ದೇಶ ಹಿಂದೆಂದೂ ಕಂಡು ಕೇಳರಿಯದಂಥ ಸವಾಲನ್ನು ಎದುರಿಸುತ್ತಿದೆ. ಒಂದು ಕಡೆ ಹೆಚ್ಚುತ್ತಿರುವ ಸೋಂಕಾದ್ರೆ, ಇನ್ನೊಂದೆಡೆ ಸೋಂಕಿತರಿಗೆ ನೀಡಲು ಆಕ್ಸಿಜೆನ್ ಕೊರತೆ ಮಿತಿ ಮೀರಿದೆ. ಇದನ್ನು ನೀಗಿಸಲು ಕೇಂದ್ರ ಸರ್ಕಾರದೊಂದಿಗೆ ಖಾಸಗೀ ಸಂಸ್ಥೆಗಳೂ ಕಟಿಬದ್ಧವಾಗಿ ನಿಂತಿವೆ.

ಸದ್ಯ ಸೌದಿ ಅರೇಬಿಯಾದಿಂದ ಕ್ರಯೋಜೆನಿಕ್ ಆಕ್ಸಿಜೆನ್ ಕಂಟೇನರ್​ಗಳನ್ನು ಅದಾನಿ ಸಂಸ್ಥೆ ಶಿಪ್​ ಮಾಡಿದೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸೌದಿ ಅರೇಬಿಯಾದಲ್ಲಿರೋ ಭಾರತದ ರಾಯಭಾರಿ ಕಚೇರಿ, 80 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜೆನ್ ಪೂರೈಸಲು ಮುಂದಗಿರುವ ಜರ್ಮನಿ ಮೂಲದ ಲಿಂಡೇ ಹಾಗೂ ಭಾರತದ ಅದಾನಿ ಗ್ರೂಪ್ ಜೊತೆ ಕೈ ಜೋಡಿಸಲು ಭಾರತ ಹೆಮ್ಮೆ ಪಡುತ್ತದೆ. ಅಲ್ಲದೇ ಸೌದಿ ಅರೇಬಿಯಾ ಕಿಂಗ್​ಡಮ್​ನ ಆರೋಗ್ಯ ಸಚಿವಾಲಯದ ಸಹಾಯ, ಸಹಯೋಗ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಅಂತಾ ತಿಳಿಸಿದೆ.

The post ಸೌದಿ ಅರೇಬಿಯಾದಿಂದ ಆಕ್ಸಿಜೆನ್ ಕಂಟೇನರ್ ಶಿಪ್ ಮಾಡಿದ ಅದಾನಿ ಸಂಸ್ಥೆ appeared first on News First Kannada.

Source: News First Kannada
Read More