ನಾಗಿಣಿ 2 ಖ್ಯಾತಿಯ ನಟಿ ಶಿವಾನಿ ಅಂದ್ರೆ ಪ್ರೇಕ್ಷರಿಗೆ ಅಚ್ಚು ಮೆಚ್ಚು.. ಅವ್ರ ಅಭಿನಯ ಡೈಲಾಗ್ ಡೆಲಿವರಿ ಮಾಡುವ ರೀತಿ ಎಲ್ಲವೂ ಕೂಡ ಸೂಪರ್.. ಅದರಲ್ಲೂ ತ್ರಿವಿಕ್ರಮ್ಗೆ ಕೊಡುವ ಪಂಚಿಂಗ್ ಸಖತ್ ಆಗಿರುತ್ತೆ.
ಇದಿಷ್ಟು ಮಾತ್ರವಲ್ಲದೆ ನಮ್ ಶಿವಾನಿ ಅಲಿಯಾಸ್ ನಮ್ರತಾ ಅವರ ಸ್ಟೈಲ್ ಬಗ್ಗೆ ಮತ್ತೊಂದು ಮಾತೆ ಇಲ್ಲ. ಅವ್ರು ಪಾತ್ರಕ್ಕೆ ತಕ್ಕಂತೆ ಬಳಸುವ ಕಾಸ್ಟ್ಯೂಮ್ ಅದಕ್ಕೆ ಮ್ಯಾಚ್ ಆಗುವಂತ ಆಕ್ಸಸರಿಸ್ ಹಾಗೂ ಮುಖ್ಯವಾಗಿ ಮೇಕಪ್ಅಬ್ಬಬ್ಭಾ..! ಯಾವ ರಂಬೆ, ಊರ್ವಶಿಗೂ ಕಡಿಮೆಯಿಲ್ಲದಂತೆ ಕಾಣ್ತಾರೆ ನಮ್ ನಮ್ರತಾ. ಇನ್ನೂ ಇವೆಲ್ಲವನ್ನು ನೋಡವ ನಮ್ ಪಡ್ಡೆ ಹುಡುಗರಿಗೆ ಹಾರ್ಟ್ನಲ್ಲಿ ಚಿಟ್ಟೆ ಬಿಟ್ಟಂಗಾಗುತ್ತದೆ.
ನಮ್ರತಾ ಆನ್ ಸ್ಕ್ರೀನ್ನಲ್ಲಿ ಸೂಪರ್ ಬೆಡಗಿ.. ಅದೇ ಕಾರಣದಿಂದ ಮೊನ್ನೆ ನಡೆದ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಶಿವಾನಿಗೆ ಬೆಸ್ಟ್ ಸ್ಟೈಲ್ ಐಕಾನ್ ಅವಾರ್ಡ್ ಸಿಕ್ಕಿದೆ.. ಅದಕ್ಕೂ ಮೀರಿದ ಪ್ರಶಂಸೆಯನ್ನ ಕನ್ನಡದ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ನೀಡಿದ್ದಾರೆ. ನಮ್ರತಾರ ಡ್ಯಾನ್ಸ್, ಆ್ಯಟಿಟ್ಯೂಡ್ ಹಾಗೂ ಸ್ಟೈಲ್ನ ಗಮನಿಸಿರುವ ಶಿವಣ್ಣ, ಆ ದೊಡ್ಡ ಸ್ಟೇಜ್ನಲ್ಲಿ ಹೊಗಳಿದ್ದಾರೆ.. ಇದು ಶಿವಾನಿ ಆ್ಯಕ್ಟಿಂಗ್ ಕರಿಯರ್ನಲ್ಲಿ ಸಿಕ್ಕಿದ ಅಥಿ ದೊಡ್ಡ ಉಡುಗೊರೆ ಅಂತ ಹೇಳಿದ್ರೆ ತಪ್ಪಾಗಲ್ಲ.
