‘ಸ್ಟ್ರಾಂಗ್​ ಬಾಡಿ, ಸ್ಟ್ರಾಂಗ್​ ಮನಸ್ಸು’; ವಿಡಿಯೋ ಸಹಿತ ಸಾಕ್ಷಿ ತೋರಿಸಿದ ನಟಿ ಸಮಂತಾ | Yashoda movie actress Samantha shares her gym workout video


‘ಸ್ಟ್ರಾಂಗ್​ ಬಾಡಿ, ಸ್ಟ್ರಾಂಗ್​ ಮನಸ್ಸು’; ವಿಡಿಯೋ ಸಹಿತ ಸಾಕ್ಷಿ ತೋರಿಸಿದ ನಟಿ ಸಮಂತಾ

ಸಮಂತಾ

ಒಂದಿಲ್ಲೊಂದು ಕಾರಣಕ್ಕೆ ನಟಿ ಸಮಂತಾ (Samantha) ಅವರು ಪ್ರತಿ ದಿನವೂ ಸುದ್ದಿ ಆಗುತ್ತಾರೆ. ಅವರನ್ನು ಕೆಲವರು ಟೀಕಿಸುತ್ತಾರೆ. ಆದರೆ ಅಪಾರ ಸಂಖ್ಯೆಯ ಅಭಿಮಾನಿಗಳು ಪ್ರೀತಿಸುತ್ತಾರೆ. ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ಜೀವನದ ವಿಚಾರಗಳಿಗಾಗಿ ಸಮಂತಾ ಆಗಾಗ ಚರ್ಚೆಯ ವಿಷಯ ಆಗುತ್ತಾರೆ. ಪತಿ ನಾಗ ಚೈತನ್ಯ ಜೊತೆಗಿನ ಸಂಸಾರಕ್ಕೆ ಗುಡ್​ ಬೈ ಹೇಳಿದ ಬಳಿಕ ಅವರ ಬದುಕಿನ ಶೈಲಿ ಸಾಕಷ್ಟು ಬದಲಾಗಿದೆ. ಪ್ರತಿ ದಿನವೂ ಫಿಟ್ನೆಸ್​ (Samantha Fitness) ಸಲುವಾಗಿ ಸಮಯ ನೀಡುವ ಸಮಂತಾ ಅವರು ಜಿಮ್​ನಲ್ಲಿ ಕಠಿಣ ವರ್ಕೌಟ್​ ಮಾಡುತ್ತಿದ್ದಾರೆ. ಅದರ ಒಂದು ವಿಡಿಯೋವನ್ನು (Samantha Gym Video) ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ಇತರರಿಗೂ ಸ್ಫೂರ್ತಿ ಬರುವಂತೆ ಮಾಡಿದ್ದಾರೆ. ಈ ವಿಡಿಯೋಗೆ ಸಮಂತಾ ಕ್ಯಾಪ್ಷನ್​ ನೀಡಿರುವುದು ಗಮನ ಸೆಳೆಯುತ್ತಿದೆ. ‘ಸ್ಟ್ರಾಂಗ್​ ಬಾಡಿ, ಸ್ಟ್ರಾಂಗ್​ ಮನಸ್ಸು’ ಎಂದು ಬರೆದುಕೊಂಡಿರುವ ಅವರು ತಮ್ಮ ಉದ್ದೇಶ ಏನು ಎಂಬುದನ್ನು ಕೂಡ ತಿಳಿಸಿದ್ದಾರೆ. ಅವರ ಅಭಿಮಾನಿಗಳ ವಲಯದಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ಹಲವು ಬಗೆಯ ಪಾತ್ರಗಳನ್ನು ಸಮಂತಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಕೈಯಲ್ಲಿ ಹಲವು ಪ್ರಾಜೆಕ್ಟ್​ಗಳಿವೆ. ‘ಶಾಕುಂತಲಂ’, ‘ಯಶೋಧ’, ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಮುಂತಾದ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾ ಏ.28ಕ್ಕೆ ಬಿಡುಗಡೆ ಆಗಲಿದೆ. ‘ಯಶೋದಾ’ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಹರಿ ಶಂಕರ್ ಹಾಗೂ ಹರಿ ನಾರಾಯಣ್​ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಮಂತಾ ಅವರು ಯಶೋದಾ ಆಗಿ ನಟಿಸುತ್ತಿದ್ದಾರೆ. ಉನ್ನಿ ಮುಕುಂದನ್​, ವರಲಕ್ಷ್ಮೀ ಶರತ್​ಕುಮಾರ್ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಸೈನ್ಸ್​ ಫಿಕ್ಷನ್​ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿದ್ದು, ಸಮಂತಾ ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚಲಿದ್ದಾರೆ. ಹಾಗಾಗಿ ಅವರ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

