ಸ್ಥಾಪನೆಯ 120 ನೇ ವಾರ್ಷಿಕೋತ್ಸವ ಅಂಗವಾಗಿ ರಾಯಲ್ ಎನ್​ಫೀಲ್ಡ್​ ಎರಡು ಸೀಮಿತ ಆವೃತ್ತಿ ಬೈಕ್​ಗಳನ್ನು ಬಿಡುಗಡೆ ಮಾಡುತ್ತಿದೆ! | Royal Enfield to launch 650 Twins to commemorate 120 years of its existence, only 120 bikes for Indian market


ರಾಯಲ್ ಎನ್ಫೀಲ್ಡ್ ಕಂಪನಿ ಅಸ್ತಿತ್ವಕ್ಕೆ ಬಂದು 120 ವರ್ಷ ಕಳೆಯಿತು ಮಾರಾಯ್ರೇ. ಕಂಪನಿಯು 120 ನೇ ವಾರ್ಷಿಕೋತ್ಸವ ಸ್ಮರಣೀಯ ಮಾಡುವುದಕ್ಕೋಸ್ಕರ ಇಂಟೆರ್ ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್ಗಳನ್ನು ಈಗ ಜಾರಿಯಲ್ಲಿರುವ ಇ ಐ ಸಿ ಎಮ್ ಎ 2021 ಮೋಟಾರ್ ಶೋನಲ್ಲಿ ಪ್ರದರ್ಶಿಸುತ್ತಿದೆ. ಹೊಸ 120ನೇ ವಾರ್ಷಿಕೋತ್ಸವದ ಬೈಕ್​ಗಳು ಭಾರತದಲ್ಲಿ ಕೇವಲ ಅನ್ಲೈನ್ ಮೂಲಕ ಮಾತ್ರ ಲಭ್ಯವಾಗಲಿದ್ದು, ಮಾರಾಟವು ಡಿಸೆಂಬರ್ 6, 2021 ರಿಂದ ಆರಂಭವಾಗಲಿದೆ. ನೀವು ಈ ಕಂಪನಿಯ ಬೈಕ್ಗಳ ಅಭಿಮಾನಿಯಾಗಿದಲ್ಲಿ ನಿಮಗೆ ತಿಳಿಸಬೇಕಿರುವ ಅತಿ ಮುಖ್ಯ ಸಂಗತಿಯೇನೆಂದರೆ, ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ನೀವು ಈಗ ಬುಕ್ ಮಾಡಿದರೂ, ಇಂಟೆರ್ ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್ಗಳು 2022 ರ ಮೊದಲ ತ್ರೈಮಾಸಿಕದಲ್ಲಷ್ಟೇ ಭಾರತದ ಮಾರ್ಕೆಟ್ ಪ್ರವೇಶಿಸಲಿವೆ.

ಅಂದಹಾಗೆ, ರಾಯಲ್ ಎನ್​ಫೀಲ್ಡ್​​​ ಕಂಪನಿಯು ಎರಡೂ ಮಾಡೆಲ್ ಗಳು ಸೇರಿ ಕೇವಲ 480 ಬೈಕ್​ಗಳನ್ನು ಮಾತ್ರ ಉತ್ಪಾದಿಸಲಿದ್ದು ಅದರಲ್ಲಿ 120 ಬೈಕ್​ಗಳನ್ನು  ಮಾತ್ರ ಭಾರತೀಯ ಮಾರ್ಕೆಟ್ ಗಾಗಿ ಮೀಸಲಿರಿಸಲಾಗಿದೆ.

ಮಿಕ್ಕಿದ ಗಾಡಿಗಳನ್ನು ಯೂರೋಪ್, ಯುಎಸ್, ದಕ್ಷಿಣ ಮತ್ತು ಪೂರ್ವ ಆಫ್ರಿಕಾ ಮೊದಲಾದ ಪ್ರಾಂತ್ಯಗಳಿಗೆ 60 ಕಾಂಟಿನೆಂಟಲ್ ಜಿಟಿ ಮತ್ತು 60 ಇಂಟರ್ ಸೆಪ್ಟರ್ ಐ ಎನ್ ಟಿ 650 60 ಬೈಕ್ಗಳು ಸೇರಿದಂತೆ ಪ್ರತಿ ಪ್ರಾಂತ್ಯಕ್ಕೆ 120 ವೆಹಿಕಲ್​ಗಳನ್ನು ಮಾತ್ರ ಕಳಿಸಲಾಗುವುದೆಂದು ಕಂಪನಿ ಮೂಲಗಳು ತಿಳಿಸಿವೆ.

ಈ ಬೈಕ್ ಗಳು ಭಾರತದ ಮಾರ್ಕೆಟ್ನಲ್ಲಿ ಸಹಜವಾಗೇ ಬಹಳ ದುಬಾರಿ ಎನಿಸಲಿವೆ. ಇಂಟರ್ ಸೆಪ್ಟರ್ ಐ ಎನ್ ಟಿ 650 ಬೈಕ್ ಸೀಮಿತ ಆವೃತ್ತಿಯ ಬೆಲೆ ನಿಮ್ಮ ಕೈ ಸೇರುವ ಹೊತ್ತಿಗೆ ರೂ 3.25 ಲಕ್ಷ ಮತ್ತು ಕಾಂಟಿನೆಂಟಲ್ ಜಿಟಿ ಬೈಕಿನ ಬೆಲೆ ರೂ. 3.40 (ಎರಡೂ ಎಕ್ಸ್ ಶೋರೂಮ್ ಬೆಲೆಗಳು) ಲಕ್ಷವಾಗಬಹುದು.

ಇದನ್ನೂ ಓದಿ:   ಪ್ರಸವದ ವೇಳೆ ಕೆಸರಿನಲ್ಲಿ ಜಾರಿ ಬಿದ್ದ ಆನೆ ಮರಿ ಮೇಲೆತ್ತಲು ತಾಯಿ ಆನೆ ಪರದಾಟ, ಮನ ಕಲಕುವಂತ ವಿಡಿಯೋ

TV9 Kannada


Leave a Reply

Your email address will not be published. Required fields are marked *