ಇತ್ತೀಚೆಗಷ್ಟೇ ಭಾರತ ತಂಡದ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ ಅವರನ್ನು ವಿವಾಹವಾದ ಸಂಜನಾ ಗಣೇಶನ್‌ ಈಗ ಐಪಿಎಲ್‌ ಡ್ಯೂಟಿಗೆ ಮರಳಿದ್ದಾರೆ. ಸ್ಟಾರ್‌ ನ್ಪೋರ್ಟ್ಸ್ ಪ್ರಕಟಿಸಿದ 20 ಸದಸ್ಯರ ನಿರೂಪಕರ ತಂಡದಲ್ಲಿ ಸಂಜನಾ ಕೂಡ ಇದ್ದಾರೆ. ಜತಿನ್‌ ಸಪ್ರು, ಕೈರಾ ನಾರಾಯಣನ್‌, ನೆರೋಲಿ ಮೆಡೋಸ್‌ ಇತರ ಪ್ರಮುಖ ಹೆಸರುಗಳು. ಆದರೆ ತಾಯಿಯಾಗಿರುವ ಮಾಯಂತಿ ಲ್ಯಾಂಜರ್‌ ಸತತ ಎರಡನೇ ಐಪಿಎಲ್‌ನಿಂದಲೂ ಹೊರಗುಳಿದಿದ್ದಾರೆ.

ಸ್ಟಾರ್‌ ನ್ಪೋರ್ಟ್ಸ್ ನಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಜತೆಗೆ ಪ್ರಾದೇಶಿಕ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಂಗಾಲಿ ಮತ್ತು ಮರಾಠಿಯಲ್ಲೂ ವೀಕ್ಷಕ ವಿವರಣೆ ಮೂಡಿಬರಲಿದೆ.

ನಿರೂಪಕರ ತಂಡ: ಕೈರಾ ನಾರಾಯಣನ್‌, ಜತಿನ್‌ ಸಪ್ರು, ನೆರೋಲಿ ಮೆಡೋಸ್‌, ಅನಂತ್‌ ತ್ಯಾಗಿ, ಸುರೇನ್‌ ಸುಂದರಂ, ಧೀರಜ್‌ ಜುನೇಜಾ, ಭಾವನಾ ಬಾಲಕೃಷ್ಣ, ನಶ್‌ಪ್ರೀತ್‌ ಕೌರ್‌, ಸುಹೈಲ್‌ ಚಂದೋಕ್‌, ಅನುಭವ್‌ ಜೈನ್‌, ಆರ್‌. ಶ್ರೀನಿವಾಸನ್‌, ಸಂಜನಾ ಗಣೇಶನ್‌, ಮುತ್ತುರಮಣ್‌ ಆರ್‌., ಎಂ. ಆನಂದ ಶ್ರೀಕೃಷ್ಣ, ವಿಂಧ್ಯಾ ಮೇದಪಟ್ಟಿ, ನೇಹಾ ಚೌಧರಿ, ರೀನಾ ಡಿ’ಸೋಜಾ, ಕಿರಣ್‌ ಶ್ರೀನಿವಾಸ, ಮಧು ಮೇಲಂಕೋಡಿ ಮತ್ತು ತನ್ಯಾ ಪುರೋಹಿತ್‌.

ಇದನ್ನೂ ಓದಿ :ರಾತ್ರಿ ಕರ್ಫ್ಯೂ ಜಾರಿಗಿಂತ ಮೊದಲು ಆಸ್ಪತ್ರೆ ಸುಧಾರಣೆ ಮಾಡಿ : ವಾಟಾಳ್‌ ನಾಗರಾಜ್‌ ಆಗ್ರಹ

ಕ್ರೀಡೆ – Udayavani – ಉದಯವಾಣಿ
Read More