ಸ್ಟಾರ್​​​ ಆಟಗಾರರ ಕ್ರಿಕೆಟ್​​​​ ಬದುಕು​ ಅಂತ್ಯ; ಕುಲ್ದೀಪ್​​-ಮನೀಷ್​​ ವೃತ್ತಿ ಜೀವನಕ್ಕೆ ಬಿತ್ತಾ ಫುಲ್​​​ ​​ಸ್ಟಾಪ್?​

ಟೀಮ್​ ಇಂಡಿಯಾದಲ್ಲಿ ಒಂದೊಂದು ಸ್ಲಾಟ್​​ಗೂ ಪೈಪೋಟಿ ಸಿಕ್ಕಾಪಟ್ಟೆ ಏರ್ಪಟ್ಟಿದೆ. ಸಿಕ್ಕ ಅವಕಾಶವನ್ನ ಕೆಲವರು ಯುಟಿಲೈಸ್​ ಮಾಡಿಕೊಳ್ತಿದ್ರೆ, ಇನ್ನ ಕೆಲವರು ಕೈ ಚೆಲ್ತಿದ್ದಾರೆ. ಇದು ಕೆಲವರ ಕರಿಯರ್​​ಗೂ ಮುಳುವಾಗಿದೆ. ಅದೇ ರೀತಿ ಈ ಇಬ್ಬರ ಕರಿಯರ್​​ ಅಂತ್ಯಕ್ಕೆ ಬಂದು ನಿಂತಿದೆ.

ರಂಗುರಂಗಿನ ಐಪಿಎಲ್​ ಸದ್ಯ ಉಪಾಂತ್ಯಕ್ಕೆ ತಲುಪಿದೆ. ಪ್ಲೇ ಆಫ್ – ಅಗ್ರಸ್ಥಾನದತ್ತ ಚಿತ್ತ ನೆಟ್ಟಿರುವ ಅಗ್ರ ತಂಡಗಳ ಕಾದಾಟ, ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದೆ. ಇನ್ನು ಶ್ರೀಮಂತ ಲೀಗ್​​ ಬೆನ್ನಲ್ಲೇ T20 ವಿಶ್ವಕಪ್​​ ಮಹಾಸಮರ ಶುರುವಾಗಲಿದ್ರೆ, ರನ್​​​​ಭೂಮಿಯ ಕದನದಲ್ಲಿ ರಣಕಹಳೆ ಮೊಳಗಿಸಲು ತಂಡಗಳು ಸಿದ್ದವಾಗಿವೆ. ಐಪಿಎಲ್ ​​- ವಿಶ್ವಕಪ್​​ ಮಧ್ಯೆ ಆಟಗಾರರ ಭವಿಷ್ಯ ಕೂಡ ಅನಿಶ್ಚಿತತೆ ತಳ್ಳಿದೆ. ಅದರಲ್ಲೂ ಮನೀಷ್​ ಪಾಂಡೆ -​ ಕುಲ್ದೀಪ್​​​ ಯಾದವ್​ ವೃತ್ತಿ ಜೀವನಕ್ಕೆ ಬಹುತೇಕ ಪುಲ್​ಸ್ಟಾಪ್​ ಬಿದ್ದಿದೆ.

ಟೀಮ್​ ಇಂಡಿಯಾಗೆ ಮರಳಲು ಇದ್ದ ಅವಕಾಶವನ್ನ ಕೈಚೆಲ್ಲಿದ ಮನೀಷ್​.!

ಹೌದು.! ವೈಫಲ್ಯವನ್ನ ಮೆಟ್ಟಿ ಟೀಮ್​ ಇಂಡಿಯಾಗೆ ಮರಳಲು ಕನ್ನಡಿಗ ಮನೀಷ್​ ಪಾಂಡೆ ಮುಂದೆ ಎರಡು ಅಗ್ನಿ ಪರೀಕ್ಷೆಗಳು ಇದ್ದವು. ಒಂದು ಶ್ರೀಲಂಕಾ ಸರಣಿ, ಮತ್ತೊಂದು ಐಪಿಎಲ್​​. ಲಂಕಾ ಸರಣಿ ಮನಿಷ್​ ತನ್ನ ಕರಿಯರ್​​ಗೆ ಬ್ರೇಕ್ ​ಥ್ರೂ ಪಡೆಯಲು ಉತ್ತಮ ಅವಕಾಶ ಎಂದ್ರೂ ತಪ್ಪಾಗಲ್ಲ. ಆದರಿಲ್ಲಿ ಅಟ್ಟರ್​ ಫ್ಲಾಪ್​ ತೋರಿಸುವ ಮೂಲಕ ಸೆಲೆಕ್ಷನ್​ ಕಮಿಟಿ ಗಮನ ಸೆಳೆಯುವಲ್ಲಿ ವಿಫಲರಾದ್ರು.

