ಸ್ಟಾರ್​​ ನಟಿ ನೋರಾ ಫತೇಹಿಗೆ ಶಾಕ್​ ಕೊಟ್ಟ ಕಿಡಿಗೇಡಿಗಳು..!


ಬಾಲಿವುಡ್​ ನಟಿ ನೋರಾ ಫತೇಹಿ ಅವರ ಇನ್​ಸ್ಟಾಗ್ರಾಮ್​ ಖಾತೆಯನ್ನು ಹ್ಯಾಕ್​ ಮಾಡಲು ಕೆಲ ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ. ನಿನ್ನೆ ನನ್ನ ಇನ್​ಸ್ಟಾಗ್ರಾಮ್​ ಖಾತೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಬರೋಬ್ಬರಿ 37.6 ಮಿಲಿಯನ್​ ಜನರು ನೋರಾ ಫತೇಹಿ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರೊ ನೋರಾ ಇನ್​ಸ್ಟಾಗ್ರಾಮ್​ ಖಾತೆಯನ್ನು ಯಾಕೆ ಡಿಆ್ಯಕ್ಟಿವೆಟ್​ ಮಾಡಿದ್ದಾರೆ ಎಂದು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು.

Nora Fatehi to perform along with Nick Jonas and Kehlani at VidCon Abu Dhabi on December 3ಸದ್ಯ ನೋರಾ ಇನ್​ಸ್ಟಾಗ್ರಾಮ್​ ಖಾತೆ ಸರಿ ಹೋಗಿದೆ. ಅವರ ಇನ್​​ಸ್ಟಾಗ್ರಾಮ್​ ಖಾತೆಯನ್ನು ಕೆಲ ಕೇಡಿಗೇಡಿಗಳು ಬೆಳಗ್ಗಿನಿಂದ ಹ್ಯಾಕ್​ ಮಾಡಲು ಪ್ರಯತ್ನಿಸಿದ್ದರು ಎಂದು ನೋರಾ ತಮ್ಮ ಸೋಶಿಯಲ್​ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದರು.

ಕ್ಷಮಿಸಿ ನನ್ನ ಇನ್​ಸ್ಟಾಗ್ರಾಮ್​​ ಖಾತೆಯನ್ನು ಹ್ಯಾಕ್​ ಮಾಡುವ ಪ್ರಯತ್ನ ನಡೆದಿದೆ. ಬೆಳಗ್ಗೆಯಿಂದ ಯಾರೋ ನನ್ನ ಖಾತೆಯನ್ನು ಹ್ಯಾಕ್​ ಮಾಡಲು ಪ್ರಯತ್ನಿಸಿದ್ದಾರೆ. ಮತ್ತೆ ನನ್ನ ಇನ್​ಸ್ಟಾ ಖಾತೆಯನ್ನು ಸರಿ ಹೋಗುವಂತೆ ಮಾಡಲು ನನಗೆ ಸಹಾಯ ಮಾಡಿದ ಇನ್​ಸ್ಟಾಗ್ರಾಮ್​ ತಂಡಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

The post ಸ್ಟಾರ್​​ ನಟಿ ನೋರಾ ಫತೇಹಿಗೆ ಶಾಕ್​ ಕೊಟ್ಟ ಕಿಡಿಗೇಡಿಗಳು..! appeared first on News First Kannada.

News First Live Kannada


Leave a Reply

Your email address will not be published.