ಮೈಸೂರು: ಕೊರೊನಾ ಸೋಂಕಿಗೆ ಒಳಗಾಗಿದ ವ್ಯಕ್ತಿಗಳು ಹೆಚ್ಚು ದಿನದ ಹಾಸ್ಪಿಟಲ್‍ನಲ್ಲಿ ಇದ್ದರೆ ಬ್ಲಾಕ್ ಫಂಗಸ್ ಬರುತ್ತೆ. ಅಲ್ಲದೇ ಸ್ಟೀರಾಯ್ಡ್ ಔಷಧಿಗಳಿಂದ ಬ್ಲಾಕ್ ಫಂಗಸ್ ಬರುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರ ಸೂಚಿಸಿ ಮಾತ್ರೆ ಮತ್ತು ಔಷಧಿಗಳನ್ನು ಮಾತ್ರ ಸೇವಿಸಿ ಎಂದು ಫೇಸ್‍ಬುಕ್ ಲೈವ್‍ನಲ್ಲಿ ಡಿಸಿ ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ತಡೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಮೇ 1 ರಿಂದ ಎಲ್ಲಾ ಪ್ರಾಥಮಿಕ ಕೇಂದ್ರಗಳನ್ನು ಕೋವಿಡ್ ಮಿತ್ರಾ ಕೇಂದ್ರಗಳಾಗಿ ಮಾಡಲಾಗಿದೆ. ಏಕೆಂದರೆ ಕೊರೊನಾ ಸಮುದಾಯಕ್ಕೆ ಹರಡಿದೆ. ತಾಲೂಕು, ಹಳ್ಳಿಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಕೇಸ್ ಬರುತ್ತಿವೆ. ಆರ್.ಟಿ.ಪಿ.ಸಿ.ಆರ್ ಟೆಸ್ಟ್ ನಲ್ಲಿ ಖಚಿತ ರಿಸಲ್ಟ್ ಬರುತ್ತಿಲ್ಲ. ಈಗಾಗಲೇ ಮಾಡಿರುವ ಟೆಸ್ಟಿಂಗ್‍ನ ಶೇ.30 ರಿಸಲ್ಟ್ ತಪ್ಪಾಗಿ ಕಂಡುಬಂದಿದೆ. ಇದೇ ಕಾರಣದಿಂದ ನೆಗೆಟಿವ್ ಬಂದವರಲ್ಲೂ ಸೋಂಕು ಉಳಿದು, ಅವರು ಮೃತಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟೆಸ್ಟಿಂಗ್ ಕಡಿಮೆ ಮಾಡಿದ್ದೇವೆ. ಮೈಸೂರಿನಲ್ಲಿ ಹೆಚ್ಚು ರ್ಯಾಪಿಡ್ ಟೆಸ್ಟ್ ಮಾತ್ರ ಮಾಡುತ್ತಿದ್ದೇವೆ ಎಂದರು.

ಮೈಸೂರಿನಲ್ಲಿ ಈವರೆಗೆ 18 ಸಾವಿರ ಆಕ್ಟಿವ್ ಕೇಸ್ ಇದೆ. 20 ದಿನದ ಹಿಂದೆ ತಾಲ್ಲೂಕುಗಳಲ್ಲಿ ಶೇ.10, ನಗರದಲ್ಲಿ ಶೇ.90 ಪಾಸಿಟಿವ್ ಇತ್ತು. ಆದರೆ ಇಂದಿನ ಅಂಕಿ ಅಂಶದ ಪ್ರಕಾರ ಶೇ.50 ಪಾಸಿಟಿವ್ ಗ್ರಾಮಾಂತರದಿಂದಲೇ ಬಂದಿದೆ. ಇದರ ಅರ್ಥ ಸೋಂಕು ಕಮ್ಯೂನಿಟಿ ಸ್ಪ್ರೇಡ್ ಹಂತ ತಲುಪಿ ಆಗಿದೆ. ಇದಕ್ಕಾಗಿ ನಾವು ಪಂಚಸೂತ್ರ ಎಂಬ ಕಾರ್ಯಕ್ರಮದೊಂದೊಂದಿಗೆ ಕೋವಿಡ್ ಮಿತ್ರ ಆರಂಭಿಸಿದ್ದೇವೆ. ತಾಲೂಕಿನಲ್ಲಿರುವ 150 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಮಿತ್ರ ಮಾಡಿದ್ದೇವೆ. ಮೊದಲ 5 ದಿನ ಔಷಧಿ ಪಡೆಯೋದು, ಹೋಂ ಐಸೋಲೇಷನ್‍ನಲ್ಲೇ ಇರೋದು ಇದರ ಮುಖ್ಯ ಉದ್ದೇಶ.

ನನ್ನ ಕುಟುಂಬದಲ್ಲಿ ಎಲ್ಲರಿಗೂ ಪಾಸಿಟಿವ್ ಆಗಿತ್ತು. ನನ್ನೊಬ್ಬಳಿಗೆ ನೆಗೆಟಿವ್ ಆಗಿತ್ತು. ನಾವು ಸಹ ಮೊದಲ 5 ದಿನ ಔಷಧೋಪಚಾರ ಮಾಡಿಕೊಂಡಿದ್ದೇವೆ. ನನ್ನನ್ನು ಸೇರಿದಂತೆ ಎಲ್ಲರೂ ಮಾತ್ರೆ, ಔಷಧಿ ಪಡೆದುಕೊಂಡೆವು. ಈಗ ನಮ್ಮ ಮನೆಯಲ್ಲಿ ಎಲ್ಲರೂ ಗುಣಮುಖರಾಗುತ್ತಿದ್ದಾರೆ. ಹಾಗಾಗಿ ಸರ್ಕಾರ ಸೂಚಿಸಿದ ಮಾತ್ರೆಗಳನ್ನು ಸೇವಿಸಬೇಕು. ಇದು ನನಗೆ ನನ್ನ ಕುಟುಂಬದ ಸೋಂಕಿನಿಂದ ಅನುಭವ.

ಸದ್ಯ ಮೈಸೂರಿನಲ್ಲಿ 9 ಸಾವಿರ ಜನ ಹೋಂ ಐಸೋಲೇಷನ್ ಇದ್ದಾರೆ. ಕೋವಿಡ್ ಮಿತ್ರ ಕಾರ್ಯಕ್ರಮ ಎಲ್ಲರ ಮನೆಗೆ ತಲುಪಬೇಕು. ಪ್ರಾಥಮಿಕ ಸಂಪರ್ಕದವರು ಮೆಡಿಸನ್ ತೆಗೆದುಕೊಳ್ಳಬೇಕು. ಮೈಸೂರು ಜಿಲ್ಲೆಯಲ್ಲಿ ಶೇ.68 ವಾಕ್ಸಿನ್ ಹಾಕಲಾಗಿದೆ. ಶೇ.95 ಕೋವಿಶೀಲ್ಡ್ ಶೇ.5 ಕೋವಾಕ್ಸಿನ್ ಕೊಟ್ಟಿದ್ದೀವಿ. ಸದ್ಯಕ್ಕೆ 20 ಸಾವಿರ ವಾಕ್ಸಿನ್ ಜಿಲ್ಲೆಯಲ್ಲಿ ಇದೆ. ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂದರು.

The post ಸ್ಟೀರಾಯ್ಡ್ ಔಷಧಿಗಳಿಂದ ಬ್ಲಾಕ್ ಫಂಗಸ್ ಬರುವ ಸಾಧ್ಯತೆ ಇದೆ- ಸಿಂಧೂರಿ ಆತಂಕ appeared first on News First Kannada.

Source: newsfirstlive.com

Source link