ಬೆಂಗಳೂರು: ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಸಿಎಂ ಸ್ಟಾಲಿನ್​ಗೆ ಪತ್ರ ಬರೆದಿರುವ ವಿಚಾರಕ್ಕೆ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ರಾಜಕೀಯ ಮಾಡುತ್ತಿದೆ. 2018ರಲ್ಲಿ ತಮಿಳುನಾಡು ಹೂಡಿದ್ದ ದಾವೆಯಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ. ಯೋಜನೆಯನ್ನ ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಶೀಘ್ರವಾಗಿ ಸ್ಪಷ್ಟತೆ ಪಡೆದು ಕ್ರಮಕೈಗೊಳ್ಳಲಾಗುವುದು. ಕಾವೇರಿ ನದಿ ಪಾತ್ರದಲ್ಲಿ ನೀರು ಬಳಸಿಕೊಳ್ಳಲು ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಕ್ರಮಗಳನ್ನ ಕೈಗೊಳ್ಳಲಾಗುತ್ತದೆ. ಮೇಕೆದಾಟು ಯೋಜನೆಯನ್ನ ಪ್ರಾರಂಭಿಸಲಾಗುವುದು ಅಂತ ಯಡಿಯೂರಪ್ಪ ಮತ್ತೆ ಹೇಳಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ಮುಂದುವರೆಸಬೇಡಿ -ಬಿಎಸ್​ವೈಗೆ ಎಂ.ಕೆ. ಸ್ಟಾಲಿನ್​​ ಪತ್ರ

ರಾಜಕೀಯ ಮಾಡ್ತಿದೆ
ಸೌಹಾರ್ದ ಸಂಬಂಧ ತಮಿಳುನಾಡು ಸಿಎಂಗೆ ಪತ್ರ ಬರೆಯಲಾಗಿತ್ತು. ಪತ್ರದಲ್ಲಿ ಎರಡು ರಾಜ್ಯಗಳಿಗೆ ಆಗುವ ಅನುಕೂಲಗಳ ಬಗ್ಗೆ ತಿಳಿಸಲಾಗಿತ್ತು. ಆದರೆ ತಮಿಳುನಾಡು ಈ ಯೋಜನೆಯಿಂದ ತಮ್ಮ ರಾಜ್ಯಕ್ಕೆ ತೊಂದರೆಯಾಗುತ್ತದೆ ಎಂದು ವ್ಯಾಖ್ಯಾನಿಸಿದೆ. ಆದರೆ ಈ ಯೋಜನೆಯಿಂದ ತಮಿಳುನಾಡಿಗೆ ಅನುಕೂಲವೇ ಜಾಸ್ತಿ ಇದೆ. ಇದನ್ನ ಅರ್ಥ ಮಾಡಿಕೊಳ್ಳದೇ ತಮಿಳುನಾಡು ರಾಜಕೀಯ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: “ಮೇಕೆದಾಟು ಯೋಜನೆ ನಿಲ್ಲಿಸಿ” ಎಂದ ತಮಿಳುನಾಡು ಸಿಎಂಗೆ ಕೆ.ಎಸ್ ಈಶ್ವರಪ್ಪ ತಪರಾಕಿ

 

 

The post ‘ಸೌಹಾರ್ದ ಸಂಬಂಧ ಪತ್ರ ಬರೆಯಲಾಗಿತ್ತು.. ಆದರೆ ತಮಿಳುನಾಡು ರಾಜಕೀಯ ಮಾಡ್ತಿದೆ’ appeared first on News First Kannada.

Source: newsfirstlive.com

Source link