ಸನ್ ರೈಸರ್ಸ್ ಹೈದರಾಬಾದ್ ತಂಡ ತೆಗೆದುಕೊಂಡ ನಿರ್ಧಾರ ಕ್ರೀಡಾ ಪ್ರೇಮಿಗಳಿಗೆ ಅಚ್ಚರಿ ಮೂಡಿಸಿದೆ. ಕೆಲ ಪ್ರಮುಖ ಆಟಗಾರರನ್ನು ಕೈಬಿಟ್ಟಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಮೂರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ.
ಕೇನ್ ವಿಲಿಯಮ್ಸನ್, ನಂತರ ಉಮ್ರಾನ್ ಮಲಿಕ್ ಹಾಗೂ ಮತ್ತೋರ್ವ ಯುವ ಆಟಗಾರ ಅಬ್ದುಲ್ ಸಮದ್ ಫ್ರಾಂಚೈಸಿಯಲ್ಲಿ ಉಳಿದುಕೊಂಡಿದ್ದಾರೆ. ಈ ಮೂಲಕ ಯುವ ಆಟಗಾರರಿಗೆ ಮಣೆ ಹಾಕಿದೆ.
ಡೇವಿಡ್ ವಾರ್ನರ್, ರಶೀದ್ ಖಾನ್, ಮನೀಶ್ ಪಾಂಡೆ, ಜಾನಿ ಬೈರ್ಸ್ಟೋವ್, ಭುವನೇಶ್ವರ್ ಕುಮಾರ್ ರಂತಹ ಸ್ಟಾರ್ಗಳನ್ನ ತಂಡ ಕೈ ಬಿಟ್ಟಿದೆ. ಕೇವಲ 22 ಕೋಟಿ ರೂಪಾಯಿ ಮೊತ್ತವನ್ನು ಸನ್ರೈಸರ್ಸ್ ಹೈದರಾಬಾದ್ ತಂಡ ರೀಟೈನ್ ಪ್ರಕ್ರಿಯೆಗಾಗಿ ಖರ್ಚು ಮಾಡಿದೆ.