ಬೆಂಗಳೂರು: ಕೊರೊನಾ ಹೆಚ್ಚಾಗಿರುವ ಕಾರಣ ಬಿಗ್‍ಬಾಸ್ ಮನೆಯಿಂದ  ಅರ್ಧಕ್ಕೆ ಹೊರಬಂದ ಅಷ್ಟೂ ಸ್ಪರ್ಧಿಗಳ ಜೊತೆಗೆ ಸುದೀಪ್ ಜಸ್ಟ್ ಮಾತ್ ಮಾತಲ್ಲಿ ಮಾತುಕತೆ ನಡೆಸಿದ್ದಾರೆ.

ಮಂಜು ಪಾವಗಡ ಜೊತೆಗೆ ಸುದೀಪ್ ಮಾತು ಆರಂಭಿಸಿದರು. ನಾನು ಬಿಗ್ ಬಾಸ್‍ಗೆ ಬಂದಾಗಲೇ ಹೀಗೆ ಆಗಬೇಕಿತ್ತಾ ಅಂತ ಸಿಕ್ಕಾಪಟ್ಟೆ ಬೇಜಾರ್ ಆಯ್ತು. ಪೂರ್ತಿ ಮುಗಿಯಲಿಲ್ಲ. ನಾವು ಇದ್ದಾಗಲೇ ನಿಮಗೆ ಹುಷಾರಿಲ್ಲದೇ ಹಾಗೇ ಆಯ್ತು ಅಂತ ಬೇಸರ ಎನಿಸಿತು ಎಂದು ಮಂಜು ಬೇಸರ ತೋಡಿಕೊಂಡರು. ಸುದೀಪ್ ಅವರ ಜೊತೆ ಮಾತನಾಡಿದ ಶಮಂತ್, ಪದೇ ಪದೇ ನಾನು ಸೇವ್ ಆಗಿದ್ದೇ ದೊಡ್ಡ ಶಾಕ್ ಎನಿಸಿತ್ತು. ನಾನು ಥರ್ಡ್ ಗೇರ್‌ನಿಂದ ಫೋರ್ತ್‌ ಗೇರ್‌ಗೆ ಶಿಫ್ಟ್ ಆಗಿದ್ದೆ. ಇನ್ನೇನು ಫೈನಲ್‍ಗೆ ಹೋಗೋಣ ಅಂದ್ರೆ ಪೆಟ್ರೋಲ್ ಖಾಲಿ ಎಂದು ಬೇಸರ ಮಾಡಿಕೊಂಡರು. ಅರ್ಧಕ್ಕೆ ಶೋ ಮುಗಿದಿದ್ದರಿಂದ ಬೇಸರವಾಯ್ತು ಎಂದು ಎಲ್ಲ ಸ್ಪರ್ಧಿಗಳು ಕಿಚ್ಚ ಅವರ ಬಳಿ ಹೇಳಿಕೊಂಡಿದ್ದಾರೆ.

ಪ್ರಶಾಂತ್ ಸಂಬರಗಿ ಬಗ್ಗೆ ಮಾತನಾಡಿದ ಕಿಚ್ಚ, ಶೋ ಮುಗಿಯಿತು ಅಂತ ಪ್ರಶಾಂತ್ ಅವರಿಗೆ ಬೇಸರ ಏನೋ ಇದೆ. ಆದ್ರೆ ಬೇರೆಯವರಿಗೆ ಗೆಲ್ಲುವುಕ್ಕೆ ಬಿಟ್ಟಿಲ್ಲ ಅನ್ನೋ ಒಂದು ಸಮಾಧಾನ ಕೂಡ ಇದೆ ಎಂದು ಸಂಬರಗಿ ಕಾಲೆಳೆದರು. ಹಾಗೆಯೇ, ರಘು ಗೌಡಗೆ, ಹೇಗಿದ್ದೀರಾ ರಘು? ಮನೆಯಿಂದ ನಿಮ್ಮನ್ನು ಹೊರಗಡೆ ಹಾಕಿಲ್ಲ ತಾನೇ ಎಂದು ಸುದೀಪ್ ತಮಾಷೆ ಮಾಡಿದರು.

ಸಂಬರಗಿ ಅವರು ಊಟಾ ಆದಮ್ಮೇಲೆ ಊಪವಾಸ ಕೂರುತ್ತೇವೆ ಎನ್ನುತ್ತಿದ್ದರು. ಚಕ್ರವರ್ತಿ ಮನೆಗೆ ಎಂಟ್ರಿಕೊಟ್ಟಿದ್ದು, ಶಮಂತ್ ಪ್ರತಿವಾರ ಎಲಿಮಿನೇಶನ್ ನಿಂದ ಸೇವ್ ಆಗುತ್ತಿರುವುದು. ನಿಧಿ ಶುಭಾ ಕಿತ್ತಾಟ ಹೀಗೆ ಹಲವು ಪನ್ನಿ ವಿಚಾರಗಳ ಕುರಿತಾಗಿ ಕಿಚ್ಚಾ ಸಖತ್ ಮಜವಾಗಿ ಮಾತನಾಡಿದ್ದಾರೆ. ಸ್ಫರ್ಧಿಗಳು ಸುದೀಪ್ ಅವರನ್ನು ನೋಡಿ ಸಖತ್ ಖುಷಿಯಾಗಿದ್ದಾರೆ.

ದಿವ್ಯಾ ಉರುಡುಗ, ಅರವಿಂದ್, ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ವೈಷ್ಣವಿ, ಚಕ್ರವರ್ತಿ, ಸಂಬರಗಿ ಇತರರ ಜೊತೆಗೂ ಸಖತ್ ಫನ್ನಿ ಆಗಿ ಸುದೀಪ್ ಮಾತುಕತೆ ನಡೆಸಿದ್ದಾರೆ. ಕೆಲವು ತಮಾಷೆ ವಿಚಾರಗಳನ್ನು ಹೇಳುವ ಮೂಲಕವಾಗಿ ಸ್ಪರ್ಧಿಗಳ ಜೊತೆಗೆ ಮಾತನಾಡಿದ್ದಾರೆ.

ಬಿಗ್‍ಬಾಸ್ ಶೋ ನಡೆಯುತ್ತಿರುವಾಗಲೇ ಸುದೀಪ್‍ಗೆ ಅನಾರೋಗ್ಯ ಉಂಟಾಗಿದ್ದರಿಂದ ಅವರು 2-3 ವಾರಗಳ ಕಾಲ ಶೋಗೆ ಬರಲಾಗಲಿಲ್ಲ. ಹಾಗಾಗಿ, ಸ್ಪರ್ಧಿಗಳ ಜೊತೆಗಿನ ಸುದೀಪ್ ಅವರ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ ವಾರ ಕಥೆ ಕಿಚ್ಚನ ಜೊತೆ, ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಸಂಚಿಕೆಗಳನ್ನು ವೀಕ್ಷಕರು ಮಿಸ್ ಮಾಡಿಕೊಂಡಿದ್ದರು. ಇದೀಗ ಬಿಗ್‍ಬಾಸ್ ಸ್ಪರ್ಧಿಗಳ ಜೊತೆಗೆ ಸುದೀಪ್ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು.

The post ಸ್ಪರ್ಧಿಗಳ ಜೊತೆಯಲ್ಲಿ ಕಿಚ್ಚನ ಜಸ್ಟ್ ಮಾತ್ ಮಾತಲ್ಲಿ appeared first on Public TV.

Source: publictv.in

Source link