ಸ್ಕಾಟ್ಲೆಂಡ್ ತಂಡವನ್ನು ಕೇವಲ 85 ರನ್​​ಗೆ ಕಟ್ಟಿ ಹಾಕಿದ ಟೀಂ ಇಂಡಿಯಾ..!


ಇಂದು ದುಬೈ ಇಂಟರ್​​ನ್ಯಾಷನಲ್​​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್​​​​ ಪಂದ್ಯದಲ್ಲಿ ಭಾರತ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಟಾಸ್​​ ಸೋತು ಮೊದಲು ಬ್ಯಾಟಿಂಗ್​​ ಮಾಡಿದ ಸ್ಕಾಟ್ಲೆಂಡ್ 17.4 ಓವರ್​​ನಲ್ಲಿ 85 ರನ್​​ಗೆ ಆಲೌಟ್​​ ಆಗಿದೆ.

ಸ್ಕಾಟ್ಲೆಂಡ್ ಪರ ಜಾರ್ಜ್ ಮಾಂಜಿ 24, ಕ್ಯಾಲಮ್ ಮೆಕ್ಲಿಯೋಡ್ 16, ಮೈಕೆಲ್ ಲೀಸ್ಕ್ 21 ರನ್​​ ಗಳಿಸಿದ್ದಾರೆ. ಇವರ ನೆರವಿನಿಂದ ಸ್ಕಾಟ್ಲೆಂಡ್ ಕೇವಲ 85 ರನ್​​ ಗಳಿಸಿದೆ. ಈ ಮೂಲಕ ಭಾರತಕ್ಕೆ ಸ್ಕಾಟ್ಲೆಂಡ್ 86 ರನ್​​ ಟಾರ್ಗೆಟ್​ ನೀಡಿದೆ.

News First Live Kannada


Leave a Reply

Your email address will not be published. Required fields are marked *