‘2022 ಮತ್ತು 2023ರ ವರ್ಷ ನನ್ನ ಪಾಲಿಗೆ ದೈಹಿಕವಾಗಿ ಹೆಚ್ಚು ಶ್ರಮ ಬೇಡುವ ಮತ್ತು ಸವಾಲಿನ ಸಮಯ ಆಗಿರಲಿದೆ’ ಎಂದು ಸಮಂತಾ ಹೇಳಿದ್ದಾರೆ. ಆ ಕಾರಣಕ್ಕಾಗಿ ಅವರು ಈ ಪರಿ ವರ್ಕೌಟ್​ ಮಾಡುತ್ತಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ಸಮಂತಾ ಅವರು ಆ್ಯಕ್ಷನ್​ ದೃಶ್ಯಗಳಲ್ಲಿ ನಟಿಸಿದ್ದರು. ಅವರ ಫೈಟಿಂಗ್​ ಕಂಡು ಅಭಿಮಾನಿಗಳು ಭೇಷ್​ ಎಂದಿದ್ದರು. ಈ ರೀತಿಯ ಪಾತ್ರಗಳನ್ನು ಮಾಡಲು ಬಾಡಿ ಫಿಟ್​ ಆಗಿರಬೇಕಾದ್ದು ತುಂಬ ಅಗತ್ಯ. ಹಾಗಾಗಿ ಸಮಂತಾ ಅವರು ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ.

ಅದೇ ರೀತಿ ಗ್ಲಾಮರಸ್​ ಪಾತ್ರಗಳನ್ನು ಮಾಡುವಲ್ಲಿಯೂ ಸಮಂತಾ ಹಿಂದೆ ಬಿದ್ದಿಲ್ಲ. ‘ಪುಷ್ಪ’ ಸಿನಿಮಾದಲ್ಲಿ ‘ಹು ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಹಾಡಿಗೆ ಹೆಜ್ಜೆ ಹಾಕಿದ ಅವರು ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದರು. ‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾದಲ್ಲಿಯೂ ಅವರು ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುತ್ತಾರೆ ಎಂಬುದಕ್ಕೆ ಈಗ ಸಾಕ್ಷಿ ಸಿಕ್ಕಿದೆ. ಈ ಸಿನಿಮಾದಲ್ಲಿ ನಯನತಾರಾ ಮತ್ತು ವಿಜಯ್​ ಸೇತುಪತಿ ಕೂಡ ನಟಿಸಿದ್ದಾರೆ. ನಯನತಾರಾ ಪ್ರಿಯತಮ ವಿಘ್ನೇಶ್​ ಶಿವನ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ‘ಟು ಟು ಟು..’ ಹಾಡಿನ ಗ್ಲಿಂಪ್ಸ್​ ರಿಲೀಸ್​ ಆಗಿದ್ದು, ಅದರಲ್ಲಿ ಸಮಂತಾ ಅವರು ಶಾರ್ಟ್​ ಡ್ರೆಸ್​ ಧರಿಸಿ ಡ್ಯಾನ್ಸ್​ ಮಾಡಿದ್ದಾರೆ.

TV9 Kannada


Leave a Reply

Your email address will not be published.