ರಷ್ಯಾ ಮೂಲದ ಸ್ಪುಟ್ನಿಕ್-ವಿ ಲಸಿಕೆಯು ಎಲ್ಲಾ ಲಸಿಕೆಗಳಿಗಿಂತ ಸುರಕ್ಷಿತ ಎಂದು ಅರ್ಜೆಂಟಿನಾದ ಬ್ಯೂನೊಸ್ ಏರಿಸ್​ ಆರೋಗ್ಯ ಸಚಿವಾಲಯದ ಅಧ್ಯಯನದಲ್ಲಿ ತಿಳಿದು ಬಂದಿದೆ.

ಬ್ಯೂನೊಸ್ ಏರಿಸ್‌ ಪ್ರಾಂತ್ಯದಲ್ಲಿ ಬಳಸಲಾದ ಮಿಕ್ಕೆಲ್ಲಾ ಕೊರೊನಾ ಲಸಿಕೆಗಳಿಗಿಂತ ಸ್ಫುಟ್ನಿಕ್ ವಿ ಲಸಿಕೆ ಅತ್ಯಂತ ಹೆಚ್ಚು ಸುರಕ್ಷಿತ ಎಂದು ವರದಿಗಳಿಂದ ದೃಢಪಡಿಸಲಾಗಿದೆ. ಸ್ಫುಟ್ನಿಕ್ ವಿ ಲಸಿಕೆಗೆ ಸಂಬಂಧಿಸಿದಂತೆ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. ಜ್ವರ, ತಲೆನೋವು, ಮೈ ಕೈ ನೋವಿನಂಥ ಪರಿಣಾಮಗಳು ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ಅಧ್ಯಯನ ಹೇಳಿದೆ ಎಂದು ವರದಿಯಾಗಿದೆ.

The post ಸ್ಪುಟ್ನಿಕ್-ವಿ ಲಸಿಕೆ ಅತೀ ಹೆಚ್ಚು ಸುರಕ್ಷಿತ ಎಂದ ಅಧ್ಯಯನ appeared first on News First Kannada.

Source: newsfirstlive.com

Source link