ಇದು ಶಿವಾನಿಯವ್ರ ಆನ್ಸ್ಕ್ರೀನ್ ವೈಖರಿ.. ಆದ್ರೆ ಶಿವಾನಿ ಅಲಿಯಾಸ್ ನಮ್ರತಾ ಗೌಡ ಆಫ್ ಸ್ಕ್ರೀನ್ನಲ್ಲೂ ಗ್ಲಾಮರಸ್ ಬೆಡಗಿ. ನಮ್ರತಾ ಗೌಡ ಅವ್ರ ಉಡುಗೆ ತೊಡುಗೆಗಳು ತುಂಬಾನೆ ವಿಭಿನ್ನಾವಾಗಿರತ್ತೆ.. ಅವ್ರ ಕಾಸ್ಟ್ಯೂಮ್ ಗಳನ್ನಾ ನೋಡಿ ಅದೆಷ್ಟೋ ಹುಡುಗಿಯರಿಗೆ ನಮ್ರತಾ ಅವ್ರ ಡಿಸೈನರ್ ಯಾರೂ ಎಂಬ ಪ್ರಶ್ನೆ ಕಾಡಿದೆ. ಅಷ್ಟರ ಮಟ್ಟಿಗೆ ಜನರನ್ನಾ ಅಕ್ಟ್ರಾಕ್ಟ್ ಮಾಡಿದೆ ನಮ್ರತಾರ ಸ್ಟೈಲ್.
ನಮತ್ರಾ ಅವ್ರನ್ನಾ ಸೀರೆಯಲ್ಲಿ ನೋಡೋದೆ ಚಂದ.. ಯಾವ ತರಹದ ಸೀರೆಯನ್ನು ಕೊಟ್ರು ಅದನ್ನ ಅದ್ಭುತವಾಗಿ ಧರಿಸ್ತಾರೆ. ಸೀರೆಗೆ ತಕ್ಕಂತೆ ವಿಭಿನ್ನ ಶೈಲಿಯಲ್ಲಿ ಬ್ಲೌಸ್ ಡಿಸೈನ್ ಮಾಡಿಸ್ತಾರೆ.. ಹಾಗೂ ಜ್ಯೂವೆಲ್ಸ್ ಕೂಡಾ ಆ ಸೀರೆಗೆ ಮ್ಯಾಜ್ ಅಗವಂತೆ ಇರುತ್ತೆ.. ಸೀರೆ ಉಟ್ರೆ ಲಕ್ಷಣವಾಗಿ ಬಳೆ ಧರಿಸಬೇಕು ಅನ್ನವವರ ಥಾಟ್ ನಮ್ರತಾರ ಆಕ್ಸ್ಸರಿಸ್ ನೋಡಿದ್ರೆ ಖಂಡಿತಾ ಬದಲಾಗುತ್ತೆ.
ಇನ್ನೂ ಬೋಲ್ಡ್ ಅಂದ್ರೆ ಗ್ಲಾಮರಸ್ ಲುಕ್ನಲ್ಲಿ ಯಾರಿಗೂ ಕಡಿಮೆಯಿಲ್ಲಾ ಈ ಕಿರುತೆರೆಯ ಬೆಡಗಿ.. ಗ್ಲಾಮ್ ಲುಕ್ನಲ್ಲಿ ನಮ್ರತಾ ಒಂದಿಷ್ಟು ಫೋಟೋಶೂಟ್ ಮಾಡಿಸಿದ್ದಾರೆ. ಮಾರ್ಡನ್ ಡ್ರೆಸ್ನಲ್ಲಿ ನಮ್ರತಾ ಸಖತ್.. ಅದರಲ್ಲೂ ಡಾರ್ಕ್ ಕಲರ್ ಬಟ್ಟೆಗಳಲ್ಲಿ ಡಾಲ್ ತರಹ ಕಾಣ್ತಾರೆ.. ಎಷ್ಟೊ ಹುಡುಗರ ನಿದ್ದೆ ಕೆಡಿಸಿದೆ ನಮ್ರತಾ ಲುಕ್. ಒಟ್ಟಿನಲ್ಲಿ ನಮ್ಮ ಚಂದದ ಬೆಡಗಿ ನಮ್ರತಾ ಎಲ್ಲಾ ರೀತಿಯ ಕಾಸ್ಟ್ಯೂಮ್‌ನಲ್ಲಿ ಮಿಂಚುತ್ತಾರೆ. ಹೀಗಾಗಿಯೇ ನಮ್ರತಾಗೆ ಸ್ಟೈಲ್ ಐಕಾನ್ ಅವಾರ್ಡ್ ಬಂದಿರೋದು.. ನೀವೆನಂತಿರಾ..?