ಸ್ಕಾಟ್​ಲ್ಯಾಂಡ್​ನ ಪ್ಲಂಬರ್​ಗೆ ಬಾಟಲಿಯಲ್ಲಿ ಸಿಕ್ಕ 135 ವರ್ಷದ ಹಳೆಯ ಚೀಟಿ – Woman delivers baby on road in Andhra Pradesh Tirupati hospital denied admission


Scotland : ಮನೆಯ ಕೊಳಾಯಿಯೊಂದನ್ನು ರಿಪೇರಿ ಮಾಡುತ್ತಿರುವಾಗ ಪ್ಲಂಬರ್ ಪೈಪಿಗೆ ರಂಧ್ರವನ್ನು ಕೊರೆದರು. ಆಗ ಪುಟ್ಟ ಬಾಟಲಿಯಲ್ಲಿ ಈ ಚೀಟಿಯೊಂದು ದೊರಕಿತು. ಓಡಿಹೋಗಿ ಮನೆಯ ಮಾಲೀಕರಿಗೆ ತಿಳಿಸಿದರು.

ಸ್ಕಾಟ್​ಲ್ಯಾಂಡ್​ನ ಪ್ಲಂಬರ್​ಗೆ ಬಾಟಲಿಯಲ್ಲಿ ಸಿಕ್ಕ 135 ವರ್ಷದ ಹಳೆಯ ಚೀಟಿ

ಅಮೆರಿಕದ ಪ್ಲಂಬರ್​ಗೆ ದೊರೆತ 135 ವರ್ಷದ ಹಳೆಯ ಚೀಟಿ

Viral Video : ಹಳೆಯ ವಸ್ತುಗಳೇನಾದರೂ ಸಿಕ್ಕಲ್ಲಿ ಆ ಬಗ್ಗೆ ಕುತೂಹಲ ಉಂಟಾಗುವುದರಲ್ಲಿ ಸಂಶಯವೇ ಇಲ್ಲ. ಇದು ಇಲ್ಲಿಗೆ ಹೇಗೆ ಬಂತು? ಯಾರು ಇದನ್ನಿಲ್ಲಿ ಇಟ್ಟರು? ಯಾಕಾಗಿ ಇಟ್ಟರು? ಇದರ ಹಿಂದಿನ ಕಥೆ ಏನು ಎಂಬೆಲ್ಲ ಪ್ರಶ್ನೆಗಳು ಏಳುವುದು ಸಹಜ ಅಲ್ಲವೆ? ಬಾಟಲಿಯಲ್ಲಿ ಸುತ್ತಿಟ್ಟ 135 ವರ್ಷದ ಹಿಂದಿನ ಚೀಟಿಯೊಂದು ಸ್ಕಾಟ್​ಲ್ಯಾಂಡ್​ನ ಪ್ಲಂಬರ್​ಗೆ ಇದೀಗ ದೊರೆತಿದೆ. ಇದೀಗ ವೈರಲ್ ಆಗುತ್ತಿರುವ ಈ ಚೀಟಿಯಲ್ಲಿ ಏನು ಬರೆದಿದೆ ಎಂದು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ.

ಸ್ಕಾಟ್​ಲ್ಯಾಂಡ್​ನ ಪ್ಲಂಬರ್ ಇಲೀದ್​ ಸ್ಟಿಂಫನ್ಸ್​ ಎಂಬುವವರ ಮನೆಯ ಕೊಳಾಯಿ ರಿಪೇರಿಗೆಂದು ಬಂದಾಗ ಈ ಅಚ್ಚರಿಯ ಘಟನೆ ನಡೆದಿದೆ. ರಿಪೇರಿಗಾಗಿ ರಂಧ್ರ ಕೊರೆಯುತ್ತಿದ್ದಾಗ ಈ ಚೀಟಿ ಪತ್ತೆಯಾಗಿದೆ. ಇದನ್ನು ನೋಡಿದ ಪ್ಲಂಬರ್ ಆಶ್ಚರ್ಯದಿಂದ ತಕ್ಷಣವೇ ಮಾಲೀಕರಿಗೆ ತಿಳಿಸಿದ್ದಾರೆ. ನಂತರ ಬಾಟಲಿಯನ್ನು ಸುತ್ತಿಗೆಯಿಂದ ಹೊಡೆದು ಚೀಟಿಯನ್ನು ಹೊರತೆಗೆದಿದ್ದಾರೆ. ಫೇಸ್​ಬುಕ್​ನಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದೆ.

TV9 Kannada


Leave a Reply

Your email address will not be published.