‘ಸೌತ್​ ಇಂಡಿಯನ್​ ಹೀರೋ’ ಬಗ್ಗೆ ನಿಮಗೆಷ್ಟು ಗೊತ್ತು? ಇವನ ಅವತಾರ ಒಂದೆರಡಲ್ಲ | Saarthak and Kaashima starrer South Indian Hero movie teaser released


South Indian Hero Teaser: ‘ಸೌತ್​ ಇಂಡಿಯನ್​ ಹೀರೋ’ ಸಿನಿಮಾದ ಟೀಸರ್​ ಗಮನ ಸೆಳೆಯುತ್ತಿದೆ. ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್​ನಲ್ಲಿ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ದಕ್ಷಿಣ ಭಾರತದ ಸಿನಿಮಾಗಳ ಶೈಲಿಯೇ ಬೇರೆ. ಇಲ್ಲಿನ ಸಿನಿಮಾಗಳಲ್ಲಿ ಲಾಜಿಕ್​ಗಿಂತ ಮ್ಯಾಜಿಕ್​ ಜಾಸ್ತಿ ಎಂಬುದು ಗೊತ್ತಿರುವ ವಿಚಾರ. ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಗಾಂಧಿನಗರದಲ್ಲಿ ಹೊಸ ಸಿನಿಮಾ ಸಿದ್ಧವಾಗಿದೆ. ‘ಸೌತ್​ ಇಂಡಿಯನ್​ ಹೀರೋ’ (South Indian Hero) ಎಂಬುದು ಈ ಚಿತ್ರದ ಹೆಸರು! ಇಂಥ ಇಂದು ಡಿಫರೆಂಟ್​ ಶೀರ್ಷಿಕೆ ಇಟ್ಟುಕೊಂಡು ಚಿತ್ರ ಮಾಡಲಾಗಿದ್ದು, ಹೊಸ ನಟ ಸಾರ್ಥಕ್​ ಅವರು ಹೀರೋ ಆಗಿ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಕಾಶಿಮಾ ನಟಿಸಿದ್ದಾರೆ. ನರೇಶ್​ ನಿರ್ದೇಶನ ಮಾಡಿದ್ದು, ಶಿಲ್ಪಾ ಎಲ್​.ಎಸ್​. ನಿರ್ಮಾಣ ಮಾಡಿದ್ದಾರೆ. ‘ಸೌತ್​ ಇಂಡಿಯನ್​ ಹೀರೋ’ ಚಿತ್ರದ ಕಾನ್ಸೆಪ್ಟ್​ ಟೀಸರ್​ (South Indian Hero Teaser) ಬಿಡುಗಡೆ ಮಾಡಲಾಗಿದೆ. ಸಿನಿಮಾದ ಕುರಿತು ಚಿತ್ರತಂಡದವರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಕಿರುತೆರೆ ಹಿನ್ನೆಲೆಯಿಂದ ಬಂದಿರುವ ಸಾರ್ಥಕ್​ ಅವರು ಈ ಚಿತ್ರದಲ್ಲಿ ಅನೇಕ ಶೇಡ್​ ಇರುವ ಪಾತ್ರವನ್ನು ಮಾಡಿದ್ದಾರೆ. ಚೊಚ್ಚಲ ಚಿತ್ರಕ್ಕೆ ಇದಕ್ಕಿಂತ ಒಳ್ಳೆಯ ಕಥೆ ಮತ್ತು ಪಾತ್ರ ಸಿಗಲು ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯ. ಸಿಂಪಲ್​ ಹುಡುಗನಾಗಿ, ಶಿಕ್ಷಕನಾಗಿ, ಸಿನಿಮಾ ಹೀರೋ, ಆಟೋ ಡ್ರೈವರ್​ ಹೀಗೆ ಅನೇಕ ಬಗೆಯ ಪಾತ್ರವನ್ನು ಅವರು ಈ ಸಿನಿಮಾದಲ್ಲಿ ಮಾಡಿದ್ದಾರೆ.

‘ಫಸ್ಟ್​ ರ‍್ಯಾಂಕ್​ ರಾಜು’, ‘ರಾಜು ಕನ್ನಡ ಮೀಡಿಯಂ’ ಸಿನಿಮಾಗಳ ಮೂಲಕ ನಿರ್ದೇಶಕ ನರೇಶ್​ ಅವರು ಕಚುಗುಳಿ ಇಟ್ಟಿದ್ದರು. ಈಗ ಅವರು ‘ಸೌತ್​ ಇಂಡಿಯನ್​ ಹೀರೋ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಮತ್ತೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲು ಸಜ್ಜಾಗಿದ್ದಾರೆ. ‘2021ರಲ್ಲಿ ಶುರು ಮಾಡಿದ ಚಿತ್ರ ಇದು. ಈ ಬಾರಿ ಬೇರೆ ವಿಷಯವನ್ನು ಹೇಳಲು ಪ್ರಯತ್ನ ಮಾಡಿದ್ದೇವೆ. ಇದು ಮಾಸ್​ ಸಿನಿಮಾ. ಸದಾ ಕಾಲ ಲಾಜಿಕ್​ ಮಾತನಾಡುವ ಯುವಕ ಚಿತ್ರರಂಗಕ್ಕೆ ಬಂದು ಹೀರೋ ಆದ್ರೆ ಹೆಂಗಿರುತ್ತದೆ? ಸಿನಿಮಾದಲ್ಲಿ ಲಾಜಿಕ್​ ಇರಲ್ಲ. ಆಗ ಏನಾಗುತ್ತದೆ ಎಂಬುದು ಕಥೆಯ ತಿರುಳು’ ಎಂದಿದ್ದಾರೆ ನಿರ್ದೇಶಕರು.

ಅಶ್ವಿನ್​ ರಾವ್​ ಪಲ್ಲಕ್ಕಿ, ವಿಜಯ್​ ಚಂಡೂರ್​, ಯೋಗರಾಜ್​ ಭಟ್​, ಗುರುದೇವ್​ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹರ್ಷವರ್ಧನ್​ ರಾಜ್​ ಹಾಗೂ ಅನಿಲ್​ ಸಿಜೆ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ರಾಜಶೇಖರ್​ ಮತ್ತು ಪ್ರವೀಣ್​ ಎಸ್​. ಅವರು ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ‘ಸೌತ್​ ಇಂಡಿಯನ್​ ಹೀರೋ’ ಟೀಸರ್​ ಗಮನ ಸೆಳೆಯುತ್ತಿದೆ. ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್​ನಲ್ಲಿ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published.