ಬಹುಭಾಷಾ ನಟಿ ನಯನತಾರ ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ ಎಂದಾದರೇ ಹೌದು ಎನ್ನವುತ್ತಿವೆ ಸಿನಿರಂಗ. ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹೀರೋಯಿನ್​ಗಳಲ್ಲಿ ಒಬ್ಬರು. ಒಂದು ಸಿನಿಮಾಗೆ ನಯನತಾರ ಸರಿ ಸುಮಾರು 3 ರಿಂದ 5 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾರೆ ಎಂಬ ಟಾಕ್​ ಇದೆ.

ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿರುವ ನಯನತಾರ ಇದುವರೆಗೂ ಬಾಲಿವುಡ್​​ನಲ್ಲಿ ಮಾತ್ರ ನಟಿಸಿಲ್ಲ. ಆದರೆ ಸದ್ಯ ನಯನತಾರ ಹಿಂದಿಯಲ್ಲಿ ಕ್ರೇಜಿ ಪ್ರಾಜೆಕ್ಟ್​ವೊಂದಕ್ಕೆ ಓಕೆ ಎಂದಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಬಾಲಿವುಡ್​ ಬಾದ್​ ಷಾ ಶಾರುಖ್​ ಖಾನ್​​​ ಹೀರೋ ಆಗಿ ನಟಿಸುತ್ತಿರುವ ಸಿನಿಮಾದೊಂದಿಗೆ ನಯನತಾರ ಬಾಲಿವುಡ್​ಗೆ ಎಂಟ್ರಿ ಕೊಡ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಅಟ್ಲೆ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಅಟ್ಲೆ ನಿರ್ದೇಶನ ಮಾಡಿದ್ದ ರಾಜಾ ರಾಣಿ, ಬಿಗಿಲ್​ ಸಿನಿಮಾಗಳಲ್ಲಿ ನಯನತಾರ ನಟಿಸಿದ್ದಾರೆ. ಆದ್ದರಿಂದಲೇ ಅಟ್ಲೆ ಅವರ ಮೊದಲ ಬಾಲಿವುಡ್​​ ಸಿನಿಮಾದೊಂದಿಗೆ ನಯನತಾರ ಕೂಡ ಬಾಲಿವುಡ್​​ನಲ್ಲಿ ತಮ್ಮ ಲಕ್​ ಪರೀಕ್ಷೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈಗಾಗಲೇ ಸಿನಿಮಾ ಕಥೆ ಸಿದ್ಧವಾಗಿದ್ದು, ಚಿತ್ರವನ್ನು ಪ್ಯಾನ್​ ಇಂಡಿಯಾ ಮ್ಯೂವಿಯಾಗಿ ಹಿಂದಿ ಸೇರಿದಂತೆ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಸಿನಿಮಾವನ್ನು ನಿರ್ಮಿಸಿಲು ನಿರ್ಮಾಪಕರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಆದ್ದರಿಂದಲೇ ಶಾರುಖ್​ ಖಾನ್ ಕೂಡ ತಮ್ಮ ಸಿನಿಮಾದಲ್ಲಿ ನಯನತಾರರನ್ನು ಹೀರೋ ಆಗಿ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಸದ್ಯ ನಯನತಾರ ರಜಿನಿಕಾಂತ್​ ಅವರ ಅಣ್ಣಾಥೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಶೂಟಿಂಗ್​ ಪೂರ್ಣಗೊಳ್ಳುತ್ತಿದೆ. ಇನ್ನು ಚಿರಂಜೀವಿ ಅವರ ಲೂಸಿಫರ್​​ ರಿಮೇಕ್​ ಸಿನಿಮಾದಲ್ಲೂ ನಟಿಸಲಿದ್ದಾರೆ ಎನ್ನಲಾಗಿದೆ.

The post ಸ್ಟಾರ್​​​ ಹೀರೋ ಸಿನಿಮಾದೊಂದಿಗೆ ನಯನತಾರ ಬಾಲಿವುಡ್​​​ಗೆ ಎಂಟ್ರಿ appeared first on News First Kannada.

Source: newsfirstlive.com

Source link