ ಇಂಡಿಯಾದ ಗೇಮ್​ ಚೈಂಜರ್​ ಅನ್ನೋದನ್ನ ಮರೆಯುವಂತಿಲ್ಲ. ಹೀಗಾಗಿ ಅಶ್ವಿನ್​ ಆಡ್ತಾರಾ..? ಇಲ್ವಾ..? ಎಂಬ ಕುತೂಹಲಕಾರಿ ಪ್ರಶ್ನೆಗೆ ಅಂತಿಮ ಉತ್ತರ ಕೋಚ್​​ ಮತ್ತು ಕ್ಯಾಪ್ಟನ್​ ಬಳಿಯಿದೆ ಅಂದ್ರೆ ತಪ್ಪಾಗಲ್ಲ.

News First Live Kannada


Leave a Reply

Your email address will not be published. Required fields are marked *