ಸ್ನೇಹಿತೇಶ್ ಗೂಂಡಾಗಿರಿ ಕೇಸ್; ಆರೋಪಿಗಳ ಪತ್ತೆಗೆ ಪೊಲೀಸರು ಹಿಂದೇಟು ಹಾಕ್ತಿರೋದ್ಯಾಕೆ?

ಬೆಂಗಳೂರು: ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತಗೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ರು ಮೀನಮೇಷ ಎಣಿಸ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರೇಖಾ ಜಗದೀಶ್, ಅಪ್ಪುಪಪ್ಪು ಖ್ಯಾತಿಯ ಸ್ನೇಹಿತ್ ಬೌನ್ಸರ್ ಗಳನ್ನ ಕರೆದೋಯ್ದು ಮಹಿಳಾ ಕೆಲಸಗಾರರ ಬಟ್ಟೆ ಹರಿದು ಹಲ್ಲೆ ನಡೆಸಲಾಗಿತ್ತು. ಹಲ್ಲೆ ಸಂಬಂಧ ಇಂದು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿದೆ. ಜೊತೆಗೆ ಮೊಬೈಲ್ ಮೂಲಕ ವಿಚಾರ ತಿಳಿಸಿರೊ ಪೊಲೀಸ್ರು ದೂರುದಾರರ ಮನೆಯ ಸ್ಪಾಟ್ ಮಹಜರ್ ನಡೆಸಿದ್ದಾರೆ. ಆದರೆ ಆರೋಪಿಗಳನ್ನ ಪತ್ತೆ ಮಾಡಲು ಮಾತ್ರ ಹಿಂದೇಟು ಹಾಕ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:ಅಪ್ಪು ಪಪ್ಪು ಖ್ಯಾತಿಯ ಸ್ನೇಹಿತೇಶ್ ಗೂಂಡಾಗಿರಿ..? ಮಹಿಳೆ ಮೇಲೆ ಹಲ್ಲೆ ಆರೋಪ

ತಮ್ಮ ಮನೆಯ ಎದುರಿನ ಮನೆಯ ಕೆಲಸದ ಮಹಿಳೆ ಮೇಲೆ ತನ್ನ ಬೌನ್ಸರ್​ಗಳ ಸಮೇತ ಬಂದು ಸೌಂದರ್ಯ ಜಗದೀಶ್ ಕುಟುಂಬ ಹಲ್ಲೆ ಮಾಡಿದೆ ಎಂದು ಎದುರು ಮನೆಯ ಮಾಲೀಕರಾದ ಮಂಜುಳಾ ಆರೋಪಿಸಿದ್ದರು. ಈ ಕುರಿತು ದೂರು ಕೂಡ ದಾಖಲಿಸಿದ್ದರು. ಇತ್ತ ಗಲಾಟೆಯಾದ ಬಳಿಕ ಸ್ನೇಹಿತೇಶ್ & ಟೀಂ ಎಸ್ಕೇಪ್ ಆಗಿದ್ದು ಪೊಲೀರು ಮೌನವಹಿಸಿದ್ದಾರೆಂದು ಅವರು ಆರೋಪಿಸಿದ್ದಾರೆ.

News First Live Kannada

Leave a comment

Your email address will not be published. Required fields are marked *