ಹಾಸನ: ಜಿಲ್ಲೆಯಲ್ಲಿ ಮತ್ತೆ ಬಂದೂಕು ಸದ್ದು ಮಾಡಿದ್ದು, ಗುಂಡಿನ ದಾಳಿಗೆ ಯುವಕ ಸಾವನ್ನಪ್ಪಿರುವ ಘಟನೆ ಬೇಲೂರು ತಾಲೂಕಿನ ಕಲ್ಲಹಳ್ಳಿ ಕಾಡಿನಲ್ಲಿ ನಡೆದಿದೆ.

ಬೇಲೂರು ತಾಲೂಕಿನ ಕುಶಾವರ ಗ್ರಾಮದ ಮಧು (24) ಮೃತಪಟ್ಟ ಯುವಕ. ನಿನ್ನೆ ಈತ ಸ್ನೇಹಿತರ ಜೊತೆಗೆ ಬೇಟೆಗೆ ತೆರಳಿದ್ದಾಗ ಘಟನೆ ನಡೆದಿದೆ. ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮಧುನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸ್ನೇಹಿತರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಯುವಕ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದು, ಸಾವಿನ ಬಗ್ಗೆ ಹಲವು ಅನುಮಾನ ಮೂಡಿದೆ.

ಅರಣ್ಯಕ್ಕೆ ಶಿಕಾರಿಗೆ ತೆರಳಿದಾಗ ಮಿಸ್ ಫೈರ್ ಆಗಿದೆಯಾ ಅಥವಾ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಲಾಗಿದೆಯಾ ಎಂಬ ಅನುಮಾನ ಮೂಡಿದೆ. ಘಟನೆ ಕುರಿತಂತೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

The post ಸ್ನೇಹಿತರ ಜೊತೆ ಬೇಟೆಗೆ ತೆರಳಿದ್ದ ಯುವಕ ಗುಂಡೇಟಿಗೆ ಬಲಿ.. ಸಾವಿನ ಸುತ್ತ ಅನುಮಾನ appeared first on News First Kannada.

Source: newsfirstlive.com

Source link