ಈ ಪರೀಕ್ಷೆಯಲ್ಲಿ ಫೇಲಾದ್ರೂ, ಮತ್ತೆ ಪಾಸಾಗಲು ಐಪಿಎಲ್​ ಎಂಬ ಪರೀಕ್ಷೆಯ ಮತ್ತೊಂದು ವೇದಿಕೆ ಇತ್ತು. ಆದರೆ ಇಲ್ಲೂ ಕೂಡ ವೈಫಲ್ಯ ಅನುಭವಿಸಿದ್ರು. ಐಪಿಎಲ್​​ನಲ್ಲಿ 7ಪಂದ್ಯಗಳನ್ನಾಡಿದ ಪಾಂಡೆ, ಕೇವಲ 223 ರನ್​ಗಳನ್ನಷ್ಟೆ ಗಳಿಸಿದ್ದಾರೆ. ಇನ್ನು ಲಂಕಾ ಸರಣಿಯ ಮೂರು ಪಂದ್ಯಗಳಲ್ಲಿ 74ರನ್​ ಮಾತ್ರ ಕಲೆ ಹಾಕಿದ್ದಾರೆ. ಇದರೊಂದಿಗೆ ಟೀಮ್​ ಇಂಡಿಯಾ ಕರಿಯರ್​ ಖತಂ ಆಗಿದ್ದಲ್ಲದೆ, ಭವಿಷ್ಯದ ಐಪಿಎಲ್​ ಸೇವೆ ಕೂಡ ಅಂತ್ಯ ಎಂದೇ ಹೇಳಲಾಗ್ತಿದೆ.

ಚೈನಾಮನ್​ ಸ್ಪಿನ್ನರ್​​​ ಕುಲ್ದೀಪ್​​​​ ಭವಿಷ್ಯಕ್ಕೂ ಬಿತ್ತಾ ಬ್ರೇಕ್​​..?

ಮನೀಷ್ ಮಾತ್ರವಲ್ಲ, ಕುಲ್ದೀಪ್​ ಯಾದವ್​ ವೃತ್ತಿ ಜೀವನ ಸಹ ಅಂತ್ಯದ ಸನಿಹ ತಲುಪಿದೆ. ಕಳೆದೆರಡು ವರ್ಷಗಳ ವೈಫಲ್ಯ​​​ದಿಂದ ಕುಲ್ದೀಪ್,​​​​ ಟೀಮ್​ ಇಂಡಿಯಾಗೆ ಕಮ್​​ಬ್ಯಾಕ್​ ಮಾಡಲು ಲಂಕಾ ಸರಣಿ ಜೊತೆಗೆ IPL ಅವಕಾಶ​ ಇತ್ತು. ಈ ಹಿಂದೆ ಇಂಗ್ಲೆಂಡ್​ ವಿರುದ್ಧದ ಸರಣಿ ಕೂಡ ಇತ್ತು. ಆದರೆ ಇಲ್ಲಿ ಬಲ ಪ್ರದರ್ಶನವನ್ನ ಪ್ರದರ್ಶಿಸುವಲ್ಲಿ ಎಡವಿದ್ರು. ಹೀಗಾಗಿ ವಿಶ್ವಕಪ್​ಗೆ ಚಾನ್ಸ್​ ಪಡೆಯಲು ವಿಫಲರಾದ್ರು.

ಇಷ್ಟಾದರೂ ಚೈನಾಮನ್​ಗೆ ತಂಡಕ್ಕೆ ಮರಳುವ ಚಾನ್ಸ್​​ ಇತ್ತು. ದ್ವಿತಿಯಾರ್ಧದ IPLನಲ್ಲಿ ಮಿಂಚುವ ಭರವಸೆ ಇತ್ತು. ಆದರೆ ಹಿಂದಿನ ಸೀಸನ್​​ನಲ್ಲಿ ನೀಡಿದ ಕಳಪೆ ಪ್ರದರ್ಶನದಿಂದ ಈ ಬಾರಿ ಒಂದೇ ಒಂದು ಅವಕಾಶ ಸಿಗಲಿಲ್ಲ. ಇದೀಗ ಇಂಜುರಿ ಕಾರಣ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. 6 ತಿಂಗಳ ಕಾಲ ವಿಶ್ರಾಂತಿ ಪಡೆಯಬೇಕಾದ ಕಾರಣ, ಮತ್ತೆ ಕ್ರಿಕೆಟ್​ನತ್ತ ಮುಖ ಮಾಡ್ತಾರಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ. ಒಟ್ನಲ್ಲಿ ವೈಫಲ್ಯ, ಪೈಪೋಟಿಯಿಂದಾಗಿ ಸೈಡ್​ಲೈನ್​ ಆಗಿರೋ ಮನೀಷ್​, ಕುಲ್ದೀಪ್​ ಮತ್ತೆ ತಂಡದಲ್ಲಿ ಸ್ಥಾನ ಪಡೆದು ಮಿಂಚಲಿ ಅನ್ನೋದು ನಮ್ಮೆಲ್ಲರ ಆಶಯ.

News First Live Kannada

Leave a comment

Your email address will not be published. Required fields are marked *