ತುಮಕೂರು: ಜಿಲ್ಲೆಯ ಸಿದ್ದಗಂಗಾ ಮಠಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಭೇಟಿ ನೀಡಿ ಪೀಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ತಮ್ಮ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್​​ಗಳ ಬಗ್ಗೆ ಮಾಹಿತಿಯನ್ನ ಶ್ರೀಗಳಿಗೆ ನೀಡಿದ್ದಾರೆ.

ಭೇಟಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ.. ಸಿಎಂ ಬದಲಾವಣೆ ವಿಚಾರವಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಈಗಾಗ್ಲೇ ಫಲಿತಾಂಶ ಹೇಳಿದ್ದಾರೆ. ಫಲಿತಾಂಶ ಹೇಳಿದ ಬಳಿಕವೂ ಮಾತನಾಡಿದರೆ ನಮ್ಮಂತಹ ಮೂರ್ಖರು ಯಾರಿಲ್ಲ. ಎರಡು ವರ್ಷ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರಲಿದೆ. ಇನ್ನು ಎರಡು ವರ್ಷದ ಬಳಿಕ ಜನಾದೇಶಬೇಕು ಎಂದಿದ್ದಾರೆ.

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ.. ಕಳೆದ ಬಾರಿ ಕಾಂಗ್ರೆಸ್​​ನವರು 70 ಸೀಟಿಗೆ ಬಂದ್ರು, ಈಗ ಎಷ್ಟಿದ್ದಾರೆ..? ದೇಶದಲ್ಲಿ ಕಾಂಗ್ರೆಸ್​ಗೆ ಅಡ್ರೆಸ್ ಇಲ್ಲ. ಈಗ್ಲೇ ನಾಯಕತ್ವದ ಕಚ್ಚಾಟ ಶುರುವಾಗಿದೆ. ಐದಾರು ಜನ ನಾನು ಸಿಎಂ ಆಗಬೇಕು ಅಂತಿದ್ದಾರೆ. ಮುಂದೆ ಕಾಂಗ್ರೆಸ್​ 25 ಸೀಟ್ ಪಡೆಯಲಿದೆ. ಆ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡಲ್ಲ. ಜನರು ಕಾಂಗ್ರೆಸ್​ನ್ನು ತಿರಸ್ಕಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಅವರಿಗೆ ಕರೆ ಮಾಡಿ ಮಾತನಾಡಿದೆ. ಅವರಿಗೆ ಧೈರ್ಯ ಹೇಳಿದ್ದೇವೆ, ಅವರು ಸಮಾಧಾನವಾಗಿರಬೇಕು. ರಾಷ್ಟ್ರೀಯ ನಾಯಕರು, ಯಡಿಯೂರಪ್ಪನವರು ಇದ್ದಾರೆ. ಅವರು ತೀರ್ಮಾನ ಮಾಡುತ್ತಾರೆ. ನಮ್ಮ ಸ್ನೇಹಿತರು ತಾಳ್ಮೆಯಿಂದ ಇರಬೇಕು ಎಂದು ರೇಣುಕಾಚಾರ್ಯ ಹೇಳಿಕೆ ನೀಡಿದರು.

ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರ ಊಹಾಪೋಹ. ಅವರು ಬಿಜೆಪಿ ಪಕ್ಷದ ಅಡಿಯಲ್ಲಿ ಗೆಲುವು ಸಾಧಿಸಿದ್ದಾರೆ. ಸಚಿವರಾಗಿದ್ದಾರೆ ಒಳ್ಳೆ ಕೆಲಸವನ್ನೂ ಮಾಡಿದ್ದಾರೆ. ಹೀಗಾಗಿ ಅವರು ಹೇಗೆ ವಲಸಿಗರು ಆಗುತ್ತಾರೆ. ಯಡಿಯೂರಪ್ಪ, ಅಮಿತ್ ಶಾ, ಮೋದಿ ನಮ್ಮ ನಾಯಕರು ಅಂತ ಹೇಳಿದ್ದಾರೆ.‌ ನಮ್ಮ ರಾಜಕೀಯ ಅಂತ್ಯವಾಗುವುದು ಬಿಜೆಪಿಯಲ್ಲೇ ಅಂತ ಹೇಳಿದ್ದಾರೆ, ಅವರ ಜೊತೆಗೆ ಕರೆ ಮಾತನಾಡುತ್ತೇನೆ. ತಾಳ್ಮೆಯಿಂದ ಇರುವಂತೆ ವಿನಂತಿ ಮಾಡುತ್ತೇನೆ ಎಂದಿದ್ದಾರೆ.

The post ಸ್ನೇಹಿತ ಜಾರಕಿಹೊಳಿ ಸಮಾಧಾನ, ತಾಳ್ಮೆಯಿಂದ ಇರಬೇಕು- ರೇಣುಕಾಚಾರ್ಯ ಹೀಗಂದಿದ್ದೇಕೆ..? appeared first on News First Kannada.

Source: newsfirstlive.com

Source link